PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

December 12, 2025 | Siddesh
PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!
Share Now:

ಅಲ್ಪ ಸಂಖ್ಯಾತ ಸಮುದಾಯದ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ(PM Vikas Yojana)ಕೇಂದ್ರ ಸರ್ಕಾರ ಪಿಎಂ ವಿಕಾಸ ಯೋಜನೆಯನ್ನು ಜಾರಿಗೆ ತಂದಿದ್ದು, ದೇಶದ ಯುವಕರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಕೌಶಲ್ಯಾಭಿವೃದ್ಧಿಗೆ ಮಹತ್ವದ ಅವಕಾಶ ನೀಡುವ ಯೋಜನೆ. ಕೈಗಾರಿಕೆಗಳಿಂದ ಹಿಡಿದು ತಾಂತ್ರಿಕ ಕ್ಷೇತ್ರಗಳವರೆಗೆ ಹಲವಾರು ತರಬೇತಿಗಳ ಮೂಲಕ ಉದ್ಯೋಗ ಮತ್ತು ಸ್ವ ಉದ್ಯಮಕ್ಕೆ ನೀಡಲು ನೆರವಾಗುತ್ತದೆ.

ಈ ಯೋಜನೆಯ ವಿಶೇಷತೆ ಎಂದರೆ ತರಬೇತಿ ಸಂಪೂರ್ಣ ಉಚಿತವಾಗಿದ್ದು, ತರಬೇತಿ( PM Vishwakarma Skill) ಅವಧಿಯಲ್ಲಿ ಮಾಸಿಕ ₹3000 ಸ್ಟೈಪೆಂಡ್ ಕೂಡ ನೀಡಲಾಗುತ್ತದೆ. ಜೊತೆಗೆ ತರಬೇತಿ ಪೂರ್ಣಗೊಂಡ ನಂತರ ಸರ್ಕಾರ ಮಾನ್ಯತೆ ಪಡೆದ ಪ್ರಮಾಣಪತ್ರ ಮತ್ತು ಉದ್ಯೋಗ ಸಹಾಯ ಲಭ್ಯ.

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

ಕೌಶಲ್ಯ, ಸ್ವಾವಲಂಬನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಈ ಯೋಜನೆ ಅನೇಕ ಯುವಕರ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸರಕಾರದ ಬೆಂಬಲ ಮತ್ತು ಉದ್ಯೋಗ ಮಾರ್ಗದರ್ಶನದಿಂದ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಏನಿದು ಪಿಯಂ ವಿಕಾಸ್ ಯೋಜನೆ? ಈ ಯೋಜನೆಯ ಅಡಿಯಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು? ಯೋಜನೆಯ ಮುಖ್ಯ ಉದ್ದೇಶಗಳಾವುವು? ಅರ್ಜಿ ಸಲ್ಲಿಸುವುದು ಹೇಗೆ? ಸಂಬಂದಿಸಿದ ಅಗತ್ಯ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

ಈ ಲೇಖನದಲ್ಲಿ ಕೆಳಗೆ ತಿಳಿಸಿರುವ ಪಟ್ಟಿಗಳನ್ನು ನೋಡಬಹುದು:

ಪಿಯಂ ವಿಕಾಸ್ ಯೋಜನೆ ಎಂದರೇನು?
ಈ ಯೋಜನೆ ಜಾರಿಗೆ ತರಲು ಉದ್ದೇಶವೇನು?
ಈ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಇದರ ಅಡಿ ಎಷ್ಟು ಸಹಾಯಧನವನ್ನು ಪಡೆಯಬಹುದು?
ಅರ್ಜಿ ಸಲ್ಲಿಸುವ ವಿಧಾನ?
ಅಗತ್ಯ ದಾಖಲಾತಿಗಳಾವುವು?

What Is PM Vishwakarma Yojana-ಏನಿದು ಪಿಎಂ ವಿಕಾಸ ಯೋಜನೆ?

ಪಿಎಂ ವಿಕಾಸ ಯೋಜನೆ (PM Vishwakarma Yojana) ಇದು ಭಾರತ ಸರ್ಕಾರ ಪ್ರಾರಂಭ ಮಾಡಿರುವ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜಕ ಯೋಜನೆಯಾಗಿದೆ. ಸಂಪ್ರದಾಯಬದ್ದ ವೃತ್ತಿಗಳನ್ನು ನಡೆಸುವ ಹಸ್ತಶಿಲ್ಪಿಗಳು, ಕಾರ್ಮಿಕರು, ಸೇವಾ ವೃತ್ತಿಯವರು ಮತ್ತು ತಾಂತ್ರಿಕ ಕೆಲಸಗಾರರಿಗೆ ತರಬೇತಿ, ಸ್ಟೈಪೆಂಡ್, ಸಾಧನಗಳ ಸಹಾಯ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Insurance Scholarship-TATA AIA ಲೈಫ್ ಇನ್ಶುರೆನ್ಸ್ ವತಿಯಿಂದ 15,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

Purpose of this Scheme-ಈ ಯೋಜನೆಯ ಪ್ರಮುಖ ಉದ್ದೇಶಗಳಾವುವು?

ಕೌಶಲ್ಯ ತರಬೇತಿ: ಅಗತ್ಯ ಆಧಾರಿತ ಕೋರ್ಸ್ಗಳ ಮೂಲಕ ಉತ್ತಮ ತರಬೇತಿ ನೀಡಿ, ಯುವಕರಿಗೆ ಉದ್ಯೋಗ ಮತ್ತು ಜೀವನೋಪಾಯದ ಸುಸ್ಥಿರ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ: ಪರಂಪರ ಕಾಲದಿಂದಾಲೂ ಕಲೆ, ಹಸ್ತಶಿಲ್ಪ, ಸಾಹಿತ್ಯ ಮತ್ತು ಕೈಬರಹಗಳನ್ನು ಉಳಿಸಿ ಬೆಳೆಸುವುದು ಹಾಗೂ ಸಮುದಾಯದ ವಿಶಿಷ್ಟ ಸಂಸ್ಕೃತಿಯನ್ನು ಮತ್ತಷ್ಟು ಬೆಳಗಿಸುವುದು.

ಮಹಿಳಾ ಸಬಲೀಕರಣ: ಮಹಿಳೆಯರಿಗೆ ನಾಯಕತ್ವ, ಕೌಶಲ್ಯ ಮತ್ತು ಉದ್ಯಮಶೀಲತಾ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುವುದು.

ಜೀವನೋಪಾಯದ ಸುಧಾರಣೆ: ಮಾರುಕಟ್ಟೆ ಸಂಪರ್ಕ, ಉದ್ಯೋಗ ಸಹಾಯ ಮತ್ತು ಸಾಲ ಸೌಲಭ್ಯಗಳ ಮೂಲಕ ಅಲ್ಪಸಂಖ್ಯಾತರ ಉದ್ಯೋಗಾರ್ಹತೆಯನ್ನು ಹೆಚ್ಚಿಸಿ, ಅವರ ಜೀವನಮಟ್ಟವನ್ನು ಸುಧಾರಿಸುವುದು.

ಇದನ್ನೂ ಓದಿ: Old RTC And Mutation-ಮೊಬೈಲ್ ನಲ್ಲೇ ಹಳೆಯ ಪಹಣಿ ಮ್ಯುಟೇಷನ್ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಯೋಜನೆಯಡಿ ಒದಗುವ ಪ್ರಮುಖ ಸೌಲಭ್ಯಗಳು ಹಾಗೂ ಸಹಾಯಧನ:

ಉಚಿತ ಕೈಗಾರಿಕಾ ಕೌಶಲ್ಯ ತರಬೇತಿಯಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು:

Electrician, Carpenter, Plumber, Tailoring, Beautician, Welding, Two Wheeler repair, Computer & Digital Skill, Handicraft, artisan-based skills, Food Processing, Bakery, Packaging skills ಹೀಗೆ ಹಲವಾರು ತರಬೇತಿಗಳು ಉಚಿತವಾಗಿ ಪಡೆಯಲಾಗುತ್ತದೆ.

Amount details-ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು?

ಸಾಂಪ್ರದಾಯಿಕ ಕೌಶಲ್ಯ ತರಬೇತಿ: ಈ ತರಬೇತಿಯಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಪ್ರತಿ ತಿಂಗಳು ₹3,000 ಸ್ಟೈಪೆಂಡ್ ನೀಡಲಾಗುತ್ತದೆ.

ಆಧುನಿಕ ಕೌಶಲ್ಯ ತರಬೇತಿ (ವಸತಿ ರಹಿತ): ವಸತಿ ಸೌಲಭ್ಯವಿಲ್ಲದೆ ಆಧುನಿಕ ತರಬೇತಿ ಪಡೆಯುವವರಿಗೆ ಮಾಸಿಕ ₹2,000 ಸ್ಟೈಪೆಂಡ್ ಲಭ್ಯ.

ಆಧುನಿಕ ಕೌಶಲ್ಯ ತರಬೇತಿ (ವಸತಿ ಸಹಿತ): ವಸತಿ ಸೌಲಭ್ಯದೊಂದಿಗೆ ತರಬೇತಿ ಪಡೆಯುವ ಫಲಾನುಭವಿಗಳಿಗೆ ಗರಿಷ್ಠ 12 ತಿಂಗಳವರೆಗೆ ಪ್ರತಿ ತಿಂಗಳು ₹1,000 ಸ್ಟೈಪೆಂಡ್ ನೀಡಲಾಗುತ್ತದೆ.

ಶೈಕ್ಷಣಿಕ ಬೆಂಬಲ: ಶಿಕ್ಷಣಕ್ಕೆ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಗರಿಷ್ಠ 6 ತಿಂಗಳವರೆಗೆ ಪ್ರತಿ ತಿಂಗಳು ₹1,000 ಆರ್ಥಿಕ ಸಹಾಯ ಒದಗಿಸಲಾಗುತ್ತದೆ.

ಇದನ್ನೂ ಓದಿ: Maize MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ! ಕ್ವಿಂಟಾಲ್ ಗೆ 2,400/- ರೂ ನಿಗದಿ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರ ವಯಸ್ಸು18 ರಿಂದ 45 ವರ್ಷದ ಒಳಗಿರಬೇಕು.

ಅರ್ಜಿದಾರ ಅಭ್ಯರ್ಥಿಯು ಭಾರತ ಪ್ರಜೆಯಾಗಿರಬೇಕು.

ಅರ್ಜಿದಾರರಿಗೆ ಕೌಶಲ್ಯ ತರಬೇತಿ ಪಡೆಯಲು ಆಸಕ್ತಿ ಇರಬೇಕು.

ಅಲ್ಪಸಂಖ್ಯಾತ, SC/ST/OBC, EWS ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅಂಗವಿಕಲರಿಗೆ ಯೋಜನೆಯ ಎಲ್ಲಾ ಘಟಕಗಳಲ್ಲಿ ಒಟ್ಟು ಸ್ಥಾನಗಳಲ್ಲಿ 3% ರಷ್ಟು ಮೀಸಲಾತಿ ಇರುತ್ತದೆ.

ಇದನ್ನೂ ಓದಿ: Shrama Shakti Yojana-ಶ್ರಮ ಶಕ್ತಿ ಯೋಜನೆಯಡಿ ₹50,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

Documents Required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಆಧಾರ್ ಕಾರ್ಡ್/Aadhar Card

ರೇಷನ್ ಕಾರ್ಡ್/Ration card

ವಿಳಾಸ ದೃಢೀಕರಣ

ಬ್ಯಾಂಕ್ ಪಾಸ್/Bank Passbook

ಫೋಟೋ/Photocopy

ಇಮೇಲ್/E mail ID

ಮೊಬೈಲ್ ಸಂಖ್ಯೆ/Mobile Number

ಇದನ್ನೂ ಓದಿ: Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಇದನ್ನೂ ಓದಿ: Free Sewing Machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ವಿಕಾಸ್ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿದಾರ ಫಲಾನುಭವಿಯು ಮೊದಲಿಗೆ ಈ ಲಿಂಕ್ "Apply Now" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ನೋಂದಾಣಿ ಮಾಡಿಕೊಂಡು ಲಾಗ್‌ಇನ್ ಮಾಡಿ ಮತ್ತು ನಿಮ್ಮ ವೈಯಕ್ತಿಕ ವಿವರಗಳಿಂದ e-KYC ಪೂರ್ಣಗೊಳಿಸಿ.

Step-3: ಲಾಗಿನ್ ಆದ ನಂತರ ಪಾಸ್‌ವರ್ಡ್ ಅನ್ನು ಹಾಕಿ, OTP ಮೂಲಕ ಮೊಬೈಲ್ ಪರಿಶೀಲಿಸಿ ಮತ್ತು ಪ್ರೊಫೈಲ್‌ನಲ್ಲಿರುವ ಹೆಸರು, ಜನ್ಮ ದಿನಾಂಕ ಹಾಗೂ ಸಂಪರ್ಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

Step-4: ತದನಂತರ “PM VIKAS” ಹಾಗೂ ಬೇಕಾದ ಉದ್ಯೋಗ ಪಾತ್ರಗಳನ್ನು ಹುಡುಕಿ, ನಂತರ ಯೋಜನೆ/ವಿಧಾನ/ವಲಯ ಫಿಲ್ಟರ್‌ಗಳನ್ನು ಬಳಸಿ ಸೂಕ್ತ ಕೋರ್ಸ್ ಅಥವಾ ಬ್ಯಾಚ್ ಆಯ್ಕೆಮಾಡಿ ತರಬೇತಿ ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: