Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!

January 28, 2026 | Siddesh
Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!
Share Now:

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಮತ್ತೊಂದು ಬಲ ತುಂಬಲು ಸಜ್ಜಾಗಿದೆ. ಇಂದು ಆಧಾರ್ ಪ್ರಾಧಿಕಾರದಿಂದ ಅಧಿಕೃತವಾಗಿ ಆಧಾರ್ ಕಾರ್ಡ(New Aadhar App) ಮೊಬೈಲ್ ಅಪ್ಲಿಕೇಶನ್ ಹೊಸ ಅವೃತ್ತಿಯನ್ನು ಬಿಡುಗಡೆ ಮಾಡಿದ್ದು ಸಾರ್ವಜನಿಕರು ಈ ಆ್ಯಪ್ ಅನ್ನು ತಮ್ಮ ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಿಕೊಂಡು ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಇನ್ನುಂದೆ ಸಾರ್ವಜನಿಕರು ದೈನಂದಿನ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಅಗತ್ಯವಿರುವ ಸಮಯದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ(New Aadhar App)ಗುರುತಿನ ಚೀಟಿಯನ್ನು ಸಲ್ಲಿಸಬೇಕಾದಾಗ ಆಧಾರ್ ಕಾರ್ಡ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸುಲಭವಾಗಿ ಆಧಾರ್ ಕಾರ್ಡ ಗುರುತಿನ ಚೀಟಿಯನ್ನು ಬಳಕೆ ಮಾಡಬವುದಲ್ಲದೇ ಇನ್ನಿತರೆ ಅನೇಕ ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Marriage Registration-ಇನ್ಮುಂದೆ ಮನೆಯಲ್ಲೇ ಕುಳಿತು ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿ!

ಪ್ರಸ್ತುತ ಲೇಖನದಲ್ಲಿ ಆಧಾರ್ ಅಪ್ಲಿಕೇಶನ್(Aadhar Mobile App) ಅನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಹೇಗೆ ಬಳಕೆ ಮಾಡಬಹುದು? ಈ ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದರಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳಿವೆ? ಈ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Aadhar App Download Benefits-ಆಧಾರ್ ಅಪ್ಲಿಕೇಶನ್ ಬಳಕೆ ಮಾಡುವುದರಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳಿವೆ?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಹೊಸ ಆವೃತಿಯೊಂದಿಗೆ ಪ್ರಸ್ತುತ ಗೂಗಲ್ ಪ್ಲೈ ಸ್ಟೋರ್ ನಲ್ಲಿ ಬಿಡುಗಡೆ ಮಾಡಿರುವ ಆಧಾರ್ ಅಪ್ಲಿಕೇಶನ್/Aadhaar App ಸಾರ್ವಜನಿಕರಿಗೆ ಅನೇಕ ಡಿಜಿಟಲ್ ಸೇವೆಗಳನ್ನು ಒದಗಿಸುತ್ತವೆ. ಈ ಅಪ್ಲಿಕೇಶನ್‌ಗಳ ಪ್ರಮುಖ ಪ್ರಯೋಜನಗಳು ಇಲ್ಲಿವೆ:

ಡಿಜಿಟಲ್ ಆಧಾರ್ (Aadhar Soft Copy): ಸಾರ್ವಜನಿಕರು ಕಎಲ್ಲೆಡೆ ಭೌತಿಕ ಆಧಾರ್ ಕಾರ್ಡ್ (Physical Card) ಹೊತ್ತೊಯ್ಯುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್‌ನಲ್ಲಿರುವ ಡಿಜಿಟಲ್ ಪ್ರತಿ ಅಧಿಕೃತ ಗುರುತಿನ ಚೀಟಿಯಾಗಿ ಬಳಕೆ ಮಾಡಬಹುದಾಗಿದೆ.

ಬಯೋಮೆಟ್ರಿಕ್ ಲಾಕಿಂಗ್ (Biometric Lock/Unlock): ನಿಮ್ಮ ಬೆರಳಚ್ಚು ಅಥವಾ ಕಣ್ಣಿನ ಗುರುತಿನ ಮಾಹಿತಿಯನ್ನು (Biometrics) ದುರುಪಯೋಗವಾಗದಂತೆ ಅಪ್ಲಿಕೇಶನ್ ಮೂಲಕವೇ ಲಾಕ್ ಅಥವಾ ಅನ್‌ಲಾಕ್ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!

ಕುಟುಂಬದ ಪ್ರೊಫೈಲ್ ನಿರ್ವಹಣೆ: ಒಂದೇ ಅಪ್ಲಿಕೇಶನ್‌ನಲ್ಲಿ ಕುಟುಂಬದ ಐವರು ಸದಸ್ಯರ ಆಧಾರ್ ಪ್ರೊಫೈಲ್‌ಗಳನ್ನು ಸೇರಿಸಬಹುದು ಮತ್ತು ಎಲ್ಲಾ ಆಧಾರ್ ಕಾರ್ಡ ಅನ್ನು ಒಂದೇ ಅಪ್ಲಿಕೇಶನ್ ಅನ್ನು ಇಟ್ಟುಕೊಳ್ಳಬಹುದು ಅವಶ್ಯವಿರುವ ಸಮಯದಲ್ಲಿ ಹುಡುಕುವ ಸಮಸ್ಯೆ ಬರುವುದಿಲ್ಲ.

ಆಧಾರ್ ಕಾರ್ಡ ಸೇವೆಗಳು ಲಭ್ಯ: ಅಪ್ಲಿಕೇಶನ್ ಮೂಲಕ ಸುಲಭವಾಗಿ ಇ-ಆಧಾರ್ ಡೌನ್‌ಲೋಡ್ ಮಾಡಬಹುದು, ವಿಳಾಸ ಬದಲಾವಣೆ ಮತ್ತು ಮೊಬೈಲ್ ನಂಬರ್ ತಿದ್ದುಪಡಿ ಸಹ ಮಾಡಬಹುದು ಮತ್ತು PVC ಆಧಾರ್ ಕಾರ್ಡ್ ಆರ್ಡರ್ ಮಾಡಬಹುದು.

ಮುಖದ ದೃಢೀಕರಣ (Face Authentication): ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಫೇಸ್ ಅಥೆಂಟಿಕೇಶನ್ ಆಯ್ಕೆಯನ್ನು ಬಳಕೆ ಮಾಡಿ ಭೌತಿಕ ದಾಖಲೆಗಳಿಲ್ಲದೆ ಗುರುತಿನ ಪರಿಶೀಲನೆ ನಡೆಸಬಹುದಾಗಿದೆ.

ಆಫ್‌ಲೈನ್ ಪರಿಶೀಲನೆ: ಇಂಟರ್ನೆಟ್ ಇಲ್ಲದಿದ್ದರೂ ಕ್ಯೂಆರ್ ಕೋಡ್ (QR Code) ಮೂಲಕ ಗುರುತಿನ ಚೀಟಿಯನ್ನು ತೋರಿಸಲು ಅಥವಾ ಹಂಚಿಕೊಳ್ಳಲು ಈ ಮೊಬೈಲ್ ಅಪ್ಲಿಕೇಶನ್ ಸಹಕಾರಿಯಾಗಿದೆ.

ನೇರ ನಗದು ವರ್ಗಾವಣೆ (DBT): ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂಬ ಮಾಹಿತಿಯನ್ನು ಪರಿಶೀಲಿಸಿ, ಸರ್ಕಾರಿ ಸೌಲಭ್ಯಗಳ ಹಣ ನೇರವಾಗಿ ಖಾತೆಗೆ ಬರುವುದನ್ನು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!

Aadhar App Download

Key Features of the Aadhaar App-ಆಧಾರ್ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು:

ಕಾಗದರಹಿತ ಪರಿಶೀಲನೆ: ಭೌತಿಕ ಕಾರ್ಡ್ ಬದಲಿಗೆ ಮೊಬೈಲ್ ಮೂಲಕವೇ ಇ-ಕೆವೈಸಿ (e-KYC) ಸೌಲಭ್ಯ.

ಆಫ್‌ಲೈನ್ ಪರಿಶೀಲನೆ: ಇಂಟರ್ನೆಟ್ ಇಲ್ಲದಿದ್ದರೂ ಕ್ಯೂಆರ್ ಕೋಡ್ ಮೂಲಕ ಗುರುತು ದೃಢೀಕರಣ.

ಸರಳ ವಿನ್ಯಾಸ: ಹಿರಿಯರು ಮತ್ತು ಕಡಿಮೆ ಓದಿದವರೂ ಸುಲಭವಾಗಿ ಬಳಸುವಂತೆ ಸರಳವಾದ ಇಂಟರ್ಫೇಸ್.

ಬಹುಭಾಷಾ ಬೆಂಬಲ: ಕನ್ನಡ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಅಪ್ಲಿಕೇಶನ್ ಲಭ್ಯವಿದೆ.

ಇದನ್ನೂ ಓದಿ: LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?

How To Download Aadhaar App-ಆಧಾರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಸಾರ್ವಜನಿಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಧಿಕೃತ ಹೊಸ ಆವೃತಿಯ ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ "Download Aadhaar App" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.

ಇದನ್ನೂ ಓದಿ: Property Registration Rules-ಆಸ್ತಿ ನೋಂದಣಿಗೆ ಹೊಸ ನಿಯಮ ತಪ್ಪದೇ ಈ ಮಾಹಿತಿ ತಿಳಿಯಿರಿ!

Aadhar App Download Benefits

ಇದನ್ನೂ ಓದಿ: SSLC Prize Money-ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ಭರ್ಜರಿ ಕೊಡುಗೆ: ಲ್ಯಾಪ್‌ಟಾಪ್ ಬದಲು ₹50,000 ನಗದು ಬಹುಮಾನ!

Step-2: ಬಳಿಕ Open ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ಸಂದೇಶದ ಮೂಲಕ ಬರುವ OTP ಅನ್ನು ನಮೂದಿಸಿ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗಿ ಆಧಾರ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದಾಗಿದೆ.

UIDAI ಸಂಸ್ಥೆಯ ಈ ಮಹತ್ವದ ನಿರ್ಧಾರವು ಪ್ರತಿಯೊಬ್ಬ ನಾಗರಿಕನ ಡಿಜಿಟಲ್ ಬದುಕನ್ನು ಸರಳಗೊಳಿಸಲಿದೆ. ಆಧಾರ್ ಇನ್ನು ಮುಂದೆ ಕೇವಲ ಒಂದು ಕಾರ್ಡ್ ಅಲ್ಲ, ಅದು ನಿಮ್ಮ ಫೋನ್‌ನಲ್ಲಿರುವ ಶಕ್ತಿಯುತ ಡಿಜಿಟಲ್ ಗುರುತಿನ ಪತ್ರವಾಗಲಿದೆ.

Aadhaar-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಧಾರ್ ಎಕ್ಸ್/ಟ್ವಿಟರ್ ಖಾತೆಯನ್ನು ಭೇಟಿ ಮಾಡಲು ಲಿಂಕ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: