Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!

January 30, 2026 | Siddesh
Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!
Share Now:

ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ(Pouthi Khatha) ಬದಲಾವಣೆ ಕುರಿತು ಪ್ರಸ್ತುತ ಅಗಿರುವ ಬದಲಾವಣೆಯ ಬಗ್ಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda) ಅವರು ಈ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಧಾನ ಪರಿಷತ್ತಿನಲ್ಲಿ ಪೌತಿ ಖಾತೆ(Pouthi Khatha Information) ಬದಲಾವಣೆ ಕುರಿತು ಪಿ ಎಚ್ ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಪೌತಿ ಖಾತೆ ಬದಲಾವಣೆ ಅರ್ಜಿ ವಿಲೇವಾರಿಯಲ್ಲಿ ರೈತರಿಗೆ ಅನುಕೂಲಕ ವಾತಾವರಣವನ್ನು ರೂಪಿಸಲು ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದರು.

ಇದನ್ನೂ ಓದಿ: Maternity Benefit-ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ 50,000 ರೂ. ಹೆರಿಗೆ ಸಹಾಯಧನ!

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿರುವಂತೆ, ರೈತರ ಜಮೀನುಗಳ ಪೌತಿ ಖಾತೆ (Pouthi Khatha) ಬದಲಾವಣೆ ಪ್ರಕ್ರಿಯೆಯನ್ನು ಸರ್ಕಾರವು ಅತ್ಯಂತ ಸರಳಗೊಳಿಸಿದೆ. ಇದಕ್ಕಾಗಿ 'ಇ-ಪೌತಿ' (e-Pouthi) ತಂತ್ರಾಂಶದ ಮೂಲಕ ವಿಶೇಷ ಆಂದೋಲನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ 40 ಲಕ್ಷಕ್ಕೂ ಅಧಿಕ ಪೌತಿ ಖಾತೆಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

What Is Pouthi Khatha-ಪೌತಿ ಖಾತೆ ಎಂದರೇನು?

ಜಮೀನಿನ ವಾರಸುದಾರರು ಅಥವಾ ಮಾಲೀಕರು ಮರಣ ಹೊಂದಿದ ನಂತರ, ಅವರ ಹೆಸರಿನಲ್ಲಿದ್ದ ಜಮೀನಿನ ಹಕ್ಕುಗಳನ್ನು (ಖಾತೆ) ಅವರ ಕಾನೂನುಬದ್ಧ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು 'ಪೌತಿ ಖಾತೆ' ಎನ್ನಲಾಗುತ್ತದೆ. ಇದು ಕೃಷಿ ಭೂಮಿಯ ಮಾಲೀಕತ್ವದ ಬದಲಾವಣೆಯಲ್ಲಿ ಅತ್ಯಂತ ಪ್ರಮುಖವಾದ ಹಂತವಾಗಿದೆ.

ಇದನ್ನೂ ಓದಿ: Samudaya Bhavana Grant-ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಆರ್ಥಿಕ ನೆರವು!

Pouthi Khatha Rules In Karnataka-ಪ್ರಸ್ತುತ ಯಾವೆಲ್ಲ ಬದಲಾವಣೆ ಮಾಡಲಾಗಿದೆ?

ಹಿಂದೆ ಪೌತಿ ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಒಂದಿಷ್ಟು ರೈತರಿಗೆ ಪೂರಕವಾಗಿ ಜನಸ್ನೇಹಿ ನಿಯಮಗಳನ್ನು ತರಲಾಗಿದ್ದು ಇವುಗಳ ಪಟ್ಟಿ ಈ ಕೆಳಗಿನಂತಿದೆ:

ಮನೆ ಬಾಗಿಲಿಗೆ ಸೇವೆ: ಗ್ರಾಮ ಆಡಳಿತಾಧಿಕಾರಿಗಳು (VA) ಸ್ವಯಂಪ್ರೇರಿತರಾಗಿ ರೈತರ ಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ.

ಮೊಬೈಲ್ ಆ್ಯಪ್ ಬಳಕೆ: ಸ್ಥಳದಲ್ಲೇ ಮೊಬೈಲ್ ಆ್ಯಪ್ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ.

ಸರಳೀಕೃತ ವರದಿ: ಮರಣ ಪ್ರಮಾಣಪತ್ರ ಅಥವಾ ಕೋರ್ಟ್ ಆದೇಶ ಪಡೆಯಲು ವಿಳಂಬವಾಗುವ ಸಂದರ್ಭದಲ್ಲಿ, ವಾರಸುದಾರರ ಅಫಿಡವಿಟ್ ಮತ್ತು ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರ 'ಮಹಜರ್' ವರದಿ ಆಧಾರದ ಮೇಲೆ ಪೌತಿ ಖಾತೆ ನೀಡಲು ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಜೋಡಣೆ: ಪಹಣಿಗಳಿಗೆ (RTC) ಆಧಾರ್ ಜೋಡಣೆ ಮಾಡುವ ಮೂಲಕ ಮೃತ ಮಾಲೀಕರ ಜಮೀನನ್ನು ಸುಲಭವಾಗಿ ಗುರುತಿಸಿ, ವಾರಸುದಾರರಿಗೆ ಹಕ್ಕು ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

What Is Pouthi Khatha

Pouthi Khatha Changes-ಪೌತಿಗೆ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು ಯಾವುವು?

ಸಾರ್ವಜನಿಕರು ಪೌತಿ ಖಾತೆ ಬದಲಾವಣೆಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

ಆಧಾರ್ ಕಾರ್ಡ್ (ವಾರಸುದಾರರದ್ದು).

ವಂಶವೃಕ್ಷ (Family Tree) - ವಾರಸುದಾರರನ್ನು ದೃಢೀಕರಿಸಲು.

ಮರಣ ಪ್ರಮಾಣಪತ್ರ ಅಥವಾ ವಾರಸುದಾರರ ಅಫಿಡವಿಟ್.

ಜಮೀನಿನ ಪಹಣಿ/ಊತಾರ್(RTC)

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Pouthi Khatha Application-ಪೌತಿ ಖಾತೆಗಾಗಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸರ್ಕಾರವು ಈ ಪ್ರಕ್ರಿಯೆಯನ್ನು 'ಆಂದೋಲನ' ಮಾದರಿಯಲ್ಲಿ ಜಾರಿಗೆ ತಂದಿರುವುದರಿಂದ ಅರ್ಜಿ ಸಲ್ಲಿಕೆ ಈಗ ಸುಲಭವಾಗಿದೆ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿಯ ಗ್ರಾಮ ಆಡಳಿತಾಧಿಕಾರಿ(VA) ಅವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇ-ಪೌತಿ ತಂತ್ರಾಂಶ: 'ಇ-ಪೌತಿ' ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ನಡೆಯುತ್ತದೆ.

ಅಧಿಕಾರಿಗಳ ಭೇಟಿ: ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳನ್ನು ನೀಡಿ ಸ್ಥಳದಲ್ಲೇ ಅರ್ಜಿ ಸಲ್ಲಿಸಬಹುದು.

ಜಿಲ್ಲಾವಾರು ಪರಿಶೀಲನೆ: ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಭೆಗಳನ್ನು ನಡೆಸಲಾಗುತ್ತಿದೆ.

ಗಮನಿಸಿ: ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವುದರಿಂದ ನಿಮ್ಮ ಜಮೀನಿನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ್ತು ಪೌತಿ ಖಾತೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಕಾರಿಯಾಗುತ್ತದೆ.

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿ(VA) ಕಚೇರಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: