Agri Helpline-ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಗೆ ನೂತನ ಸಹಾಯವಾಣಿ ಬಿಡುಗಡೆ!

March 26, 2026 | Siddesh
Agri Helpline-ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಗೆ ನೂತನ ಸಹಾಯವಾಣಿ ಬಿಡುಗಡೆ!
Share Now:

ಬೆಂಗಳೂರು: ರಾಜ್ಯದ ರೈತ ಬಾಂಧವರಿಗೆ ಕೃಷಿ ಇಲಾಖೆಯ(Karnataka Agriculture Department) ವಿವಿಧ ಯೋಜನೆಗಳು ಮತ್ತು ತಾಂತ್ರಿಕ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಿರುವ ಟೋಲ್ ಫ್ರೀ ಸಂಖ್ಯೆಯೊಂದಿಗೆ ಹೆಚ್ಚುವರಿಯಾಗಿ ಹೊಸ ಮೊಬೈಲ್ ವ್ಯಾನಿಟಿ ಸಂಖ್ಯೆಯನ್ನು ಸಕ್ರಿಯಗೊಳಿಸಲಾಗಿದ್ದು, ಇದರಿಂದ ರೈತರು ಯಾವುದೇ ಅಡೆತಡೆಯಿಲ್ಲದೆ ತಜ್ಞರ ಸಲಹೆಗಳನ್ನು ಪಡೆಯಬಹುದಾಗಿದೆ.

ಕೃಷಿ ಇಲಾಖೆಯು ರೈತರ(Farmers) ಕರೆಯಲ್ಲಿ ವಿಳಂಬವಾಗದಂತೆ ಮತ್ತು ಸಕಾಲದಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಕೇವಲ ಒಂದು ಟೋಲ್ ಫ್ರೀ ಸಂಖ್ಯೆಯ ಮೇಲೆ ಒತ್ತಡ ಹೆಚ್ಚಾಗುತ್ತಿದ್ದುದರಿಂದ, ಈಗ ಹೊಸದಾಗಿ 8277003553 ಎಂಬ ವ್ಯಾನಿಟಿ ಸಂಖ್ಯೆಯನ್ನು ಪರಿಚಯಿಸಲಾಗಿದೆ. ರೈತರು ಇನ್ಮುಂದೆ ಈ ಸಂಖ್ಯೆಗೆ ಕರೆ ಮಾಡಿ ತಮ್ಮ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: Ramayana Exam 2026-ಶೃಂಗೇರಿ ಶಾರದಾ ಪೀಠದಿಂದ ರಾಮಾಯಣ ಪರೀಕ್ಷೆಗೆ ಅರ್ಜಿ! ವಿಜೇತ ವಿದ್ಯಾರ್ಥಿಗಳಿಗೆ ₹50,000 ಬಹುಮಾನ!

ಈ ನೂತನ ವ್ಯವಸ್ಥೆಯ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ನೀಡಲು ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಗ್ರಾಮ ಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗಿನ ಎಲ್ಲಾ ಕೃಷಿ ಕಚೇರಿಗಳಲ್ಲಿ(Krishi Ilake) ಈ ಹೊಸ ಸಂಖ್ಯೆಯ ಬಗ್ಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು. ಈ ಮೂಲಕ ಪ್ರತಿಯೊಬ್ಬ ರೈತನಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವ ಗುರಿಯನ್ನು ಇಲಾಖೆಯು ಹಾಕಿಕೊಂಡಿದೆ.

Agriculture Department Helpline-ಯಾವೆಲ್ಲ ಯೋಜನೆಯ ಮಾಹಿತಿ ಲಭ್ಯ?

ಈ ಸಹಾಯವಾಣಿಗೆ ಕರೆ ಮಾಡುವುದರಿಂದ ಈ ಕೆಳಗಿನ ಪ್ರಮುಖ ಯೋಜನೆಗಳ ಮಾಹಿತಿ ಪಡೆಯಬಹುದು:

ಬೆಳೆ ಸಮೀಕ್ಷೆ (Crop Survey): ಬೆಳೆ ದಾಖಲಾತಿ ಕುರಿತಾದ ಸಂಪೂರ್ಣ ಮಾಹಿತಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN): ವಾರ್ಷಿಕ ಆರ್ಥಿಕ ನೆರವಿನ ಯೋಜನೆಯ ವಿವರ.

ಇದನ್ನೂ ಓದಿ: RTC Correction-ಕಂದಾಯ ಅದಾಲತ್: ಪಹಣಿ ತಿದ್ದುಪಡಿ ಅಧಿಕಾರ ತಹಶೀಲ್ದಾರರಿಗೆ ಅಧಿಕೃತ ಆದೇಶ ಪ್ರಕಟ!

Agri Helpline

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY): ಬೆಳೆ ವಿಮೆ ಮತ್ತು ಪ್ರೀಮಿಯಂ ಕುರಿತ ಮಾಹಿತಿ.

ಇಲಾಖಾ ಯೋಜನೆಗಳು: ಕೃಷಿ ಇಲಾಖೆಯ ಅಡಿ ಬರುವ ಎಲ್ಲಾ ಸಹಾಯಧನ ಮತ್ತು ಸೌಲಭ್ಯಗಳ ಮಾಹಿತಿ.

ತಾಂತ್ರಿಕ ಸಲಹೆಗಳು: ಕೃಷಿ ಪದ್ಧತಿ ಮತ್ತು ಆಧುನಿಕ ತಂತ್ರಜ್ಞಾನದ ಕುರಿತು ಮಾರ್ಗದರ್ಶನ.

Karnataka Agriculture Department Helpline-ಸಹಾಯವಾಣಿ ಸಂಖ್ಯೆಗಳು:

ರೈತರು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು:

  • ಟೋಲ್ ಫ್ರೀ ಸಂಖ್ಯೆ: 1800-425-3553
  • ನೂತನ ವ್ಯಾನಿಟಿ ಸಂಖ್ಯೆ: 8277003553

ಇದನ್ನೂ ಓದಿ: Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ!

Agriculture Department Helpline Benefits-ರೈತರಿಗೆ ಇದರಿಂದ ಆಗುವ ಪ್ರಯೋಜನಗಳು:

ತ್ವರಿತ ಸ್ಪಂದನೆ: ಹೊಸ ಸಂಖ್ಯೆಯ ಸೇರ್ಪಡೆಯಿಂದಾಗಿ ಕರೆಗಳು ವೇಗವಾಗಿ ಕನೆಕ್ಟ್ ಆಗಲಿವೆ.

ಸಕಾಲಿಕ ಮಾಹಿತಿ: ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಬೇಕಾದ ಅಗತ್ಯ ಮಾಹಿತಿ ಒಂದೇ ಕರೆ ಮೂಲಕ ಲಭ್ಯ.

ದೂರದ ಪ್ರಯಾಣ ತಪ್ಪಲಿದೆ: ಕಚೇರಿಗಳಿಗೆ ಅಲೆಯುವ ಬದಲು ಮನೆಯಲ್ಲೇ ಕುಳಿತು ಮಾಹಿತಿ ಪಡೆಯಬಹುದು.

ತಾಂತ್ರಿಕ ಪರಿಣತಿ: ಕೃಷಿ ತಜ್ಞರಿಂದ ನೇರವಾದ ಮಾರ್ಗದರ್ಶನ ಸಿಗಲಿದೆ.

Karnataka Agriculture Department Website-ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: