Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!

January 27, 2026 | Siddesh
Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!
Share Now:

ರೈತರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ತೋಟಗಾರಿಕಾ ಇಲಾಖೆ, ಅಡಿಕೆ ಮತ್ತು ಕಾಳುಮೆಣಸಿನಂತೆ ತೆಂಗು ಬೆಳೆಯನ್ನೂ(Coconut Insurance) ಸಹ 'ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ'ಯಡಿ ತರಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತಾದ ಪ್ರಸ್ತಾವನೆಯು ಈಗ ರಾಜ್ಯ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.

ಈ ಯೋಜನೆಯು ಜಾರಿಗೆ ಬಂದಲ್ಲಿ, ಅನಿರೀಕ್ಷಿತ ಹವಾಮಾನ ಬದಲಾವಣೆ, ರೋಗಬಾಧೆ ಮತ್ತು ಮಳೆ ಕೊರತೆಯಿಂದ ನಷ್ಟ ಅನುಭವಿಸುತ್ತಿರುವ ಲಕ್ಷಾಂತರ ತೆಂಗು ಬೆಳೆಗಾರರಿಗೆ(Coconut Crop Insurance) ದೊಡ್ಡ ಮಟ್ಟದ ಆರ್ಥಿಕ ಭದ್ರತೆ ಸಿಗಲಿದ್ದು ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!

ಪ್ರಸ್ತುತ ತೆಂಗು ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲು ಇಲಾಖೆಯಿಂದ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? ಈ ವಿಮೆ(Crop Insurance) ಯೋಜನೆ ಹೇಗೆ ಕಾರ್ಯನಿರ್ವಹಿಸಲಿದೆ? ಇದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ? ಬೆಳೆ ವಿಮೆಯನ್ನು ಒದಗಿಸಲು ಯಾವೆಲ್ಲ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Tengu Bele Vime-ವಿಮೆ ಯೋಜನೆ ಹೇಗೆ ಕಾರ್ಯನಿರ್ವಹಿಸಲಿದೆ?

ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಶೀಘ್ರವೇ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಒಮ್ಮೆ ಅನುಮೋದನೆ ಸಿಕ್ಕ ನಂತರ, ವಿಮಾ ಕಂಪನಿಗಳ ಆಯ್ಕೆಗಾಗಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಜೂನ್ ತಿಂಗಳಿನಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ನಿಗದಿತ ವಿಮಾ ಮೊತ್ತ: ತೆಂಗಿನ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 65 ಸಾವಿರ ರೂ. ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದೆ.

ರೈತರ ಪಾಲು (ಪ್ರೀಮಿಯಂ): ಬೆಳೆಗಾರರು ನಿಗದಿತ ವಿಮಾ ಮೊತ್ತದ ಕೇವಲ ಶೇ. 5ರಷ್ಟು ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಮಾನದಂಡಗಳು: ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರದ ನೀತಿ ನಿರ್ಧಾರಗಳ ಆಧಾರದ ಮೇಲೆ ಜಿಲ್ಲಾ ಮಟ್ಟದಲ್ಲಿ ವಿಮೆಯ ಮಾನದಂಡಗಳನ್ನು ನಿಗದಿಪಡಿಸಲಾಗುತ್ತದೆ.

ಇದನ್ನೂ ಓದಿ: LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?

Coconut Crop Area Details-ತೆಂಗು ಬೆಳೆಯ ಅಂಕಿ-ಅಂಶ ವಿವರ:

2023ರ ಅಂಕಿ-ಅಂಶಗಳ ಪ್ರಕಾರ, ಇಂಡೋನೇಷ್ಯಾ, ಭಾರತ ಮತ್ತು ಫಿಲಿಪೈನ್ಸ್ ವಿಶ್ವದ ಒಟ್ಟು ತೆಂಗು ಉತ್ಪಾದನೆಯ 73% ಪಾಲು ಹೊಂದಿವೆ. ಭಾರತದಲ್ಲಿ 21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು 90%ಕ್ಕೂ ಹೆಚ್ಚು ಉತ್ಪಾದನೆ ಮಾಡುತ್ತವೆ. ಕೇರಳ ಅತಿ ಹೆಚ್ಚು ಮರಗಳನ್ನು ಹೊಂದಿದ್ದರೆ, ತಮಿಳುನಾಡು ಪ್ರತಿ ಹೆಕ್ಟೇರ್‌ಗೆ ಅತಿ ಹೆಚ್ಚು ಇಳುವರಿ ನೀಡುತ್ತದೆ.

ತೆಂಗು ಬೆಳೆಯುವ ಪ್ರಮುಖ ರಾಜ್ಯಗಳು: ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ.

ನಮ್ಮ ರಾಜ್ಯದ ಒಟ್ಟು ಕೃಷಿ ಪ್ರದೇಶ: ಅಂದಾಜು 21 ಲಕ್ಷ ಹೆಕ್ಟೇರ್.

ಒಟ್ಟು ಉತ್ಪಾದನೆ: ಭಾರತವು ವಿಶ್ವದ ಅಗ್ರ ಮೂರು ತೆಂಗು ಉತ್ಪಾದಕ ದೇಶಗಳಲ್ಲಿ ಒಂದಾಗಿದೆ.

ಉತ್ಪನ್ನ: 1,000 ಕಾಯಿಗಳಿಗೆ 160-170 ಕೆಜಿಗೂ ಹೆಚ್ಚು ಕೊಬ್ಬರಿ ಸಿಗುತ್ತದೆ, ಇದು ಸುಮಾರು 70%ಕ್ಕೂ ಹೆಚ್ಚು ಎಣ್ಣೆ ಅಂಶವನ್ನು ಹೊಂದಿರುತ್ತದೆ.

ಇದನ್ನೂ ಓದಿ: Property Registration Rules-ಆಸ್ತಿ ನೋಂದಣಿಗೆ ಹೊಸ ನಿಯಮ ತಪ್ಪದೇ ಈ ಮಾಹಿತಿ ತಿಳಿಯಿರಿ!

ವಿಶ್ವ ಉತ್ಪಾದನೆ: ಸುಮಾರು 65 ಮಿಲಿಯನ್ ಟನ್.

ಪ್ರಮುಖ ದೇಶಗಳು: ಇಂಡೋನೇಷ್ಯಾ, ಭಾರತ, ಫಿಲಿಪೈನ್ಸ್, ಶ್ರೀಲಂಕಾ.

ವೈಶಿಷ್ಟ್ಯ: ಭಾರತವು ತೆಂಗಿನ ಎಣ್ಣೆ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ.

Arecanut Crop Insurance-ಅಡಿಕೆ ಮತ್ತು ಕಾಳುಮೆಣಸಿನ ವಿಮೆ ವಿವರ:

ಪ್ರಸ್ತುತ ಚಾಲ್ತಿಯಲ್ಲಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸಿಗೆ ಈ ಕೆಳಗಿನಂತೆ ವಿಮಾ ಮೊತ್ತವಿದೆ:

ಅಡಿಕೆ: ಪ್ರತಿ ಹೆಕ್ಟೇರ್‌ಗೆ 1,28,000 ರೂ..

ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ 47 ಸಾವಿರ ರೂ.

ಇದನ್ನೂ ಓದಿ: SSLC Prize Money-ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ಭರ್ಜರಿ ಕೊಡುಗೆ: ಲ್ಯಾಪ್‌ಟಾಪ್ ಬದಲು ₹50,000 ನಗದು ಬಹುಮಾನ!

Coconut Insurance Scheme

Importance Of Crop Insurance Scheme-ವಿಮೆ ಅನಿವಾರ್ಯವೇಕೆ?

ಪ್ರಸ್ತುತ ತೆಂಗು, ಕೊಬ್ಬರಿ ಮತ್ತು ತೆಂಗಿನೆಣ್ಣೆಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ಸಹ, ತೆಂಗು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕೀಟ ಮತ್ತು ರೋಗಬಾಧೆ: ಇತ್ತೀಚಿನ ದಿನಗಳಲ್ಲಿ ತೆಂಗಿನ ಮರಗಳಿಗೆ ಕೀಟ ಮತ್ತು ರೋಗಗಳ ಕಾಟ ಹೆಚ್ಚಾಗಿದೆ.

ಹವಾಮಾನ ವೈಪರೀತ್ಯ: ಬರಗಾಲ, ಮಳೆ ಕೊರತೆ, ಅತಿಯಾದ ಮಳೆ ಹಾಗೂ ಉಷ್ಣಾಂಶದ ಏರಿಳಿತಗಳು ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಹವಾಮಾನ ಆಧಾರಿತ ದತ್ತಾಂಶಗಳನ್ನು ಹೋಬಳಿ ಮಟ್ಟದ ಹವಾಮಾನ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಮಳೆ ಮಾಪನ ಕೇಂದ್ರಗಳಿಂದ ಪಡೆಯಲಾಗುತ್ತದೆ. ಈ ದತ್ತಾಂಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ತೋಟಗಾರಿಕಾ ಇಲಾಖೆಯ ತಂತ್ರಾಂಶಕ್ಕೆ ರವಾನಿಸಲಾಗುತ್ತದೆ. ಇದರ ಆಧಾರದ ಮೇಲೆ ರೈತರಿಗೆ ಆಗುವ ಹಾನಿಯನ್ನು ಲೆಕ್ಕಹಾಕಿ ವಿಮಾ ಕಂಪನಿಗಳು ಪರಿಹಾರವನ್ನು ಪಾವತಿಸುತ್ತವೆ.

ಇದನ್ನೂ ಓದಿ: MGNREGA Scheme-ನರೇಗಾ ಯೋಜನೆಯಲ್ಲಿ ಏನಿಲ್ಲ ಬದಲಾವಣೆ ಮಾಡಲಾಗುತ್ತಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

"ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಈಗಾಗಲೇ ಜಾರಿಯಲ್ಲಿರುವ ಹಾಗೆಯೇ ತೆಂಗು ಬೆಳೆಗೂ ಸಹ ಒಂದು ವರ್ಷದ ಪರೀಕ್ಷಾರ್ಥವಾಗಿ ಹವಾಮಾನ ಆಧಾರಿತ ವಿಮಾ ಯೋಜನಾ ವ್ಯಾಪ್ತಿಗೆ ತರಲು ಬೇಡಿಕೆಯಿದೆ. ಈಗಾಗಲೇ ಈ ಬಗ್ಗೆ ಯೋಜನಾ ಪ್ರಸ್ತಾವನೆಯನ್ನು ಸರಕಾರದ ಮಟ್ಟದಲ್ಲಿ ಸಲ್ಲಿಸಲಾಗಿದ್ದು ಇದಕ್ಕಾಗಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ." ಎಂದು ತೋಟಗಾರಿಕಾ ಇಲಾಖೆಯ ಕ್ಷಮಾ ಪಾಟೀಲ್, ಜಂಟಿ ನಿರ್ದೇಶಕಿ, , ಉಡುಪಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತೆಂಗು ಬೆಳೆಗಾರರ ದಶಕಗಳ ಬೇಡಿಕೆಯಾದ ಬೆಳೆ ವಿಮೆ ಯೋಜನೆ ಜಾರಿಯಾದಲ್ಲಿ, ರೈತರು ಪ್ರಕೃತಿ ವಿಕೋಪಗಳಿಂದ ಆಗುವ ಆರ್ಥಿಕ ನಷ್ಟದಿಂದ ಪಾರಾಗಬಹುದು. ಸರ್ಕಾರದ ಈ ನಿರ್ಧಾರವು ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: