Crop insurance status- ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ! ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ.

Crop insurance status: ಈ ಬಾರಿ ರಾಜ್ಯಾದ್ಯಂತ ಕೃಷಿ ಕ್ಷೇತ್ರವು ತೀವ್ರ ಮಳೆ ಕೊರತೆಯಿಂದ ದೊಡ್ಡ ಮಟ್ಟದಲ್ಲಿ ರೈತರಿಗೆ ಅರ್ಥಿಕವಾಗಿ ಹಾನಿ ಉಂಟು ಮಾಡಿದೆ. ಬೆಳೆ ನಷ್ಟದಿಂದ ಅರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೆರವಾಗಲು ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ವಿಲೇವಾರಿ ಪ್ರಕ್ರಿಯೆ ಪ್ರಾರಂಭವಾಗಿದೆ.

Crop insurance status- ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ! ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ.
Crop insurance status

ಈ ಬಾರಿ ರಾಜ್ಯಾದ್ಯಂತ ಕೃಷಿ ಕ್ಷೇತ್ರವು ತೀವ್ರ ಮಳೆ ಕೊರತೆಯಿಂದ ದೊಡ್ಡ ಮಟ್ಟದಲ್ಲಿ ರೈತರಿಗೆ ಅರ್ಥಿಕವಾಗಿ ಹಾನಿ ಉಂಟು ಮಾಡಿದೆ. ಬೆಳೆ ನಷ್ಟದಿಂದ ಅರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೆರವಾಗಲು ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ವಿಲೇವಾರಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಅದ್ದರಿಂದ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮಾ ಮಾಡಿಕೊಂಡಿರುವ ರೈತರು ತಾವು ಸಲ್ಲಿಸದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ? ಅಗಿದಲ್ಲಿ ಯಾವ ಹಂತದಲ್ಲಿದೆ ಎಂದು ಹೇಗೆ ತಮ್ಮ ಮೊಬೈಲ್ ಮೂಲಕವೇ ಯಾವುದೇ ಸರಕಾರಿ ಕಚೇರಿ ಭೇಟಿ ಮಾಡದೆ ಹೇಗೆ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಬವುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಬೆಳೆ ವಿಮೆ ಕಟ್ಟಿರುವ ರೈತರು samrakshane ವೆಬ್ಸೈಟ್ ಭೇಟಿ ಮಾಡಿ ತಾವು ಸಲ್ಲಿಸಿದ ಅರ್ಜಿ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಬವುದಾಗಿದೆ. ಈ ಪೋರ್ಟಲ್ ನಲ್ಲಿ ಬೆಳೆ ವಿಮೆ ಅರ್ಜಿ ಸಲ್ಲಿಕೆಯಾಗಿದಿಯೋ ಇಲ್ಲವೋ ಎಂದು ತಿಳಿಯಬವುದು? ಅರ್ಜಿ ಸಲ್ಲಿಕೆ ಅಗಿದರೆ ಯಾವ ಹಂತದಲ್ಲಿದೆ ಎಂದು ತಿಳಿಯಬವುದು ಮತ್ತು ಬೆಳೆ ವಿಮೆ ಪರಿಹಾರದ ಹಣ ಪಾವತಿ ಅದರೆ ಎಷ್ಟು ಹಣ ಜಮಾ ಅಗಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ವೆಬ್ಸೈಟ್ ನಲ್ಲಿ ತಿಳಿಯಬವುದು.

ಇದನ್ನೂ ಓದಿ: Social Welfare Department: ಕೃಷಿ ಜಮೀನು ಖರೀದಿಸಲು ಭೂ ಒಡೆತನ ಯೋಜನೆಯಡಿ ಶೇ 50 ಸಹಾಯಧನದಲ್ಲಿ 25 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Bele vime parihara: ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ! 

ಉದಾಹರಣೆಗೆ ಹಾವೇರಿ ಜಿಲ್ಲೆಯನೇ ತೆಗೆದುಕೊಂಡರೆ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಶೇ. 25 ರಷ್ಟು ಬೆಳೆ ವಿಮೆ ಮಧ್ಯಂತರ ಪರಿಹಾರ ಬಿಡುಗಡೆಯನ್ನು  ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಸುದ್ದಿ ಮಾದ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳೆ ವಿಮೆ ಪರಿಹಾರದ ಹಣ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿರುವ ತೀವ್ರ ಮಳೆಯಕೊರತೆಯಿಂದ ಹಾನಗಲ್ ತಾಲೂಕಿನ ಪ್ರಮುಖ ಬೆಳೆ ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿ ರೈತರಿಗೆ ಹೆಚ್ಚು ನಷ್ಟು ಉಂಟು ಮಾಡಿದೆ. ರೈತರು 2-3 ಸಾಲಿ ಅಳಿಸಿ ಮತ್ತೆ ಬಿತ್ತನೆ ಮಾಡಿದರೂ ಸಹ ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆ ನಾಶವಾಗಿ ರೈತ ಸಮೂಹ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ನಿರ್ವಹಣೆಗೆ ಸಾಕಷ್ಟು ಹಣ ವ್ಯಯ ಮಾಡಿ ತೀವ್ರ ತೊಂದರೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಆಧಾರದ ಮೇಲೆ ಶೇ. 25 ರಷ್ಟು ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಈಗಾಗಲೇ ಆದೇಶಿಸಿ ಸರ್ಕಾರ ರೈತರ ನೆರವಿಗೆ ಧಾವಿಸಿದೆ ಎಂದು ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಹಾವೇರಿ ಜಿಲ್ಲೆಯ ಒಟ್ಟು 3 ಲಕ್ಷ 20 ಸಾವಿರ ರೈತರಿಗೆ ಅಂದಾಜು 150 ರಿಂದ 160 ಕೋಟಿ ಮಧ್ಯಂತರ ವಿಮೆ ಪರಿಹಾರ ಲಭಿಸಲಿದ್ದು, ಹಾನಗಲ್ ತಾಲೂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಮಧ್ಯಂತರ ವಿಮೆ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಶ್ರೀನಿವಾಸ ಮಾನೆ ಮಾಹಿತಿ ಹಂಚಿಕೊಂಡಿದ್ಡಾರೆ.

Crop insurance application status check: ಬೆಳೆ ವಿಮೆ ಎಷ್ಟು ಜಮಾ ಅಗಿದೆ? ಮತ್ತು ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಬೆಳೆ ವಿಮೆ ಅರ್ಜಿ ಸಲ್ಲಿಸಿದವರು ರಾಜ್ಯ ಸರಕಾರದ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ ತಮ್ಮ ಅರ್ಜಿ ಸ್ಥಿತಿ ವಿವರ ಮತ್ತು ಬೆಳೆ ವಿಮೆ ಬಿಡುಗಡೆ ಅದ ಬಳಿಕೆ ಎಷ್ಟು ಹಣ ಜಮಾ ಅಗಿದೆ ಎಂದು ಹೇಗೆ ತಿಳಿಯಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ> Crop insurance status check ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಇಲ್ಲಿ ಅರ್ಜಿದಾರರ Proposal Id/mobile no/Aadhar ಹೀಗೆ 3 ಆಯ್ಕೆಯನ್ನು ತೋರಿಸುತ್ತದೆ ‘ನಿಮ್ಮ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಉದಾಹರಣೆಗೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಅರ್ಜಿದಾರರ ಮೊಬೈಲ್ ನಂಬರ್ ಹಾಕಿ ನಂತರ ಕ್ಯಾಪ್ಚರ್ ಕೋಡ್ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: New ration card-  ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

Step-2: ಈ ಮೇಲಿನ ವಿಧಾನವನ್ನು ಅನುಸರಿಸಿದ ನಂತರ ಈ ಪುಟದಲ್ಲಿ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ. ಇದೇ ಪೇಜ್ ನಲ್ಲಿ "GramaOne Payment Successful ಮತ್ತು Approved by Bank and Forwarded to insurance Co.  " ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವವಿಯಾಗಿ ಸಲ್ಲಿಕೆ ಅಗಿದೆ ಎಂದು ಒಂದು ವೇಲೆ "ಬೆಳೆ ನೋಂದಣಿಯು ಪ್ರಗತಿಯಲ್ಲಿದೆ/Data Entry In Progress" ಎಂದು  ಅಥವಾ "No date found" ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು.

Step-3: proposal id ಯ ಕೊನೆಯಲ್ಲಿ ಕಾಣುವ "select" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "view details" ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ಇನ್ನಷ್ಟು ಮಾಹಿತಿ ತೋರಿಸುತ್ತದೆ ರೈತನ ಸರ್ವೆ ನಂಬರ್, ಒಟ್ಟೂ ಬೆಳೆ ವಿಮೆ ಕುರಿತು ಇತರೆ ಅನೇಕ ವಿವರವನ್ನು ಇಲ್ಲಿ ತೋರಿಸುತ್ತದೆ.

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

Crop insurance amount: ಬೆಳೆ ವಿಮೆ ಎಷ್ಟು ಜಮಾ ಅಗಿದೆ? ಎಂದು ತಿಳಿಯುವ ವಿಧಾನ:

ಈ ಮೇಲೆ ತಿಳಿಸಿರುವ ವಿಧಾನ ಅನುಸರಿಸಿದ ಬಳಿಕ ಇದೆ ಪುಟದಲ್ಲಿ ಕೊನೆಯಲ್ಲಿ UTR details ಎಂದು ತೋರಿಸಿ ಬ್ಯಾಂಕ್ ವಿವರ ಗೋಚರಿಸಿದರೆ ನಿಮಗೆ ವಿಮೆ ಜಮಾ ಅಗಿದೆ ಎಂದು ಈ UTR details ಕಾಲಂ ನಲ್ಲಿ ಎಷ್ಟು ಹಣ ಜಮಾ ಅಗಿದೆ ಮತ್ತು ಬ್ಯಾಂಕ್ ಖಾತೆ, ಜಮಾ ಅದ ದಿನಾಂಕದ ವಿವರ ತೋರಿಸುತ್ತದೆ.