Ration card adhar link: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.

ಆತ್ಮೀಯ ಓದುಗ ಮಿತ್ರರೇ ಇಂದು ಈ ಅಂಕಣದಲ್ಲಿ ರೇಷನ್ ಕಾರ್ಡಗೆ(ration card adhar link) ಆಧಾರ್ ಕಾರ್ಡ ಲಿಂಕ್ ಹೇಗೆ ನಿಮ್ಮ ಮೊಬೈಲ್ ನಲ್ಲಿ ಮಾಡಬವುದು? ಮತ್ತು ರೇಷನ್ ಕಾರ್ಡನಲ್ಲಿರುವ ಸದಸ್ಯರ ಇ-ಕೆವೈಸಿ(ration card e-kyc) ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Ration card adhar link: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.
Ration card and adhar card link information

ಆತ್ಮೀಯ ಓದುಗ ಮಿತ್ರರೇ ಇಂದು ಈ ಅಂಕಣದಲ್ಲಿ ರೇಷನ್ ಕಾರ್ಡಗೆ(ration card adhar link) ಆಧಾರ್ ಕಾರ್ಡ ಲಿಂಕ್ ಹೇಗೆ ನಿಮ್ಮ ಮೊಬೈಲ್ ನಲ್ಲಿ ಮಾಡಬವುದು? ಮತ್ತು ರೇಷನ್ ಕಾರ್ಡನಲ್ಲಿರುವ ಸದಸ್ಯರ ಇ-ಕೆವೈಸಿ(ration card e-kyc) ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ರೇಷನ್ ಕಾರ್ಡ ನಲ್ಲಿರುವ ಸದಸ್ಯರ ಆಧಾರ್ ಕಾರ್ಡ ವಿವರವನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ರೇಷನ್ ಕಾರ್ಡಗೆ ಲಿಂಕ್ ಮಾಡಬೇಕು ಎಂದು ಚಿತ್ರ ಸಹಿತ ವಿವರಿಸಲಾಗಿದೆ ಮತ್ತು ರೇಷನ್ ಕಾರ್ಡನಲ್ಲಿ ಎಷ್ಟು ಜನರ ಇ-ಕೆವೈಸಿ ಅಗಿದೆ, ಯಾರದ್ದು ಅಗಿಲ್ಲ ಎಂದು ತಿಳಿಯುವ ವಿಧಾನವನ್ನು ಸಹ ತಿಳಿಸಲಾಗಿದೆ.

Ration card adhar link: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡುವ ವಿಧಾನ:

Step-1: ಪ್ರಥಮದಲ್ಲಿ ಈ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೇಯ ಜಾಲತಾಣ ಭೇಟಿ ಮಾಡಬೇಕು. ನಂತರ ಈ ಪುಟದಲಿ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "ಯುಐಡಿ ಲಿಂಕ್ ಮಾಡಿ" ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಈ ಪ್ರಕ್ರಿಯೆ ಮುಗಿಸಿದ ಬಳಿಕ ಇಲ್ಲಿ ನಿಮ್ಮ ಜಿಲ್ಲೆಯ ವಿಭಾಗ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಗಮನಿಸಿ: ಇಲ್ಲಿ ಒಟ್ಟು ಮೂರು ಲಿಂಕ್ ಗೋಚರಿಸುತ್ತವೆ ಮೊದಲನೇ ಲಿಂಕ್- (BENGALURU(URBAN/RURAL/CITY) districts only) 2ನೇ ಲಿಂಕ್- (Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only) 3ನೇ ಲಿಂಕ್- (Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only) ಜಿಲ್ಲೆಗಳ ಗ್ರಾಹಕರಿಗೆ ಇರುತ್ತದೆ.

ವಿಶೇಷ ಸೂಚನೆ: ಈ ವೆಬ್ಸೈಟ್ ಬೆಳ್ಳಗೆ 8-00 ರಿಂದ ರಾತ್ರಿ 8-00 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.

Step-3: ಈ ಮೇಲಿನ ಎಲ್ಲಾ ಹಂತಗಳನ್ನು ಪೂರ್ಣ ಗೊಳಿಸಿದ ನಂತರದಲ್ಲಿ ಈ ಪೇಜ್ ನಲ್ಲಿ ಗೋಚರಿಸುವ "UID linking for RC members" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. 

Step-4: ಇಲ್ಲಿ "Adhar number" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೇಷನ್ ಕಾರ್ಡನಲ್ಲಿರುವ ಸದಸ್ಯರ ಆಧಾರ್ ನಂಬರ್ ಅನ್ನು ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಿ, ತದನಂತರ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ ಅದನ್ನು "OTP ನಮೂದಿಸಿ" ಕಾಲಂ ನಲ್ಲಿ ಹಾಕಿ ಮತ್ತೆ "GO" ಬಟನ್ ಮೇಲೆ ಕ್ಲಿಕ್ ಮಾಡಿರಿ.

Step-5: ಈ ಹಂತ ಮುಗಿದ ನಂತರ "Enter RC number" ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡ ನಂಬರ್ ಅನ್ನು ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಮ್ಮೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿದ ಬಳಿಕ ನಿಮ್ಮ ರೇಷನ್ ಕಾರ್ಡ  ಸದಸ್ಯರ ಆಧಾರ್ ಲಿಂಕ್ ಅಗುತ್ತದೆ.

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ರೇಷನ್ ಕಾರ್ಡ ಇ-ಕೆವೈಸಿ ಮಾಡುವುದು ಹೇಗೆ?

ಈ ಮೇಲೆ ವಿವರಿಸಿದ ವಿಧಾನದಿಂದ ರೇಷನ್ ಕಾರ್ಡ ಆಧಾರ್ ಲಿಂಕ್ ಮಾಡಬವುದು ಆದರೆ ರೇಷನ್ ಕಾರ್ಡನಲಿರುವ ಸದಸ್ಯರ ಇ-ಕೆವೈಸಿ ಮಾಡಲು ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯನ್ನು ಭೇಟಿ ಮಾಡಿ ಖುದ್ದು ಹಾಜರಾಗಿ ಸದಸ್ಯರು ಹಾಜರಾಗಿ ಬಯೋಮೆಟ್ರಿಕ್ ಕೊಟ್ಟು ಇ-ಕೆವೈಸಿ ಮಾಡಿಕೊಳ್ಳಬೇಕು.

ರೇಷನ್ ಕಾರ್ಡನಲ್ಲಿರುವ ಸದಸ್ಯರಲ್ಲಿ ಯಾರದ್ದು ಇ-ಕೆವೈಸಿ ಅಗಿದೆ ಅಥವಾ ಇಲ್ಲ ಎಂದು ಹೇಗೆ ತಿಳಿಯುವುದು?

ನಿಮ್ಮ ರೇಷನ್ ಕಾರ್ಡನ ಒಟ್ಟು ಸದಸ್ಯರಲ್ಲಿ ಇಲ್ಲಿಯವರೆಗೆ ಎಷ್ಟು ಜನ ಸದಸ್ಯರ ಇ-ಕೆವೈಸಿ ಅಗಿದೆ ಎಷ್ಟು ಜನ ಸದಸ್ಯರ ಇ-ಕೆವೈಸಿ ಅಗಿಲ್ಲ ಎಂದು ತಿಳಿಯಲು.

Step-1:https://ahara.kar.nic.in/lpg/ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ "ಪಡಿತರ ಚೀಟಿ ವಿವರ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ "with OTP" ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಸದಸ್ಯರ ಹೆಸರನ್ನು ಆಯ್ಕೆ ಮಾಡಿಕೊಂಡು OTP ಯನ್ನು ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪುಟದಲ್ಲಿ ನಿಮ್ಮ ರೇಷನ್ ಕಾರ್ಡನ ಸಂಪೂರ್ಣ ವಿವರ ಗೋಚರಿಸುತ್ತದೆ "Members Details" ವಿಭಾದಲ್ಲಿ "e-kyc Status" ನಲ್ಲಿ ಸದಸ್ಯರ ಹೆಸರಿನ ಮುಂದೆ "Yes" ಎಂದು ತೋರಿಸಿದರೆ ಅ ಸದಸ್ಯರ e-kyc ಅಗಿದೆ ಎಂದು "NO" ಎಂದು ತೋರಿಸಿದರೆ ಇ-ಕೆವೈಸಿ ಅಗಿಲ್ಲ ಎಂದು.

ಇದನ್ನೂ ಓದಿ: ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department