Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

December 11, 2025 | Siddesh
Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!
Share Now:

ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ(Swaavlambi Saarathi Scheme) ಅಭಿವೃದ್ಧಿ ನಿಗಮ ನಿಯಮಿತ ದ ವತಿಯಿಂದ ಕ್ರೈಸ್ತ ಫಲಾನುಭವಿಗಳಿಗೆ ಆರ್‌ಬಿಐ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳ ಮೂಲಕ ಟ್ಯಾಕ್ಸಿಗಳು, ಸರಕು ವಾಹನಗಳು ಅಥವಾ ಪ್ರಯಾಣಿಕರ ಆಟೋ ರಿಕ್ಷಾಗಳನ್ನು ಖರೀದಿಸಲು ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಫಲಾನುಭವಿಗಳಿಗೆ ರಾಷ್ಟ್ರೀಯಕೃತ ಬ್ಯಾಂಕುಗಳು ಅಥವಾ ಆರ್‌ಬಿಐ(Auto, taxi subsidy) ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳ ಅಡಿಯಲ್ಲಿ ವಾಹನದ ಬೆಲೆಯ 50% ರಷ್ಟು ಅನುದಾನವನ್ನು ಪಡೆಯಬಹುದು ಗರಿಷ್ಠ ರೂ. 3.00 ಲಕ್ಷ ಸಹಾಯಧನ ಹಾಗೂ ಆಟೋ ರಿಕ್ಷಾಗಳ ಖರೀದಿಗೆ ರೂ. 75,000 ವರೆಗೆ ಸಹಾಯಧನವನ್ನು ಪಡೆಯಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Insurance Scholarship-TATA AIA ಲೈಫ್ ಇನ್ಶುರೆನ್ಸ್ ವತಿಯಿಂದ 15,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಲಗತ್ತಿಸಬೇಕಾದ ದಾಖಲಾತಿಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಯಾವೆಲ್ಲ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು? ಈ ಯೋಜನೆಯ ಜಾರಿಗೆ ತರಲು ಉದ್ದೇಶವೇನು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last date to apply this scheme-ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಅಂತಿಮ ದಿನಾಂಕ:

ಸ್ವಾವಲಂಬಿ ಸಾರಥಿ ಯೋಜನೆಯಡಿ ಸಹಾಯಧನದಲ್ಲಿ ಸರಕು ವಾಹನ, ಟ್ಯಾಕ್ಸಿ ವಾಹನವನ್ನು ಖರೀದಿ ಮಾಡಲು ಅರ್ಹ ಅಭ್ಯರ್ಥಿಗಳು 15 ಡಿಸೆಂಬರ್ 2025 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Old RTC And Mutation-ಮೊಬೈಲ್ ನಲ್ಲೇ ಹಳೆಯ ಪಹಣಿ ಮ್ಯುಟೇಷನ್ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Swawlambi Sarati yojana Subsidy Amount-ಈ ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ನೀರುದ್ಯೋಗಿ ಯುವಕರು ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸಬ್ಸಿಡಿಯಲ್ಲಿ ಸರಕು ವಾಹನ, ಟ್ಯಾಕ್ಸಿ ಅನ್ನು ಖರೀದಿ ಮಾಡಲು ಶೇ 50% ಅಥವಾ ಗರಿಷ್ಠ ರೂ ₹3.00 ಲಕ್ಷ ಸಬ್ಸಿಡಿಯನ್ನು ನೀಡಲಾಗುತ್ತದೆ.

Main purpose of this scheme-ಈ ಯೋಜನೆಯ ಮುಖ್ಯ ಉದ್ದೇಶಗಳಾವುವು?

A) ಹೊಸ ವಾಹನವನ್ನು ಖರೀದಿ ಮಾಡುವಾಗ ಉಂಟಾಗುವ ಹಣಕಾಸಿನ ಭಾರವನ್ನು ಕಡಿಮೆ ಮಾಡುವುದು.

B) ಆಟೋ, ಟ್ಯಾಕ್ಸಿ ಮತ್ತು ಸರಕು ವಾಹನ ಮೂಲಕ ಸ್ವಯಂ ಉದ್ಯೋಗವನ್ನು ಮಾಡಲು ಸಹಾಯಕಾರಿಯಾಗುತ್ತದೆ.

C) ಸಾರಿಗೆ ವಲಯದಲ್ಲಿ ಹೆಚ್ಚಿನ ಮತ್ತು ಸ್ಥಿರವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

D) ಕುಟುಂಬಗಳಿಗೆ ದಿನನಿತ್ಯದ ವಿಶ್ವಾಸಾರ್ಹ ಆದಾಯದ ಮೂಲವನ್ನು ಒದಗಿಸುವುದು.

E) ಸರ್ಕಾರ ನೀಡುವ ಸಹಾಯಧನದಿಂದ ವಾಹನದ ಒಟ್ಟು ವೆಚ್ಚವನ್ನು ಕಡಿಮೆ ಮಾಡಿ ಸುಲಭವಾಗಿ ವ್ಯವಹಾರ ಆರಂಭಿಸಲು ನೆರವಾಗುವುದು.

F) ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಾರಿಗೆ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವುದು.

G) ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಸ್ವಾವಲಂಬಿಗಳಾಗಿ ಜೀವಿಸಲು ಪ್ರೋತ್ಸಾಹಿಸುವುದು.

ಇದನ್ನೂ ಓದಿ: Maize MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ! ಕ್ವಿಂಟಾಲ್ ಗೆ 2,400/- ರೂ ನಿಗದಿ!

Who can apply for application-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

1) ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ (ಅಲ್ಪಸಂಖ್ಯಾತ) ಸೇರಿರಬೇಕು.

2) ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

3) ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.

4) ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ. 6,00,000/- ಕ್ಕಿಂತ ಒಳಗಿರಬೇಕು.

5) ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು.

6) ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.

7) ಈ ಯೋಜನೆಗೆ ಅರ್ಜಿಸಲ್ಲಿಸುವ ಯಾವುದೇ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಈ ಹಿಂದೆ KMDC/KCCDC ಯಿಂದ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು (ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಗಳನ್ನು ಹೊರತುಪಡಿಸಿ)

ಇದನ್ನೂ ಓದಿ: Shrama Shakti Yojana-ಶ್ರಮ ಶಕ್ತಿ ಯೋಜನೆಯಡಿ ₹50,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

subsidy scheme

ಇದನ್ನೂ ಓದಿ: Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

What are the documents required-ಅರ್ಜಿ ಸಲ್ಲಿಸಲು ಓದಗಿಸಬೇಕಾದ ದಾಖಲಾತಿಗಳಾವುವು?

ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ

ಅಭ್ಯರ್ಥಿಯ ಆಧಾರ್ ಕಾರ್ಡ

ಫೋಟೋ

ವಾಹನದ ದರಪಟ್ಟಿ

ಇದನ್ನೂ ಓದಿ: Kotak Scholarship-ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ₹1.5 ಲಕ್ಷ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Online application process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಆಯ್ಕೆಯಾರ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ಅರ್ಜಿದಾರ ಅಭ್ಯರ್ಥಿಯು ಮೊದಲಿಗೆ "Swaavlambi Saarathi Scheme Application" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ "ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ"ದ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ತದನಂತರ ಅದೇ ಪುಟದಲ್ಲಿ ಕಾಣುವ "ಸ್ವಾವಲಂಬಿ ಸಾರಥಿ ಯೋಜನೆಯ" ಮುಂದೆ ಕಾಣಿಸುವ "ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇಲ್ಲಿ ಮೊದಲ ಬಾರಿಗೆ ಈ ವೆಬ್ಸೈಟ ಅನ್ನು ಪ್ರವೇಶ ಮಾಡುತ್ತಿರುವ ಅರ್ಜಿದಾರರು ಹೊಸ ಬಳಕೆದಾರರ ? ಇಲ್ಲಿ ನೋಂದಾಯಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ಪಡೆದು ಬಳಕೆದಾರ ಐಡಿಯನ್ನು ನೋಂದಣಿ ಮಾಡಿಕೊಂಡು ಪಾಸ್ವರ್ಡ್ ರಚನೆ ಮಾಡಿಕೊಂಡು ಲಾಗಿನ್ ಆಗಬೇಕು.

Step-4: ಲಾಗಿನ್ ಆದ ನಂತರ ಅಧಿಕೃತ ಅರ್ಜಿ ನಮೂನೆ ಓಪನ್ ಆಗುತ್ತದೆ. ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Free Sewing Machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

More Information this scheme-ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: