Why Link Aadhaar to RTC-2024: ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಬೇಕು? ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ಪಹಣಿ/RTC/ಉತಾರ್ ಗೆ ಆಧಾರ್ ಕಾರ್ಡ ಅನ್ನು ರೈತರು ಏಕೆ ಲಿಂಕ್ ಮಾಡಬೇಕು? ಮತ್ತು ಈಗಾಗಲೇ ಆಧಾರ್ ಕಾರ್ಡ ಪಹಣಿಗೆ ಲಿಂಕ್(Aadhaar to RTC link) ಅಗಿರುವುದನ್ನು ಚೆಕ್ ಮಾಡುವುದು ಹೇಗೆ? ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

Why Link Aadhaar to RTC-2024: ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಬೇಕು? ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?
Aadhaar to RTC link Status Check-2024

ಪಹಣಿ/RTC/ಉತಾರ್ ಗೆ ಆಧಾರ್ ಕಾರ್ಡ ಅನ್ನು ರೈತರು ಏಕೆ ಲಿಂಕ್ ಮಾಡಬೇಕು? ಮತ್ತು ಈಗಾಗಲೇ ಆಧಾರ್ ಕಾರ್ಡ ಪಹಣಿಗೆ ಲಿಂಕ್(Aadhaar to RTC link) ಅಗಿರುವುದನ್ನು ಚೆಕ್ ಮಾಡುವುದು ಹೇಗೆ? ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಕಂದಾಯ ಇಲಾಖೆಯ ಈ ಹಿಂದಿನ ತಿಂಗಳಲ್ಲಿ ಹೊರಡಿಸಿರುವ ಪ್ರಕಟಣೆಯನ್ವಯ ಎಲ್ಲಾ ರೈತರು ಕಡ್ಡಾಯವಾಗಿ ಜಮೀನಿನ ಎಲ್ಲಾ ಸರ್ವೆ ನಂಬರ್ ಪಹಣಿಗಳಿಗೆ ಆಧಾರ್ ಕಾರ್ಡ ಜೋಡಣೆ(RTC adhar link) ಮಾಡಿಕೊಳ್ಳಬೇಕು.

ಈ ಇಲಾಖೆಯ ಗ್ರಾಮೀಣ ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳು/Village accountant ಗ್ರಾಮ ಮಟ್ಟದಲ್ಲಿ ಆಂದೋಲನ ಮಾದರಿಯಲ್ಲಿ ಆರ್.ಟಿ.ಸಿ ಗಳಿಗೆ ಆಧಾರ್ ಲಿಂಕ್ ಮಾಡಲಾಗುತ್ತಿದೆ.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Why Link Aadhaar to RTC: ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಬೇಕು? 

ಅನೇಕ ರೈತರಿಗೆ ಈ ಕುರಿತು ಒಂದು ಪ್ರಶ್ನೆ ಮೂಡಿರುತ್ತದೆ ನಾವು ಯಾವ ಕಾರಣಕ್ಕೆ ನಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳಿಗೆ ಆಧಾರ್ ಕಾರ್ಡ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂದು ಇದರ ವಿವರ ಹೀಗಿದೆ.

1)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು ಮತ್ತು ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್‌ ಬಂದ್‌ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್‌ ಬಂದ್‌ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಪಹಣಿ/RTC ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ.

2)ಇದಲ್ಲದೇ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ ಬಂದ್‌ ಡಿಜಿಟಲೀಕರಣಗೊಳಿಸಲು ಇಲಾಖೆಯಿಂದ ಯೋಜನೆಯನ್ನು ರೂಪಿಸಲಾಗಿದ್ದು ಅದ್ದರಿಂದ ಈ ಕ್ರಮ ಅನುಸರಿಸುವುದು ಮುಖ್ಯವಾಗಿದೆ.

3)ಕಂದಾಯ ಇಲಾಖೆಯಲ್ಲಿ ರೈತರ ಜಮೀನಿನ ದಾಖಲಾತಿಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲು ಸಹ ಈ ವ್ಯವಸ್ಥೆ ಸಹಕಾರಿಯಾಗಿದೆ.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

How to Check Aadhaar-RTC Linking Status- ರೈತರು ತಮ್ಮ ಪಹಣಿಗೆ/ಉತಾರ್ ಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ಮೂಲಕ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕಂದಾಯ ಇಲಾಖೆ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಪಹಣಿಗೆ/ಉತಾರ್ ಗೆ ಆಧಾರ್ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ RTC adhar link status ಲಿಂಕ್ ಮೇಲೆ ಕ್ಲಿಕ್ ಮಾಡಿ ಭೂಮಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ನಂತರ ಜಮೀನಿನ ಮಾಲೀಕರ ಮೊಬೈಲ್ ನಂಬರ್ ಅನ್ನು ನಮೂದಿಸಿ ಅಲ್ಲೇ ಕೆಳಗೆ ಗೋಚರಿಸುವ ಕ್ಯಾಪ್ಚ್ ಕೋಡ್/Captcha code ಅನ್ನು ಹಾಕಿ "SEND OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ ಒಟಿಪಿ/OTP ಅನ್ನು ಹಾಕಿ "LOGIN" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

Step-2: ಲಾಗಿನ್ ಅದ ನಂತರ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು ಆಧಾರ್ ಕಾರ್ಡನಲ್ಲಿರುವಂತೆ ಹೆಸರನ್ನು ಭರ್ತಿ ಮಾಡಿ "Verify" ಎಂದು ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ "ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ" ಎಂದು ಸೂಚನೆ ನೀಡುತ್ತದೆ ಇದಕ್ಕೆ "OK" ಎಂದು ಕ್ಲಿಕ್ ಮಾಡಬೇಕು.

Step-3: ತದನಂತರ ಇದೆ ಪೇಜ್ ನಲ್ಲಿ ಕೆಳಗೆ ತೋರಿಸುವ "ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ" ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಬಟನ್ ಮೇಲೆ ಟಿಕ್ ಮಾಡಿ ಒಟಿಪಿ ಪಡೆಯಿರಿ/Generate OTP ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ "ಸಲ್ಲಿಸು/Submit" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele vime Claim enquiry- ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಯಾರಲ್ಲಿ ವಿಚಾರಿಸಬೇಕು?

Step-4: ಈ ಪೇಜ್ ನ ಮುಖಪುಟದ ಎಡಬದಿಯಲ್ಲಿ ಕಾಣುವ "ಲಿಂಕ್ ಆಧಾರ್/Link Aadhar" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಕಾಣುವ ನಿಮ್ಮ ಸರ್ವೆ ನಂಬರ್ ಒಂದೊಂದನ್ನು ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ "Link" ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ "Verify OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ "ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?/ Do you want to link your Aadhaar with the RTC?" ಎಂದು ಪ್ರಶ್ನೆ ತೋರಿಸುತ್ತದೆ ಅದಕ್ಕೆ ಹೌದು/Yes ಎಂದು ಕ್ಲಿಕ್ ಮಾಡಿದರೆ ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ/Survey No. already linked" ಎನ್ನುವ ಸಂದೇಶ ತೋರಿಸಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗಿದೆ ಎಂದು ನೀವು ತಿಳಿದುಕೊಳ್ಳಬೇಕು.

RTC adhar link status check website link: Check Now

ಪಹಣಿಗೆ ಮತ್ತು ಆಧಾರ್ ಲಿಂಕ್ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here