Speed Post-ಅಂಚೆ ಇಲಾಖೆಯಿಂದ ಅಕ್ಟೋಬರ್ 01 ರಿಂದ ಸ್ಪೀಡ್ ಪೋಸ್ಟ್ ನಲ್ಲಿ ಮಹತ್ವದ ಬದಲಾವಣೆ!

September 28, 2025 | Siddesh
Speed Post-ಅಂಚೆ ಇಲಾಖೆಯಿಂದ ಅಕ್ಟೋಬರ್ 01 ರಿಂದ ಸ್ಪೀಡ್ ಪೋಸ್ಟ್ ನಲ್ಲಿ ಮಹತ್ವದ ಬದಲಾವಣೆ!
Share Now:

ಭಾರತೀಯ ಅಂಚೆ ಇಲಾಖೆಯಿಂದ(Indian Post)ದೇಶನ ನಾಗರಿಕರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಗತ್ಯ ದಾಖಲೆ ಮತ್ತು ವಸ್ತುಗಳನ್ನು ತಲುಪಿಸಲು ಸ್ಪೀಡ್ ಪೋಸ್ಟ್ ಸೇವೆಯನ್ನು ಪ್ರಸ್ತುತ ಒದಗಿಸುತ್ತಿದ್ದು ಈ ಸೇವೆಯನ್ನು ಇನ್ನು ಪರಿಣಾಮಕಾರಿ ಹಾಗೂ ಪಾರದರ್ಶಕವಾಗಿ ಜಾರಿಗೆ ತಲುವ ನಿಟ್ಟಿನಲ್ಲಿ ಅಂಚೆ ಇಲಾಖೆಯಿಂದ ನೂತನ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಸ್ಪೀಡ್ ಪೋಸ್ಟ್ ಸೇವೆಗೆ ಡಿಜಿಟಲ್ ಸ್ಪರ್ಶವನ್ನು(Speed Post Service)ನೀಡಿದ್ದು ಇನ್ನು ಮುಂದೆ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ದೇಶಾದ್ಯಂತ ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ವೇಗದ ಮತ್ತು ವಿಶ್ವಾಸಾರ್ಹವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಅಂಚೆ ಇಲಾಖೆಯು ಆಗಸ್ಟ್ 1, 1986 ರಂದು ಸ್ಪೀಡ್ ಪೋಸ್ಟ್ ಅನ್ನು ಪರಿಚಯಿಸಿತು. ಇಂಡಿಯಾ ಪೋಸ್ಟ್‌ನ ಆಧುನೀಕರಣದ ಪ್ರಯತ್ನಗಳ ಭಾಗವಾಗಿ ಪ್ರಾರಂಭಿಸಲಾದ ಈ ಸೇವೆಯನ್ನು ಸಮಯಕ್ಕೆ ಅನುಗುಣವಾಗಿ, ಪರಿಣಾಮಕಾರಿ ಮತ್ತು ಸುರಕ್ಷಿತವಾದ ಸೇವೆಯನ್ನು ಒದಗಿಸುತ್ತಾ ಬಂದಿದೆ.

ಇದನ್ನೂ ಓದಿ: Narega Job Card-ನರೇಗಾ ಯೋಜನೆ ಜಾಬ್ ಕಾರ್ಡಗೆ ಇ-ಕೆವೈಸಿ ಕಡ್ಡಾಯ!

ಕಾಲಕ್ರಮೇಣ, ಸ್ಪೀಡ್ ಪೋಸ್ಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ, ಖಾಸಗಿ ಕೊರಿಯರ್ ಕಂಪನಿಗಳ ವಿರುದ್ಧ ಸೆಡ್ಡು ಹೊಡೆದು ನಿಂತಿದೆ. ಪ್ರಾರಂಭದಿಂದಲೂ, ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸ್ಪೀಡ್ ಪೋಸ್ಟ್ ವಿಕಸನಗೊಳ್ಳುತ್ತಲೇ ಇದೆ.

Speed Post-ಸ್ಪೀಡ್ ಪೋಸ್ಟ್ ಗೆ ಡಿಜಿಟಲ್ ಸ್ಪರ್ಶ:

ವಿಶ್ವಾಸಾರ್ಹತೆ, ಭದ್ರತೆ ಮತ್ತು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಕೆಳಗಿನ ಹೊಸ ವೈಶಿಷ್ಟ್ಯಗಳೊಂದಿಗೆ ಇದನ್ನು ಈಗ ನವೀಕರಿಸಲಾಗಿದೆ:

  • OTP ಆಧಾರಿತ ಸುರಕ್ಷಿತ ವಿತರಣೆ
  • ಆನ್‌ಲೈನ್ ಪಾವತಿ ಸೌಲಭ್ಯ
  • SMS ಆಧಾರಿತ ಬಟವಾಡೆ ಅಧಿಸೂಚನೆಗಳು
  • ಅನುಕೂಲಕರ ಆನ್‌ಲೈನ್ ಬುಕಿಂಗ್ ಸೇವೆಗಳು
  • ಪ್ರತಿ ಹಂತದಲ್ಲೂ ಸ್ಪೀಡ್ ಪೋಸ್ಟ್ ಯಾವ ಸ್ಥಳದಲ್ಲಿದೆ ಎನ್ನುವುದರ ಕುರಿತು ಅಪ್‌ಡೇಟ್‌ಗಳನ್ನು ಗ್ರಾಹಕರು ಪಡೆಯಬಹುದು.
  • ಇಚ್ಛಿತ ಬಳಕೆದಾರರಿಗೆ ನೋಂದಣಿ ಸೌಲಭ್ಯ

ಇದನ್ನೂ ಓದಿ: Caste Survey-ಮೊಬೈಲ್ ನಲ್ಲೇ ಜಾತಿಗಣತಿ ಸಮೀಕ್ಷೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಒಳನಾಡಿನ ಸ್ಪೀಡ್ ಪೋಸ್ಟ್‌ನ ದರವನ್ನು ಕಳೆದ ಬಾರಿ ಅಕ್ಟೋಬರ್ 2012 ರಲ್ಲಿ ಪರಿಷ್ಕರಿಸಲಾಯಿತು. ಸುಧಾರಣೆಯನ್ನು ನಿರ್ವಹಿಸಲು, ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸಲು ಮತ್ತು ಹೊಸ ಆವಿಷ್ಕಾರಗಳಲ್ಲಿ ಹೂಡಿಕೆ ಮಾಡಲು, ಸ್ಪೀಡ್ ಪೋಸ್ಟ್‌ನ (ಕಾಗದ ಪತ್ರಗಳು) ದರಗಳನ್ನು ಈಗ ತರ್ಕಬದ್ಧವಾಗಿ ಪರಿಷ್ಕರಿಸಲಾಗಿದೆ. 25-09-2025 ರ ಗೆಜೆಟ್ ಅಧಿಸೂಚನೆ ಸಂಖ್ಯೆ 4256 ರಲ್ಲಿ ಸೂಚಿಸಿದಂತೆ ಪರಿಷ್ಕೃತ ಸುಂಕವು ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: Infosys Scholarship-ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

Speed Post

Speed Post Rati List-2025: ಪರಿಷ್ಕೃತ ಸ್ಪೀಡ್ ಪೋಸ್ಟ್ ದರ ವಿವಿರ ಹೀಗಿದೆ:

ತೂಕ/ದೂರಸ್ಥಳೀ
200
ಕಿ.ಮೀ.ವರೆಗೆ.
200 ರಿಂದ
500 ಕಿ.ಮೀ.
501 ರಿಂದ
1000 ಕಿ.ಮೀ.
1001 ರಿಂದ
2000 ಕಿ.ಮೀ.
2000
ಕಿ.ಮೀ.ಗಳಿಗಿಂತ
ಹೆಚ್ಚು
50 ಗ್ರಾಂ ವರೆಗೆ194747474747
51 ಗ್ರಾಂ ನಿಂದ 250 ಗ್ರಾಂ245963687277
251 ಗ್ರಾಂ ನಿಂದ 500 ಗ್ರಾಂ287075828693

ಇದನ್ನೂ ಓದಿ: Karnataka Jati Ganati-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಚುರುಕುಗೊಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Speed Post Price-ಪರಿಷ್ಕೃತ ಸ್ಪೀಡ್ ಪೋಸ್ಟ್ ದರ ಯಾವಾಗಿನಿಂದ ಜಾರಿ?

ಅಂಚೆ ಇಲಾಖೆಯು 01 ಅಕ್ಟೋಬರ್ 2025 ರಿಂದ ಪರಿಷ್ಕೃತ ಸ್ಪೀಡ್ ಪೋಸ್ಟ್ ದರವನ್ನು ಜಾರಿಗೆ ತರಲಿದೆ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.

ದಾಖಲೆಗಳು ಮತ್ತು ಪಾರ್ಸೆಲ್‌ಗಳೆರಡಕ್ಕೂ ಸ್ಪೀಡ್ ಪೋಸ್ಟ್ ಅಡಿಯಲ್ಲಿ ಮೌಲ್ಯವರ್ಧಿತ ಸೇವೆಯಾಗಿ ನೋಂದಣಿ ಸೌಲಭ್ಯವು ದೊರೆಯುತ್ತದೆ. ಗ್ರಾಹಕರಿಗೆ ವಿಶ್ವಾಸ ಮತ್ತು ವೇಗವನ್ನು ಒದಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಂಡು ವಿಳಾಸದಾರರಿಗೆ ನಿರ್ದಿಷ್ಟವಾದ ಸುರಕ್ಷಿತವಾದ ಸೇವೆಯನ್ನು ಒದಗಿಸಲು ಅಂಚೆ ಇಲಾಖೆ ಮುಂದಾಗಿದೆ.

Indina Post Website-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: