2nd PUC Result-2026: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

April 9, 2026 | Siddesh
2nd PUC Result-2026: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!
Share Now:

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು(2nd PUC Result-2026) ಇಂದು, ಅಂದರೆ ಏಪ್ರಿಲ್ 9, 2026 ರಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ಮಧ್ಯಾಹ್ನ 3:00 ಗಂಟೆಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದ ಫಲವನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ.

ಈ ವರ್ಷದ ಪರೀಕ್ಷಾ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದ್ದು, ಮೌಲ್ಯಮಾಪನ ಕಾರ್ಯ ಮುಗಿದ ಬೆನ್ನಲ್ಲೇ ಮಂಡಳಿಯು ಫಲಿತಾಂಶ(2nd PUC Result In Karnataka) ಘೋಷಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಫಲಿತಾಂಶದ ಜೊತೆಗೆ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಸುಲಭವಾಗಿ ವಿತರಿಸಲು ಈ ಬಾರಿ ತಂತ್ರಜ್ಞಾನದ ನೆರವನ್ನು ಪಡೆಯಲಾಗಿದೆ. ವಿದ್ಯಾರ್ಥಿಗಳು ಆತಂಕಪಡದೆ ನಿಗದಿತ ಸಮಯಕ್ಕೆ ಸರಿಯಾಗಿ ಅಂತರ್ಜಾಲದ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Toll Plazas New Rules-ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ನಗದು ವ್ಯವಹಾರಕ್ಕೆ ಬ್ರೇಕ್: ಏಪ್ರಿಲ್ 10 ರಿಂದ ಹೊಸ ನಿಯಮ ಜಾರಿ!

ವಿಶೇಷವೆಂದರೆ, ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇವಲ ವೆಬ್‌ಸೈಟ್ ಮಾತ್ರವಲ್ಲದೆ, ಮೊಬೈಲ್ ಆಪ್ ಮತ್ತು ಡಿಜಿಲಾಕರ್ ಮೂಲಕವೂ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಬರೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ ಮೂಲಕವೂ ಫಲಿತಾಂಶದ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಆಧುನಿಕ ಕ್ರಮವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೆಚ್ಚಿನ ನೆರವಾಗಲಿದೆ.

2nd PUC Exam Date-2026: ಪರೀಕ್ಷೆ ನಡೆದ ದಿನಾಂಕ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ರಾಜ್ಯದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಈ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿದೆ.

ಇದನ್ನೂ ಓದಿ: HSRP Number Plate-ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ: ಸಾರಿಗೆ ಇಲಾಖೆಯ ಖಡಕ್ ಸೂಚನೆ!

2nd PUC Result

ಇದನ್ನೂ ಓದಿ: SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!

2nd PUC Result Details-ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ-ಅಂಶ:

ರಾಜ್ಯದಲ್ಲಿ ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದು ಇನ್ನಿತರೆ ಅಂಕಿ-ಅಂಶ ವಿವರ ಈ ಕೆಳಗಿನಂತಿದೆ:

  • ಒಟ್ಟು ವಿದ್ಯಾರ್ಥಿಗಳು/Total Candidates: 7,10,363
  • Fresh Candidates: 6,46,801
  • ಮರು ಪರೀಕ್ಷೆ ಬರೆದವರು/Repeaters: 50,540
  • ಖಾಸಗಿ ವಿದ್ಯಾರ್ಥಿಗಳು/Private Candidates: 13,022
  • ಒಟ್ಟು ಪರೀಕ್ಷಾ ಕೇಂದ್ರಗಳು/Exam Centers: 1,217
  • ವಿಜ್ನಾನ ವಿಷಯದ ವಿದ್ಯಾರ್ಥಿಗಳು/Science: 2,92,645
  • ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು/Commerce: 2,11,174
  • ಕಲಾ ವಿಭಾಗದ ವಿದ್ಯಾರ್ಥಿಗಳು/Arts: 1,42,982

ಇದನ್ನೂ ಓದಿ: FID Number-ರಸಗೊಬ್ಬರ ಮಾಫಿಯಾಗೆ ‘ಫ್ರೂಟ್ಸ್’ ಬ್ರೇಕ್: ಇನ್ಮುಂದೆ FID ನಂಬರ್ ಇದ್ದರೆ ಮಾತ್ರ ಗೊಬ್ಬರ!

2nd PUC Result Website Link-ಪಲಿತಾಂಶವನ್ನು ನೋಡಲು ವಿವಿಧ ಮಾರ್ಗಗಳು:

ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ವಿಧಾನಗಳ ಮೂಲಕ ತಮ್ಮ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು:

ಅಧಿಕೃತ ವೆಬ್‌ಸೈಟ್: www.karresults.nic.in ಭೇಟಿ ನೀಡಿ ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿ.

ಇದನ್ನೂ ಓದಿ: Voter List-2026: ಪರಿಷ್ಕೃತ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

2nd PUC Result-2026

ಇದನ್ನೂ ಓದಿ: Free Tailoring Course-ಮಹಿಳೆಯರಿಗೆ ಉಚಿತ ಟೈಲರಿಂಗ್‌ ತರಬೇತಿಗಾಗಿ ಅರ್ಜಿ ಆಹ್ವಾನ!

ಡಿಜಿಲಾಕರ್ (DigiLocker): ಈ ವರ್ಷ ಪ್ರಥಮ ಬಾರಿಗೆ ಮಧ್ಯಾಹ್ನ 3:00 ಗಂಟೆಯಿಂದ ಡಿಜಿಲಾಕರ್ ಮೂಲಕ ಡಿಜಿಟಲ್ ಅಂಕಪಟ್ಟಿ (Marks Card) ಪಡೆಯಬಹುದು. ವೆಬ್‌ಸೈಟ್: www.digilocker.gov.in

ಮೊಬೈಲ್ ಆಪ್: 'KarnatakaOne' ಮೊಬೈಲ್ ಆಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.

ನೇರ ಸಂದೇಶ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಅಥವಾ ಎಸ್‌ಎಂಎಸ್ (SMS) ಮೂಲಕ ಮಂಡಳಿಯು ಫಲಿತಾಂಶವನ್ನು ರವಾನಿಸಲಿದೆ.

ಕಾಲೇಜುಗಳಲ್ಲಿ: ಆಯಾ ಕಾಲೇಜುಗಳಲ್ಲೂ ಸಹ ಇಂದು ಮಧ್ಯಾಹ್ನ 3:00 ಗಂಟೆಯ ನಂತರ ಫಲಿತಾಂಶದ ಪಟ್ಟಿ ಲಭ್ಯವಿರುತ್ತದೆ

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: