ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವ ಜಮೀನಿನ ವರ್ಗಾವಣೆ ಕುರಿತು ರೈತರಿಗೊಂದು ಸಿಹಿ ಸುದ್ದಿ!

January 4, 2023 | Siddesh

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವ ವಿಧಾನವನ್ನು ತುಂಬ ಸರಳೀಕರಣ ಮಾಡಲಾಗಿದ್ದು ರೈತರ ಜಮೀನಿನ ಪಹಣಿಯು ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು, ಅವರು ಮರಣ ಹೊಂದಿದ್ದರೆ ಅಂಥವರ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಪ್ರಸ್ತುತ ಉಳುಮೆ ಮಾಡುತ್ತಿರುವ ಮಕ್ಕಳು  ಅವಕಾಶವನ್ನು ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಪೌತಿ ಖಾತೆ ಆಂದೋಲನವನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ರೈತರು ಸರಳವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ಜಮೀನಿನ ಪಹಣಿ ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದಲ್ಲಿ ಬ್ಯಾಂಕಿನಿಂದ ಸಾಲ ಪಡೆಯಲು, ವಿಮೆ ಹಣದ ಸೌಲಭ್ಯ ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳಿಂದ ಯಾವುದೇ ಸಹಾಯಧನ ಆದಾರಿತ ಸೌಲಭ್ಯ ಪಡೆಯಲು  ಅರ್ಹರಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ರೈತರು ಖಾತೆ ಬದಲಾವಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದ್ದು, ಇದು ಕೃಷಿ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿದೆ. ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮವನ್ನು ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮ ಅನುಷ್ಥಾನ ಮಾಡಲಾಗುತ್ತಿದೆ. 

ಜಮೀನಿನ ವಾರಸುದಾರ ನಿಧನದ ನಂತರ ಜಮೀನಿನ ಖಾತೆ ಬದಲಾವಣೆಗೆ ಸಾಕಷ್ಟು ಸಮಯದಿಂದ ಕಾಯುತ್ತಿರುವ ಅನೇಕ ಕುಟುಂಬಗಳಿಗೆ ಇದೊಂದು ಉತ್ತಮ ಯೋಜನೆಯಾಗಿದೆ. ಈ ನೂತನ ಪದ್ದತಿಯನ್ವ ಮರಣ ಹೊಂದಿದವರ ವಿವರಗಳನ್ನು ಪಡೆಯಬೇಕು. ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪ್ರಮಾಣ ಪತ್ರ ಪಡೆದು ಭೂಮಿ ತಂತ್ರಾಂಶ, ಪೌತಿ ಖಾತೆಗಾಗಿ ನಮೂನೆ ಒಂದರಲ್ಲಿ ದಾಖಲಿಸುವುದು. 

ಒಂದೊಮ್ಮೆ ವಂಶವೃಕ್ಷ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಚೇರಿ/ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ವ್ಯಕ್ತಿಯು ಮರಣ ಹೊಂದಿ ಒಂದು ವರ್ಷಕ್ಕಿಂತಲೂ ಕೂಡ ಬಹುಕಾಲ ಆಗಿದ್ದರೆ ಮರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇರದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ್ ಈ ದಾಖಲೆಗಳು ಪರಿಶೀಲಿಸಿಕೊಂಡು ಗ್ರಾಮಲೆಕ್ಕಾಧಿಕಾರಿಯವರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ, ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡೆವಿಟ್ ಪಡೆದು ಅವರ ಆಧಾರ ಕಾರ್ಡ್, ರೇಶನ್ ಕಾರ್ಡ್ ಲಿಂಕ್ ಮೆಲೆ ಅರ್ಜಿಯನ್ನು ಹಾಕಬಹುದಾಗಿದೆ. 

ಈ ರೀತಿಯ ಪೌತಿ ಖಾತೆಯನ್ನು ಬದಲಾವಣೆಗೆ ಸಂಬಂಧಪಟ್ಟಂತೆ ಮ್ಯುಟೆಶನ್ ಶುಲ್ಕದಲ್ಲಿ ರಾಜ್ಯ ಸರ್ಕಾರ ರಿಯಾಯಿತಿಯನ್ನು ನೀಡಿದೆ. ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ 12 ಮತ್ತು ನಮೂನೆ 21 ನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮ್ಯುಟೇಷನ್ ವಿಲೇವಾರಿಗೆ 30 ದಿನಗಳಕಾಲ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ತಕರಾರು ಅರ್ಜಿ ಸಲ್ಲಿಸಿದಲ್ಲಿ ಹೋಬಳಿಗಳಿಗೆ ಗ್ರೇಡ್-1 ತಹಶೀಲ್ದಾರ ಮತ್ತು ಗ್ರೇಡ್-2 ತಹಶೀಲ್ದಾರಗೆ ಹೊಣೆಯನ್ನು ನೀಡಲಾಗಿದ್ದು, ಆಯಾ ಹೋಬಳಿಯಲ್ಲಿ ಒಂದು ತಿಂಗಳೊಳಗೆ ಕ್ಯಾಂಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.

ಪೌತಿ ಖಾತೆ ಅಥವಾ ನಿಮ್ಮ ಹೆಸರಿಗೆ ಜಮೀನಿನ ಪಹಣಿ ಮಾಡಿಕೊಳ್ಳಲು ನಮೂನೆ-1 ಈ ಅರ್ಜಿಯನ್ನು ನಾಡಕಚೇರಿಯಲ್ಲಿ ಪಡೆದುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಬವುದು. 

ನಿಮ್ಮ ಮೊಬೈಲ್ ನಲ್ಲೆ ಪಹಣಿ/ಖಾತೆ/ಊತಾರ್ ವಿವರ ಪಡೆಯಲು ಹೀಗೆ ಮಾಡಿ:

https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮ-ಸರ್ವೆ ನಂಬರ್-ಇತರೇ ವಿವರ ಹಾಕಿ ನಿಮ್ಮ ಪಹಣಿ ವಿವರ ಪಡೆಯಬವುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: