RGEP Program-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

September 30, 2024 | Siddesh
RGEP Program-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
Share Now:

ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿಯಲ್ಲಿ(Rajiv Gandhi Entrepreneurship Program) ಪ್ರತಿಭಾವಂತ ಪದವೀದರರಲ್ಲಿ ನಾವಿನ್ಯತೆಯನ್ನು ಬೆಳೆಸಲು ಮತ್ತು ಉದ್ಯಮಶೀಲತೆಯನ್ನು  ಉತ್ತೇಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯು ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಪರಿಕಲ್ಪನೆಯಲಲಿ ಕರ್ನಾಟಕದಲ್ಲಿ 3 ವರ್ಷ ಅಥವಾ 4 ವರ್ಷಗಳ ಪದವಿ (ವಿಜ್ಞಾನ / ಇಂಜಿನಿಯರಿಂಗ್ ವಿಭಾಗ) ಪೂರ್ಣಗೊಳಿಸಿದ ವಿದ್ಯಾರ್ಥಿಗಳು/ನವೋದ್ಯಮ (ಎಂಟ‌‌ಪ್ರೈನರ್) ಗಳಿಗೆ ಆರಂಭಿಕ ಹಂತದ ಧನಸಹಾಯ ಪಡೆಯಲು(Subsistence grant/Stipend for innovators) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ:  PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!

Last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಅಕ್ಟೋಬರ್ 2024

Rajiv Gandhi Entrepreneurship Program subsidy-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ 25,000 ಸಾವಿರದಂತೆ ಒಟ್ಟು 12 ತಿಂಗಳ ಸೀಮಿತ ಅವಧಿಗೆ ಧನ ಸಹಾಯವನ್ನು ನೀಡಲಾಗುತ್ತದೆ.

Who can apply-ಅರ್ಜಿ ಸಲ್ಲಿಸಲು ಅರ್ಹರು:

1) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಇಂಜಿನಿಯರಿಂಗ್ ಅಥವಾ ವಿಜ್ಞಾನ ವಿಭಾಗದಲ್ಲಿ 3 ರಿಂದ 4 ವರ್ಷದ ಪದವಿಯನ್ನು ಪಡೆದಿರಬೇಕು. ಜೊತೆಗೆ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

3) ಯಾವುದೇ ಕಂಪನಿಯಲ್ಲಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿರಬಾರದು.

4) ಯಾವುದೇ ಕಂಪನಿ ಮತ್ತು ಸ್ಟಾರ್ಟ್ ಅಪ್ ಸ್ಟಾಕ್ ಮೇಲೆ ಹೂಡಿಕೆ ಮಾಡಿರಬಾರದು.

ಇದನ್ನೂ ಓದಿ: Sambaru mandali subsidy scheme-ಸಾಂಬಾರು ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

5) ಅರ್ಜಿ ಸಲ್ಲಿಸಿದ ದಿನಾಂಕದಂದು 28 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು

6) ಅಭ್ಯರ್ಥಿಯು ಆಯ್ಕೆಯದ ನಂತರ 12 ತಿಂಗಳ ಕಾರ್ಯಕ್ರಮದ ಅವಧಿಗೆ ಅವರು ಉದ್ದೇಶಿತ ಬ್ಯುಸಿನೆಸ್ ಐಡಿಯಾ ಕುರಿತು ಮಾತ್ರ ತಮ್ಮ ಅವಧಿಯನ್ನು ಮೀಸಲಿಡಲು ಸಿದ್ದವಿರಬೇಕು.

For more details-ಈ ಯೋಜನೆಯ ಕುರಿತು ಅಧಿಕ ಮಾಹಿತಿ ಪಡೆಯಲು:

Helpline/ಸಹಾಯವಾಣಿ: 080-22231007
ವೆಬ್ಸೈಟ್ ಲಿಂಖ್: Click here
ಯೋಜನೆಯ ಮಾರ್ಗಸೂಚಿ/Guideline:- Download Now 
Email: rgep.startupkar@gmail.com  

ಇದನ್ನೂ ಓದಿ: bagar hukum-ಕಂದಾಯ ಇಲಾಖೆಯಿಂದ ‘ಬಗರ್ ಹುಕುಂ’ ಸಾಗುವಳಿ ರೈತರಿಗೆ ಗುಡ್ ನ್ಯೂಸ್!

ಹೆಚ್ಚಿನ ಸ್ಪಷ್ಟಿಕರಣಗಳಿಗಾಗಿ ಕಚೇರಿ ವಿಳಾಸ:

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್)

ಬಿಎಂಟಿಸಿ ಕೇಂದ್ರ ಕಛೇರಿಗಳ ಕಟ್ಟಡ, ಟಿಟಿಎಂಸಿ 'ಬಿ' ಬ್ಲಾಕ್, 4ನೇ ಮಹಡಿ, ಶಾಂತಿನಗರ, ಕೆ. ಹೆಚ್. ರಸ್ತೆ, ಬೆಂಗಳೂರು-560027.

Online application link-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್:

ಅರ್ಹ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Tags:
WhatsApp Group Join Now
Telegram Group Join Now
Share Now: