Weather update: ರಾಜ್ಯದಲ್ಲಿ ಮಳೆ ಚುರುಕಾಗುವ ಸಾಧ್ಯತೆ!
Weather forecast: ಈ ಅಂಕಣದಲ್ಲಿ ರಾಜ್ಯದ ಮಳೆ ಮುನ್ಸೂಚನೆ(rain) ಕುರಿತು ದೀರ್ಘ ವ್ಯಾಪ್ತಿಯ ಹವಾಮಾನ(weather) ಮುನ್ಸೂಚನೆಯ ವಿವರವನ್ನು ತಿಳಿಸಲಾಗಿದೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಬಾರದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜುಲೈ ತಿಂಗಳನ್ನು ಹೊರತುಪಡಿಸಿದರೆ ಜೂನ್ , ಆಗಸ್ಟ್ ತಿಂಗಳುಗಳಲ್ಲಿ ಮಳೆ ಪ್ರಮಾಣದ ತುಂಬಾ ಕಡಿಮೆ ಬಂದಿರುತ್ತದೆ.
ಇನ್ನು ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಬಿತ್ತನೆ ಮಾಡಿದ ಬೆಳೆ ಶೇ 75-80 ರಷ್ಟು ಹಾನಿಯಾಗಿದ್ದು ಫಸಲು ತೆಗೆಯುವ ಯಾವ ನಿರೀಕ್ಷೆಯು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಇನ್ನಾದರು ಸೆಪ್ಟ್ಂಬರ್-ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾದರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆ ಬೆಳೆಯುವ ರೈತರಿಗೆ ಮುಂದಿನ ತಿಂಗಳುಗಳಲ್ಲಿ ಬೆಳೆಗಲಿಗೆ ನೀರು ಒದಗಿಸಲು ಅನೂಕುಲವಾಗುತ್ತದೆ ಮತ್ತು ಇತರೆ ರೈತರು ಹಿಂಗಾರಿ ಹಂಗಾಮಿನಲ್ಲಿ ಯಾದರು ಬೆಳೆ ಬೆಳೆಯಲು ಸಹಾಯಕವಾಗುತ್ತದೆ.
ಮಳೆ ಮುನ್ಸೂಚನೆ ಕುರಿತು ಹವಾಮಾನ ಮುನ್ಸೂಚನೆ ತಜ್ಞರು ನೀಡಿರುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Mojini Services: ಇನ್ನು ಮುಂದೆ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ನಗರದ ಕಚೇರಿಗೆ ಹೊಗಬೇಕಿಲ್ಲ!
ದೀರ್ಘ ವ್ಯಾಪ್ತಿಯ ಹವಾಮಾನ ಮುನ್ಸೂಚನೆಗಳು ವಿವರ ಹೀಗಿದೆ:
ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಲಿದ್ದು(ಸೆಪ್ಟೆಂಬರ್ 1-4) ಇದರಿಂದಾಗಿ ಪಶ್ಚಿಮ ಮಾರುತಗಳು (Westerlies) ಬಲಗೊಳ್ಳಲಿವೆ.
ಮ್ಯಾಡೆನ್-ಜೂಲಿಯನ್ ಆಸಿಲೇಷನ್ (MJO) ಮತ್ತು ಮೊಂನ್ಸೂನ್ ಇಂಟ್ರಾ ಸೀಸನಲ್ ಆಸಿಲೇಷನ್(MISO) ಹಿಂದೂ ಮಹಾ ಸಾಗರಕ್ಕೆ ಮರಳಲಿದ್ದು ಇದು ಮುಂಗಾರು ಮಳೆಯನ್ನು ಚುರುಕುಗೊಳಿಸಲಿದೆ. ಇಷ್ಟು ದಿನ ಎಲ್ ನಿನೋ ಮತ್ತು MJO ನಿಗ್ರಹದಿಂದಾಗಿ(El Nino &MJO Suppression) ಮುಂಗಾರು ತೀವ್ರವಾಗಿ ಕುಂಠಿತಗೊಂಡಿತ್ತಾದರೂ ಹಿಂದೂ ಮಹಾ ಸಾಗರಕ್ಕೆ ಮರಳುತ್ತಿರುವ MJO & MISO ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯ ಮಳೆಯ ಸೂಚನೆಗಳನ್ನು ಕೊಡುತ್ತಿದ್ದು, ಕೃಷಿಕರಲ್ಲಿ ಆಶಾಕಿರಣ ಮೂಡಿಸಲಿದೆ.
ಆಗಸ್ಟ್ 30 ರಿಂದ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆಗಳಿದ್ದು, ಸೆಪ್ಟೆಂಬರ್ 5ರ ವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಾಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 21ವರೆಗೆ ಮುಂಗಾರು ಶಕ್ತಗೊಳ್ಳಲಿದ್ದು ಉತ್ತಮ ಮುಂಗಾರು ಮಳೆಯಾಗುವ ಲಕ್ಷಣಗಳಿವೆ. ಸೆಪ್ಟೆಂಬರ್ 12-14ರ ವೇಳೆ ದಕ್ಷಿಣ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳು ಸಹ ಇದೆ. ಈ ವೇಳೆ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಇದೇ ವೇಳೆ ಉತ್ತರ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯದಿಂದ-ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.
ಕರ್ನಾಟಕದಲ್ಲೆಡೆ ಸೆಪ್ಟೆಂಬರ್ ತಿಂಗಳಿನ 2ನೇ ಮತ್ತು 3ನೇ ವಾರ ಉತ್ತಮ ಮಳೆಯಾಗಲಿದ್ದು, ಆಣೆಕಟ್ಟುಗಳು ತುಂಬುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ ತಿಂಗಳಿನ ಕೊನೆಗೆ ಧನಾತ್ಮಕ ಹಿಂದೂ ಮಹಾಸಾಗರದ ದ್ವಿಧ್ರುವಿ (PIOD- Positive Indian Ocean Dipole) ಅರಬ್ಬೀ ಸಮುದ್ರಕ್ಕೆ ಮರಳಲಿದ್ದು ಇದು ಈಶಾನ್ಯ ಮಾನ್ಸೂನ್(ಹಿಂಗಾರು) ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.
ಮುಂದಿನ 2 ವಾರದ ರಾಜ್ಯದ ಮಳೆ ಮುನ್ಸೂಚನೆ ನಕ್ಷೆ:
ನಕ್ಷೆ-1: 27 ಆಗಸ್ಟ್ 2023 ರಿಂದ 04 ಸೆಪ್ಟಂಬರ್ 2023 ರವರೆಗೆ:
ನಕ್ಷೆ-2: 04 ಸೆಪ್ಟಂಬರ್ 2023 ರಿಂದ 12 ಸೆಪ್ಟಂಬರ್ 2023 ರವರೆಗೆ:
ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:
ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?
ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.
ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?
ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು
ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.
ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!