A-Khata-ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆಗೆ ಸಚಿವ ಸಂಪುಟದಲ್ಲಿ ನಿರ್ಣಯ!

January 9, 2026 | Siddesh
A-Khata-ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆಗೆ ಸಚಿವ ಸಂಪುಟದಲ್ಲಿ ನಿರ್ಣಯ!
Share Now:

ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲೇ ರಾಜ್ಯದ ಎಲ್ಲಾ ನಗರ ವ್ಯಾಪ್ತಿಯಲ್ಲಿನ ಬಿ-ಖಾತಾ(B-Khatha) ಆಸ್ತಿಗಳಿಗೆ ಎ-ಖಾತಾ(A-Khatha) ಅಧಿಕೃತ ದಾಖಲೆಯನ್ನು ವಿತರಣೆ ಮಾಡಲು ನಿನ್ನೆ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾದ್ದು, ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಿಗೆ ‘A-ಖಾತಾ’ ಪಡೆಯಲು ಅವಕಾಶ, ಸಚಿವ ಸಂಪುಟ ಮಹತ್ವದ ನಿರ್ಧಾರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸುವುದು ಹಾಗೂ ಮಾರಾಟ ಮಾಡುವ ಅನಿಯಂತ್ರಿತ ಪ್ರಕ್ರಿಯೆಯನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ನಿನ್ನೆ ನಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!

ಪ್ರಸ್ತುತ ಲೇಖನದಲ್ಲಿ ಯಾವೆಲ್ಲ ಆಸ್ತಿಗಳಿಗೆ ಎ-ಖಾತಾವನ್ನು(Property Documents) ಪಡೆಯಲು ಅವಕಾಶ ನೀಡಲಾಗಿದೆ? ಸಾರ್ವಜನಿಕರು ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳೇನು? ಸಾರ್ವಜನಿಕರು ಆಸ್ತಿಗಳಿಗೆ ಎ-ಖಾತಾ ಪಡೆಯುವುದರಿಂದ ಅಗುವ ಪ್ರಯೋಜನಗಳೇನು ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

B-Khatha To A-Khata-ಬಿ-ಖಾತಾ ನಿವೇಶನಗಳಿಗೆ ಈಗ ‘ಎ-ಖಾತಾ’ ಪಡೆಯಲು ಅವಕಾಶ:

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳು, ಬಿ-ಖಾತಾ ನಿವೇಶನಗಳು, ಕಟ್ಟಡಗಳು ಅಥವಾ ಅಪಾರ್ಟ್‌ಮೆಂಟ್‌ಗಳು ಇವೆ. ಇವುಗಳಿಗೆ ಈಗ ಸರ್ಕಾರ ಷರತ್ತುಬದ್ಧವಾಗಿ ‘ಎ-ಖಾತಾ’ ನೋಂದಣಿ ಮಾಡಿ ಅಧಿಕೃತ ದಾಖಲೆಯನ್ನು ನೀಡಲು ತೀರ್ಮಾನಿಸಿದೆ.

Who Can Get A-Khata-ಯಾವೆಲ್ಲ ಬಿ-ಖಾತಾಗೆ ಎ-ಖಾತಾ ದಾಖಲೆಯನ್ನು ಪಡೆಯಬವುದು?

ಸಂಬಂಧಿತ ನಿವೇಶನ / ಕಟ್ಟಡ / ಅಪಾರ್ಟ್‌ಮೆಂಟ್‌ಗಳು ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆಯದವರು.

ನಿಗದಿತ ನಿಬಂಧನೆಗಳನ್ನು ಪೂರೈಸಿದ ನಂತರ ಮಾತ್ರ ಎ-ಖಾತಾ ಪ್ರಮಾಣಪತ್ರ ನೀಡಲಾಗುತ್ತದೆ.

ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೆ ಇದು ಸಹಾಯಕವಾಗಲಿದ್ದು, ಭವಿಷ್ಯದ ಕಾನೂನು ತಕರಾರುಗಳನ್ನೂ ತಪ್ಪಿಸುತ್ತದೆ.

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

B-Khatha To A-Khata

ಇದನ್ನೂ ಓದಿ: Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

A-Khata Benefits-ಎ-ಖಾತಾ ಪಡೆಯುವುದರಿಂದ ಆಗುವ ಪ್ರಯೋಜನಗಳೇನು?

ನಗರ ಪ್ರದೇಶದ ಮಾಲೀಕರು ತಮ್ಮ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾವನ್ನು ಪಡೆಯುವುದರಿಂದ ಯಾವೆಲ್ಲ ರೀತಿಯ ಪ್ರಯೋಜನಗಳಿವೆ ಎನ್ನುವ ಪಟ್ಟಿ ಈ ಕೆಳಗಿನಂತಿವೆ:

ಆಸ್ತಿಗಳಿಗೆ ಎ-ಖಾತಾವನ್ನು ಪಡೆಯುವುದರಿಂದ ಆಸ್ತಿಯ ಮೌಲ್ಯ ಹೆಚ್ಚುತ್ತದೆ.

ಆಸ್ತಿ ಮಾರಾಟ ಮತ್ತು ಖರೀದಿಗೆ ಯಾವುದೇ ಕಾನೂನು ತೊಡಕು ಬರುವುದಿಲ್ಲ ಸರಳವಾಗಿ ಮಾರಾಟ ಮತ್ತು ಖರೀದಿ ಮಾಡಬಹುದು.

ಆಸ್ತಿಯ ಮೇಲೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಬಹುದು.

ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಪಾವತಿಯಲ್ಲಿ ಸ್ಪಷ್ಟತೆ ಸಿಗುತ್ತದೆ.

ಇದನ್ನೂ ಓದಿ: Morarji Desai admission-ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ!

A-Khata Information-ಸರ್ಕಾರವು ಎ-ಖಾತಾ ವಿತರಣೆಯ ಹಿಂದಿರುವ ಉದ್ದೇಶವೇನು?

ಸರ್ಕಾರವು ಅನಧಿಕೃತ ಬಡಾವಣೆಗಳಿಗೆ ಶಾಶ್ವತ ಕಡಿವಾಣ ಹಾಕುವುದು ಮತ್ತು ನಗರ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ನಿಯಂತ್ರಣಕ್ಕೆ ತಂದು ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಈ ತೀರ್ಮಾನವನ್ನು ಕೈಗೊಂಡಿದೆ. ಜೊತೆಗೆ, ಜನರು ಅನುಭವಿಸುತ್ತಿರುವ ಎ-ಖಾತಾ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿದೆ.

A-Khata Application-ಎ-ಖಾತಾ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸ್ತಿಯ ಮಾಲೀಕರು ಬಿ-ಖಾತಾ ಆಸ್ತಿಗಳಿಗೆ ಎ-ಖಾತಾವನ್ನು ಪಡೆಯಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಗರ ಸಭೆ/ಪುರಸಭೆ/ಮಹಾನಗರ ಪಾಲಿಕೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bele Parihara Amount-ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆ!

Required Documents For A-Khata-ಅರ್ಜಿ ಸಲ್ಲಿಸಲು ಅವಶ್ಯವ ದಾಖಲೆಗಳು:

ಆಸ್ತಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳು.
ಮಾಲೀಕರ ಆಧಾರ್ ಕಾರ್ಡ
ಗುರುತಿನ ಚೀಟಿ
ವಿದ್ಯುತ್ ಬಿಲ್
ಮೊಬೈಲ್ ನಂಬರ್

For More Information-ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್- Click Here
ಸಹಾಯವಾಣಿ-7259585959

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: