Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

August 17, 2025 | Siddesh
Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!
Share Now:

ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ನಿಗಮಗಳಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ರೈತರಿಗೆ ನೀರಾವರಿ ಸೌಲಭ್ಯವನ್ನು(Borewell Subsidy Scheme) ಒದಗಿಸಲು ಕೊಳವೆ ಭಾವಿಯನ್ನು ಕೊರೆಸಲು ಸಹಾಯಧನವನ್ನು ಪಡೆಯಲು ಅರ್ಹ ರೈತರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರೈತರು ಕೃಷಿ ಬೆಳೆಗಳ ಜೊತೆಗೆ ಇನ್ನು ಅಧಿಕ ಆದಾಯವನ್ನು ಪಡೆಯಲು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನೀರಾವರಿ ಸೌಲಭ್ಯಕ್ಕಾಗಿ ಬೋರ್ವೆಲ್ ಅನ್ನು(Ganga Kalyana Yojana Application) ಕೊರೆಸಲು ಸಬ್ಸಿಡಿಯನ್ನು ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಡಿ ಅವಕಾಶವಿದ್ದು ಈ ಯೋಜನೆಯ ಪ್ರಯೋಜವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: UPSC Free Coaching-ಉಚಿತ UPSC ಮತ್ತು KAS ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ!

ಗಂಗಾ ಕಲ್ಯಾಣ ಯೋಜನೆಯಡಿ ರೈತರು ಕೊಳವೆ ಭಾವಿ/ಬೋರ್ವೆಲ್ ಅನ್ನು ಕೊರೆಸಲು ಎಷ್ಟು ಸಬ್ಸಿಡಿ(Borewell Subsidy Yojana)ನೀಡಲಾಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Ganga Kalyana Subsidy-ಬೋರ್ವೆಲ್ ಗೆ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು:

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಹ ರೈತರು ಬೋರ್ವೆಲ್ ಅನ್ನು ಕೊರೆಸಲು ಸಹಾಯಧನವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.

  • ಅರ್ಜಿದಾರ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಕ್ಕೆ ಸಂಬಂಧಪಟ್ಟ ವರ್ಗಕ್ಕೆ ಸೇರಿದ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಈ ಹಿಂದಿನ ವರ್ಷಗಳಲ್ಲಿ ಈ ಯೋಜನೆಯಡಿ ಸಹಾಯಧನವನ್ನು ಪಡೆದಿರುವ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
  • 1.20 ರಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರು ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿದಾರರು ಕನಿಷ್ಠ 21 ವರ್ಷಗಳು ಪೂರ್ಣಗೊಂಡಿರಬೇಕು ಗರಿಷ್ಠ ವಯೋಮಿತಿ ತೆಗೆದು ಹಾಕಲಾಗಿದೆ.

ಇದನ್ನೂ ಓದಿ: Kotak Mahidra Scholarship-ಮಹೀಂದ್ರ ಗ್ರೂಪ್ ನಿಂದ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹1.5 ಲಕ್ಷ ಸ್ಕಾಲರ್‌ಶಿಪ್!

  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು, ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರಬಾರದು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗಕ್ಕೆ ರೂ 1.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿರುವವರಿಗೆ ರೂ 2.00 ಲಕ್ಷ ಮೀರಿರಬಾರದು.
  • ವಿಕಲಚೇತನರಾಗಿದ್ದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಸಲ್ಲಿಸುವುದು.
  • ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಹಾಗೂ ನೀರಾವರಿ ಸೌಲಭ್ಯ ಹೊಂದಿರಬಾರದು.

ಇದನ್ನೂ ಓದಿ: Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ganga kalyana

Ganga Kalyana Yojana Subsidy-ಎಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ?

ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು(ಗ್ರಾ), ಬೆಂಗಳೂರು(ನಗರ), ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೆಳಗೆ ಕುಸಿದಿರುವುದರಿಂದ ಈ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ 4.75 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಲ್ಲಿ ರೂ 4.25 ಲಕ್ಷ ಸಹಾಯಧನವಿದ್ದು, ಉಳಿದ ರೂ 50,000/- ಅವಧಿ ಸಾಲವಾಗಿರುತ್ತದೆ.

ಇತರೆ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ 3.75 ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ ರೂ.3.25 ಲಕ್ಷ ಸಹಾಯಧನ ಮತ್ತು ರೂ 50,000/- ಅವಧಿಸಾಲವಾಗಿರುತ್ತದೆ. ಘಟಕ ವೆಚ್ಚದ ಪೈಕಿ ವಿದ್ಯುದ್ದೀಕರಣಕ್ಕೆ ಘಟಕ ವೆಚ್ಚದ ಸಹಾಯಧನದ ಮಿತಿಯಲ್ಲಿ ಪ್ರತಿ ಕೊಳವೆಬಾವಿಗೆ ರೂ 75,000/-ಗಳನ್ನು ಸಂಬಂಧಿಸಿದ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ನಿಗಮದ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Ganga Kalyana Subsidy Application Last Date-ಅರ್ಹ ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Free Phenyl Soap Making Training-ಉಚಿತ ಫಿನಾಯಿಲ್,ಸೋಪ್ ಗೃಹ ಬಳಕೆ ವಸ್ತು ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

How To Apply For Ganga Kalyana Scheme Subsidy-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ರೈತರು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ನಿಮ್ಮ ಮೊಬೈಲ್ ನಲ್ಲೇ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Ganga Kalyana Online Application-ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?

Step-1: ರೈತರು ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಮೊದಲಿಗೆ "Ganga Kalyana Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Best Farmer Award-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ವಿತರಣೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Step-2: ನಂತರ ಈ ಪೇಜ್ ನಲ್ಲಿ "ಇಲಾಖೆಗಳು ಮತ್ತು ಸೇವೆ" ಬಟನ್ ಮೇಲೆ ಕ್ಲಿಕ್ ಮಾಡಿ ಬಲಬದಿಯಲ್ಲಿ ಕಾಣುವ ಸರ್ವ್ ಕಾಲಂ ನಲ್ಲಿ "ಗಂಗಾ ಕಲ್ಯಾಣ ಯೋಜನೆ" ಎಂದು ಸರ್ವ್ ಮಾಡಿದರೆ ಅರ್ಜಿ ನಮೂನೆ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ "ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಿ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!

Required Documents For Ganga Kalyana Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಬೋರ್ವೆಲ್ ಕೊರೆಸಲು ಸಬ್ಸಿಡಿಯನ್ನು ಪಡೆಯಲು ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಳಗೆ ತಿಳಿಸಿರುವ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

  • ಅರ್ಜಿದಾರರ ರೈತರ ಆಧಾರ್‌ ಕಾರ್ಡ್‌/Adhar
  • ಅರ್ಜಿದಾರರ ರೇಷನ್ ಕಾರ್ಡ/Ration Card
  • ಅರ್ಜಿದಾರರ ವೋಟರ್ ಐಡಿ/Voter ID
  • ರೈತರ ಜಾತಿ ಮತ್ತು ಆದಾಯ ಪ್ರಮಾಣಪತ್ರ/Caste And Income Certificate
  • ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿಲ್ಲವೆಂದು ಸ್ವಯಂ ಘೋಷಣೆ ಪತ್ರ.
  • ಇತ್ತೀಚಿನ ಪೋಟೋ/Photo
  • ಸಣ್ಣ ಮತ್ತು ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣ ಪತ್ರ
  • ಪಹಣಿ/ಊತಾರ್/RTC
  • ವಿಕಲಚೇತನರಾಗಿದ್ದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ.

Ganga Kalyana Helpline Number-ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ನಿಗಮದ ಜಾಲತಾಣ-Click Here ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್-Apply Now
ಸಹಾಯವಾಣಿ- 9482300400

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: