Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

May 5, 2025 | Siddesh
Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!
Share Now:

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ(Raagi Kharidi) ಮಾಡಲು ಪ್ರಸ್ತುತ ಜಾರಿಯಲ್ಲಿರುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದ್ದುಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕನಿಷ್ಠ ಬೆಂಬಲ ಬೆಲೆ(MSP) ಯೋಜನೆಯಡಿ ಈಗಾಗಲೇ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ.

ಇದನ್ನೂ ಓದಿ: Yuvanidhi Yojane-ನಿರುದ್ಯೋಗಿಗಳು ಪ್ರತಿ ತಿಂಗಳು ರೂ 3,000/- ಪಡೆಯಲು ಸ್ವಯಂ ಘೋಷಣೆ ಸಲ್ಲಿಸಲು ಅವಕಾಶ!

ಬೆಂಬಲ ಬೆಲೆ ಯೋಜನೆಯಡಿ(Minimum support price) ರಾಗಿಯನ್ನು ಮಾರಾಟ ಮಾಡಲು ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ? ಬೆಂಬಲ ಬೆಲೆಯಲ್ಲಿ ರೈತರು ರಾಗಿಯನ್ನು ಮಾರಾಟ ಮಾಡಲು ಅನುಸರಿಸಬೇಕಾದ ಕ್ರಮಗಳು ಯಾವುವು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Raagi Kharidi Kendra-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ:

ಪಡಿತರ ಚೀಟಿದಾರರಿಗೆ ಉಚಿತವಾಗಿ/ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಬಿಳಿಜೋಳ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತದೆ. ಇಲ್ಲಿಯವರೆಗೆ ನಿಗದಿಪಡಿಸಿದ ಪ್ರಮಾಣದಲ್ಲಿ ರಾಗಿ ಖರೀದಿಯು ಅಗದಿರುವ ಕಾರಣದಿಂದ ಇನ್ನು ಮುಂದೆ ಒಬ್ಬ ರೈತರಿಂದ ಗರಿಷ್ಟ 30 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: SSLC Exam-ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ KSEEB ಮಂಡಳಿ!

ragi kharidi

ಇದನ್ನೂ ಓದಿ: Pumpset- ರೈತರಿಗೆ ಸಿಹಿ ಸುದ್ದಿ: 'ನವೀಕೃತ ಶೀಘ್ರ ಸಂಪರ್ಕ ಯೋಜನೆ'ಯಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ!

Raagi MSP-ಗರಿಷ್ಠ ಪ್ರಮಾಣ 30 ಕ್ವಿಂಟಾಲ್ ಗೆ ಏರಿಕೆ:

ಕೃಷಿ ಮಾರಾಟ ಇಲಾಖೆಯಿಂದ ಈ ಹಿಂದೆ ಬೆಂಬಲ ಬೆಲೆಯಲ್ಲಿ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ವರೆಗೆ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುತ್ತದೆ ಎಂದು ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು ಈ ನಿಯಮಕ್ಕೆ ಸಡಿಲಿಕೆಯನ್ನು ನೀಡಿ ಈಗ ಗರಿಷ್ಠ ಮಿತಿಯನ್ನು 30 ಕ್ವಿಂಟಾಲ್ ಗೆ ಏರಿಕೆ ಮಾಡಲಾಗಿದೆ.

Raagi Bembala Bele-ರಾಗಿ ಬೆಂಬಲ ಬೆಲೆ ಎಷ್ಟು?

ರೈತರು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನು ಮಾರಾಟ ಮಾಡಲು ಪ್ರತಿ ಕ್ವಿಂಟಾಲ್ ಗೆ ₹4290/- ರೂ ದರವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!

Fruits ID-ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಈ ನಿಯಮ ಕಡ್ಡಾಯ:

ರೈತರು ಕನಿಷ್ಥ ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕೃಷಿ ಇಲಾಖೆಯಿಂದ ಪ್ರತಿ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಸುವ ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿಯು ದಾಖಲಾಗಿರುವುದು ಕಡ್ಡಾಯವಾಗಿದೆ ಒಂದೊಮ್ಮೆ ಬೆಳೆ ಸಮೀಕ್ಷೆ ಮಾಹಿತಿ ದಾಖಲಾಗದೇ ಇದ್ದಲ್ಲಿ ಅಥವಾ ತಾಳೆಯಾಗದೇ ಇದ್ದರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುವುದಿಲ್ಲ.

ಎರಡನೇಯದಾಗಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ತಮ್ಮ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಪ್ರೂಟ್ಸ್ ಐಡಿಯನ್ನು/FID Number ರಚನೆ ಮಾಡಿಕೊಳ್ಳುವುದು ಸಹ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Car Subsidy-ಸಬ್ಸಿಡಿಯಲ್ಲಿ ಕಾರ್ ಮತ್ತು ಆಟೋ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡುವುದು ಹೇಗೆ?

ರೈತರು ಕನಿಷ್ಠ ಬೆಂಬಲ ಬೆಲೆಯಲ್ಲಿ ತಾವು ಬೆಳೆದ ರಾಗಿಯನ್ನು ಮಾರಾಟ ಮಾಡಲು ಮೊದಲು ಖರೀದಿ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ವಿವರವನ್ನು ಒದಗಿಸಿ ನೋಂದಣಿಯನ್ನು ಮಾಡಿಕೊಳ್ಳಬೇಕು ಇದಾದ ನಂತರ ನಿಗದಿಪಡಿಸಿದ ದಿನಾಂಕದಂದು ರಾಗಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.

MSP Helpline-ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕೃತ ಸಹಾಯವಾಣಿ: 1800 425 1552

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: