B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

October 22, 2025 | Siddesh
B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!
Share Now:

ರಾಜ್ಯ ಸರಕಾರದಿಂದ ಆಸ್ತಿಯ ಮಾಲೀಕರಿಗೆ(Land Owners) ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಬಿ-ಖಾತಾವನ್ನು ಹೊಂದಿರುವ ಆಸ್ತಿಯ ಮಾಲೀಕರು ಎ-ಖಾತಾ ದಾಖಲೆಯನ್ನು(A-Khata)ಪಡೆಯಲು ಆನ್ಲೈನ್ ನಲ್ಲೇ ಸ್ವಂತ ತಾವೇ ಅರ್ಜಿಯನ್ನು ಸಲ್ಲಿಸಬಹುದು.

ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರ್ಕಾರ ಬೆಂಗಳೂರು(Bangalore) ಆಸ್ತಿ ಮಾಲೀಕರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಬಿ-ಖಾತಾದಿಂದ ಎ-ಖಾತಾಗೆ(B-Khata To A-Khata) ಪರಿವರ್ತನೆ ಹಾಗೂ ಹೊಸ ನಿವೇಶನಗಳಿಗೆ ಎ–ಖಾತಾವನ್ನು ಇನ್ಮುಂದೆ ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(D K Shivakumar) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Best Farmer Award-ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!

ಈ ಅಂಕಣದಲ್ಲಿ ಸಾರ್ವಜನಿಕರು ಆನ್ಲೈನ್ ನಲ್ಲಿ ಎ-ಖಾತಾ ಪಡೆಯಲು(B-Khata To A-Khata Application) ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು ಯಾವುವು? ಇನ್ನಿತರೆ ಅವಶ್ಯಕ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದ್ದು ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ ಅಗತ್ಯವಿರುವವರಿಗೆ ಮಾಹಿತಿ ತಲುಪಿಸಲು ಸಹಕರಿಸಿ.

B-Khata To A-Khata Online Application-ಎ-ಖಾತಾ ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತ ಅಥವಾ ಕಂಪ್ಯೂಟರ್ ಸೆಂಟರ್ ನಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿ ಬಿಬಿಎಂಪಿಯ ಅಧಿಕೃತ https://bbmp.karnataka.gov.in/BtoAKhata ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಎ-ಖಾತಾವನ್ನು ಪಡೆಯಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "A-Khata Online Application" ಮಾಡಿ ಬಿಬಿಎಂಪಿಯ(BBPM) ಎ-ಖಾತಾ ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!

A-Khata Application

ಇದನ್ನೂ ಓದಿ: Parihara Farmers List-ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಬಿಡುಗಡೆ!

Step-2: ಇದಾದ ನಂತರ "Login" ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ ಅನ್ನು ಹಾಕಿ "Send OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ Vefity OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆ ಪೇಜ್ ಗೆ ಲಾಗಿನ್ ಅಗಬೇಕು.

Step-3: ಇಲ್ಲಿ "Creat New Request" ಬಟನ್ ಮೇಲೆ ಕ್ಲಿಕ್ ಮಾಡಿ "eKhata ID" ನಮೂದಿಸಿ "Fetch" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ eKYC verification ಮಾಡಬೇಕು. ಇಲ್ಲಿ ನಿಮ್ಮ ಜಾಗದ ವಿವರ ತೋರಿಸುತ್ತದೆ ಇದು ಸರಿಯಾಗಿದಿಯಾ? ಎಂದು ಒಮ್ಮೆ ಚೆಕ್ ಮಾಡಿ "Save and contiune" ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಇದಾದ ಬಳಿಕ Revenue Survey No Verificaton ಮತ್ತು DC Conversion Details ಮತ್ತು Order Copy ಅಪ್ಲೋಡ್ ಮಾಡಿ ಬಳಿಕ Property Use Type Selection ನಲ್ಲಿ ಎಲ್ಲಾ ವಿವರವನ್ನು ಭರ್ತಿ ಮಾಡಿ ಇತ್ಯಾದಿ ಸಂಪೂರ್ಣ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಗಮನಿಸಿ: ಸಾರ್ವಜನಿಕರು ಒಮ್ಮೆ ಈ ಮೇಲಿನ ಹಂತಗಳನ್ನು ಅನುಸರಿಸಿ ಆನ್ಲೈನ್ ನಲ್ಲಿ ಎ-ಖಾತಾ ದಿಂದ ಬಿ-ಖಾತಾ ಪರಿವರ್ತನೆಗೆ ಅರ್ಜಿಯನ್ನು ಸಲ್ಲಿಸಿದ ಬಳಿಕ 30 ದಿನದ ಒಳಗಾಗಿ ನಿಮ್ಮ ಅರ್ಜಿಯು ಪರಿಶೀಲನೆ ಕೈಗೊಂಡು ಅಧಿಕೃತ ದಾಖಲೆಗಳನ್ನು ಆನ್ಲೈನ್ ನಲ್ಲಿ ಪ್ರಿಂಟ್ ಪಡೆಯಬಹುದು.

ಇದನ್ನೂ ಓದಿ: Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

B-Khata To A-Khata Online Application

Documents For B-Khata To A-Khata Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಸಾರ್ವಜನಿಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಬಿ-ಖಾತಾ ದಿಂದ ಎ-ಖಾತಾವನ್ನು ಪಡೆಯಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ.

ಅರ್ಜಿದಾರರ ಅಧಾರ್ ಕಾರ್ಡ
ಇ-ಖಾತಾ ಐಡಿ
ಜಮೀನಿ ಪರಿವರ್ತನೆಗೆ ಡಿಸಿ ಆದೇಶ ಪ್ರತಿ
ಜಾಗದ ನಕ್ಷೆ
ರಸ್ತೆಯ ವಿವರ
ಮೊಬೈಲ್ ನಂಬರ್ ಮತ್ತು ಒಟಿಪಿ

ಇದನ್ನೂ ಓದಿ: SBI Scholarship Application-ಎಸ್.ಬಿ.ಐ ಫೌಂಡೇಶನ್ ವತಿಯಿಂದ ₹75,000/- ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

B-Khata To A-Khata Application Procces-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಒಮ್ಮೆ ಸಾರ್ವಜನಿಕರು ತಮ್ಮ ಜಾಗ ಅಗತ್ಯ ವಿವರವನ್ನು ಒದಗಿಸಿ ಮೇಲಿನ ಹಂತವನ್ನು ಅನುಸರಿಸಿ ಎ-ಖಾತಾ ಪಡೆಯಲು ಅಗತ್ಯ ವಿವರ ಮತ್ತು ಶುಲ್ಕವನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ, ಬಿಬಿಎಂಪಿಯ ಅಧಿಕಾರಿಗಳು ನಿಮ್ಮ ಆಸ್ತಿಯಿರುವ ಸ್ಥಳವನ್ನು ಭೇಟಿ ಮಾಡಿ ಸ್ಥಳ ಪರೀಶಿಲನೆ ಮಾಡಿ ಅರ್ಹ ಅರ್ಜಿದಾರರಿಗೆ ಎ-ಖಾತಾವನ್ನು ಆನ್ಲೈನ್ ನಲ್ಲೇ ವಿತರಣೆ ಮಾಡಲಾಗುತ್ತದೆ.

2000 ಚ. ಮೀ ಮೇಲಿರುವ ಜಾಗಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ:

ಪ್ರಸ್ತುತ https://bbmp.karnataka.gov.in/BtoAKhata ಈ ತಂತ್ರಾಶದ ಮೂಲಕ 2000 ಚ. ಮೀ ಒಳಗಿನ ನಿವೇಶನಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು 2000 ಚ. ಮೀ ಮೇಲಿರುವ ಜಾಗಕ್ಕೆ ಎ-ಖಾತಾವನ್ನು ಪಡೆಯಲು ಅಗತ್ಯ ದಾಖಲೆಗಳ ಸಮೇತ ನೋಂದಾಯಿತ ಇಂಜಿನಿಯರ್ ಅನ್ನು ಭೇಟಿ ಮಾಡಿ ಅಗತ್ಯ ದಾಖಲೆಯನ್ನು ಒದಗಿಸಿ bpas.bbmp.gov.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: