PMUY Yojana- ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್‌ ಪಡೆಯಲು ಅರ್ಜಿ ಆಹ್ವಾನ!

October 17, 2023 | Siddesh

Pradhan Mantri Ujjwala Yojana 2.0: ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಮೇ 2016 ರಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MOPNG), ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿಯಂತಹ ಶುದ್ಧ ಅಡುಗೆ ಇಂಧನವನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ 'ಪ್ರಧಾನ ಮಂತ್ರಿ ಉಜ್ವಲ ಯೋಜನೆ' (PMUY) ಎನ್ನುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಮೇ 1, 2016 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು. 

ಪ್ರಸ್ತುತ ಈ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್‌ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು ಅಗತ್ಯ ದಾಖಲಾತಿ ಸಮೇತ ಆನ್ಲೈನ್ ಮತ್ತು ಆಪ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬವುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ.

ಇದನ್ನೂ ಓದಿ: Ration card news: ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆ ಕುರಿತು ಸಿಹಿ ಸುದ್ದಿ ನೀಡಿದ ಆಹಾರ ಇಲಾಖೆ!

Ujjwala Scheme- ಉಚಿತ ಗ್ಯಾಸ್ ಕನೆಕ್ಷನ್‌ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು?

> ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ
> ಅಂತ್ಯೋದಯ ಅನ್ನ ಯೋಜನೆ (ಎಎವೈ)
> ಬಿ ಪಿ ಎಲ್ ಕಾರ್ಡ ಹೊಂದಿರುವವರು.
> ಎಸ್‌ಸಿ(SC) ವರ್ಗಕ್ಕೆ ಸೇರಿದ ಕುಟುಂಬಗಳು.
> ಎಸ್‌ಟಿ(ST) ವರ್ಗಕ್ಕೆ ಸೇರಿದ ಕುಟುಂಬಗಳು.
> ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು.
> ಅತ್ಯಂತ ಹಿಂದುಳಿದ ವರ್ಗಗಳು.
> ಟೀ ಮತ್ತು ಮಾಜಿ-ಟೀ ಗಾರ್ಡನ್ ಬುಡಕಟ್ಟುಗಳು.
> ವನವಾಸಿ.
> ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು.
> ಅರ್ಜಿದಾರರಿಗೆ 18 ವರ್ಷ ವಯಸ್ಸಾಗಿರಬೇಕು.
> ಪ್ರಸ್ತುತ ಗ್ಯಾಸ್ ಸಂಪರ್ಕ ಹೊಂದಿರದವರು.

ಇದನ್ನೂ ಓದಿ: October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.

PMUY Benefits- ಈ ಯೋಜನೆಯಡಿ ಗ್ರಾಹಕರಿಗೆ ಸಿಗುವ ಲಾಭಗಳು:

ಪಿಎಮ್‌ಯುವೈ ಕನೆಕ್ಷನ್‌ಗಳಿಗಾಗಿ ಭಾರತ ಸರ್ಕಾರವು ನಗದು ಸಹಾಯವನ್ನು ನೀಡುತ್ತದೆ - (14.2 ಕೆಜಿ ಸಿಲಿಂಡರ್‌ ಕನೆಕ್ಷನ್‌ಗೆ ರೂ.1600 / 5 ಕೆಜಿ ಸಿಲಿಂಡರ್‌ಗೆ ರೂ.1150) ನಗದು ನೆರವನ್ನು ಒಳಗೊಂಡಿದೆ.

ಎಲ್ಲಾ ಪಿಎಮ್‌ಯುವೈ ಫಲಾನುಭವಿಗಳಿಗೆ ಮೊದಲ ಎಲ್‌ಪಿಜಿ ರೀಫಿಲ್ ಮತ್ತು ಸ್ಟವ್ (ಹಾಟ್‌ಪ್ಲೇಟ್) ಎರಡನ್ನೂ ಉಚಿತವಾಗಿ ಒದಗಿಸಲಾಗುತ್ತದೆ ಜೊತೆಗೆ ಠೇವಣಿ ರಹಿತ ಕನೆಕ್ಷನ್‌ನ್ನೂ ತೈಲ ಮಾರ್ಕೆಟಿಂಗ್ ಕಂಪನಿಗಳು (OMC ಗಳು) ನೀಡುತ್ತವೆ.

ಇದರ ಜೊತೆಗೆ ನಂತರ ನಿಮ್ಮ ಸಿಲಿಂಡರ್ ಅನ್ನು ಮರು ಭರ್ತಿ ಮಾಡಲು 14.2 ಕಿಲೋ ತೂಕದ ಸಿಲಿಂಡರ್ ನ ಮಾರುಕಟ್ಟೆ ದರ 903 ರೂಪಾಯಿ ಇದ್ದು ಇದಕ್ಕೆ ಕೇಂದ್ರ ಸರಕಾರದಿಂದ 300 ರೂ ಸಹಾಯಧನ ನೀಡಿ ಫಲಾನುಭವಿಗಳಿಗೆ 603 ರೂಪಾಯಿಗೆ ಸಿಲಿಂಡರ್ ದೊರೆಯಲಿದೆ.

Documents required Ujjwala Yojana-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1) ಆಧಾರ್ ಕಾರ್ಡ್ ಪ್ರತಿ.
2) ಬಿಪಿಎಲ್ (BPL)/ಅಂತ್ಯೋದಯ ಅನ್ನ ಯೋಜನೆ (AAY) ರೇಷನ್ ಕಾರ್ಡ್ ಪ್ರತಿ.
3) ಜಾತಿ ಪ್ರಮಾಣ ಪತ್ರ (SC, ST ವರ್ಗಕ್ಕೆ ಸೇರಿದ ಮಹಿಳೆಯರಿಗೆ ಮಾತ್ರ)
4) ವಿಳಾಸ ದೃಢೀಕರಣ ಪ್ರಮಾಣ ಪತ್ರ.
5) ಬ್ಯಾಂಕ್ ಪಾಸ್ ಬುಕ್ ಪ್ರತಿ.
6) ಪೋಟೋ.

ಇದನ್ನೂ ಓದಿ: load shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

how to apply for free gas cylinder- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

ಅಗತ್ಯ ದಾಖಲಾತಿಗಳ ಸಮೇತ ಅರ್ಜಿದಾರರು ನಿಮ್ಮ ಹತ್ತಿರದ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

Ujjwala Yojana Online application link- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Apply Now 
Pradhan Mantri Ujjwala Yojana website- ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಈ ಯೋಜನೆಯ ವೆಬ್ಸೈಟ್ ಭೇಟಿ ಮಾಡಲು: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: