vishwakarma yojana-2023: ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯಿಂದ ಶೇ 5 ಬಡ್ಡಿದರದಲ್ಲಿ ಸಾಲ ಮತ್ತು ಕೌಶಲ್ಯ ತರಬೇತಿ ಪಡೆಯಲು ಅರ್ಜಿ ಆಹ್ವಾನ!
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
18 ವಿವಿಧ ವೃತ್ತಿಯ ಕುಶಲಕರ್ಮಿಗಳನ್ನು ಗುರುತಿಸಿ ಅವರ ವೃತ್ತಿ ಅಭಿವೃದ್ಧಿಗಾಗಿ ಸೂಕ್ತ ತರಬೇತಿ ನೀಡಿ , ಆರ್ಥಿಕ ಸೌಲಭ್ಯ, ಡಿಜಿಟಲ್ ಸೌಲಭ್ಯದೊಂದಿಗೆ ಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸಲು ಈ ಯೋಜನೆಯನ್ನು ಕೇಂದ್ರ ಸರಕಾರದಿಂದ ಜಾರಿಗೆ ತರಲಾಗಿದೆ.
ವಯಸ್ಸು 18 ವರ್ಷ ತುಂಬಿರಬೇಕು ನಿಗದಿಪಡಿಸಿದ ವೃತ್ತಿಗಳಲ್ಲಿ ಕೆಲಸ ಮಾಡುತ್ತಿರುವವರು ಮಾತ್ರ ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು, ಇದುವರೆಗೂ ಕೇಂದ್ರ ರಾಜ್ಯ ಸರ್ಕಾರದ ಯಾವುದೇ ಯೊಜನೆಗಳಲ್ಲಿ ಈ ರೀತಿಯ ಸಾಲ ಸೌಲಭ್ಯ ಪಡೆದಿರಬಾರದು, ಸರ್ಕಾರಿ ನೌಕರರ ಕುಟುಂಬದ ಸದಸ್ಯರು ಅರ್ಹರಲ್ಲ.
ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!
Vishwakarma yojana-ಯೋಜನೆಯ ಪ್ರಯೋಜನಗಳು:
- ವಿಶ್ವಕರ್ಮ ಸಹೋದರರು ಮತ್ತು ಸಹೋದರಿಯರಿಗೆ ರೂ.3 ಲಕ್ಷದವರೆಗೆ ಜಾಮೀನುರಹಿತ ಸಾಲ ಸೌಲಭ್ಯ.
- ರೂ.15 ಸಾವಿರ ಮೊತ್ತದ ಉಪಕರಣಗಳು.
- ಕೌಶಲಾಭಿವೃದ್ಧಿಗಾಗಿ ತರಬೇತಿ ಮತ್ತು ಪ್ರತಿದಿನ ರೂ.500 ಸ್ಟೈಫಂಡ್.
- ಗುಣಮಟ್ಟದ ತರಬೇತಿ ಮತ್ತು ಪ್ರಮಾಣಪತ್ರ, ಬ್ರಾಂಡಿಂಗ್ ಮತ್ತು ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಜಾಹೀರಾತು ಸೇರಿ ಮಾರ್ಕೆಂಟಿಂಗ್ ನೆರವು.
How can apply for vishwakarma yojana- ಯಾರೆಲ್ಲ ಅರ್ಜಿ ಸಲ್ಲಿಸಬವುದು?
ಬಡಗಿ, ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಅಕ್ಕಸಾಲಿಗ, ಶಿಲ್ಪಿ, ಟೈಲರ್, ಗಾರೆ,ಕ್ಷೌರಿಕ,ದೋಬಿ, ಗೊಂಬೆ ತಯಾರಿಕೆ, ಹೊರಕೆ ತಯಾರಿಕೆ/ತೆಂಗುನಾರಿನ ಚಾಪೆ ತಯಾರಿಕೆ, ಬುಟ್ಟಿ ತಯಾರಿಕೆ, ಮೀನು ಬಲೆ ಮಾಡುವವರು, ರಕ್ಷಾ ಕವಚ ತಯಾರಕರು, ದೋಣಿ ತಯಾರಕರು, ಬೀಗ ತಯಾರಕರು, ಹೂವಿನ ಹಾರ ತಯಾರಕರು.
ಇದನ್ನೂ ಓದಿ: Micro credit loan scheme- ಪ್ರೇರಣಾ ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!
vishwakarma yojana loan amount-ಈ ಯೋಜನೆಯಡಿ ಎಷ್ಟು ಸಾಲ ಪಡೆಯಬವುದು?
ಬ್ಯಾಂಕ್ ನಿಂದ ಶೇ 5 ರ ಬಡ್ಡಿ ದರದಲ್ಲಿ 2 ಹಂತಗಳಲ್ಲಿ ಸಾಲ - ಮೊದಲ ಹಂತದಲ್ಲಿ ಗರಿಷ್ಠ ರೂ 1 ಲಕ್ಷ 18 ತಿಂಗಳ ಮರುಪಾವತಿ.
ಎರಡನೇ ಹಂತದಲ್ಲಿ ಗರಿಷ್ಠ ರೂ 2 ಲಕ್ಷ. 30 ತಿಂಗಳ ಮರುಪಾವತಿಗೆ ಅವಕಾಶ ಮಾಡಿಕೊಡಲಾಗಿದೆ.
vishwakarma yojana Application- ಎಲ್ಲಿ ಅರ್ಜಿ ಸಲ್ಲಿಸಲ್ಲಿಸಬೇಕು?
ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (Common Service Centre) ಭೇಟಿ ಮಾಡಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
Required documents for vishwakarma yojana- ಅರ್ಜಿ ಸಲ್ಲಿಸ ಒದಗಿಸಬೇಕಾದ ದಾಖಲಾತಿಗಳು?
- ಮೊಬೈಲ್ ನಂಬರ್ ಲಿಂಕ್ ಇರುವ ಆಧಾರ್ ಕಾರ್ಡ.
- ಬ್ಯಾಂಕ್ ಪಾಸ್ ಪುಸ್ತಕ ಪ್ರತಿ.
- ರೇಶನ್ ಕಾರ್ಡ ಪ್ರತಿ.
- ಪೋಟೋ.
ಇದನ್ನೂ ಓದಿ: Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ:
ಆಸಕ್ತ ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮತ್ತು ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಕೈಗಾರಿಕಾ ಕೇಂದ್ರದ ಮುಖ್ಯಸ್ಥರನ್ನು ಭೇಟಿ ಮಾಡಿ ಎಂದು ಈ ಕುರಿತು ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.