HomeAgricultureAgriculture Loan- ರೈತರ ಸಾಲ ಮರುಪಾವತಿ ರಾಜ್ಯ ಸರಕಾರದಿಂದ ನೂತನ ಕ್ರಮ!

Agriculture Loan- ರೈತರ ಸಾಲ ಮರುಪಾವತಿ ರಾಜ್ಯ ಸರಕಾರದಿಂದ ನೂತನ ಕ್ರಮ!

ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರು ಮಳೆ/ನೀರಿನ ಕೊರತೆ ಸಂಭವಿಸಿ ಉತ್ತಮ ಫಸಲನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ ಈ ಸಮಯದಲ್ಲಿ ಬ್ಯಾಂಕ್ ನಲ್ಲಿ ಪಡೆದಿರುವ ಬೆಳೆ ಸಾಲದ ಮರುಪಾವತಿ ಕುರಿತಂತೆ ರಾಜ್ಯ ಸರಕಾರದಿಂದ ನೂತನ ಕ್ರಮ ಜಾರಿ ಮಾಡಲಾಗಿದೆ.

ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಮರು ಪಾವತಿ ಅವಧಿ ವಿಸ್ತರಣೆ ಕುರಿತು ಕಂದಾಯ ಸಚಿವ ಕೃಷಿ ಬೈರೇಗೌಡರವರು ಸಾಲ ಮರು ಪಾವತಿಗೆ ನೂತನ ಕ್ರಮ ಜಾರಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಗ್ರಾಮೀಣ ಭಾಗದ ರೈತರು ಬೆಳೆ ಬೆಳೆಯಲು ಭೂಮಿ ಸಿದ್ದತೆ, ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡುವ ಸಲುವಾಗಿ ತಮ್ಮ ಹತ್ತಿರದ ಬ್ಯಾಂಕ್ ಗಳಲ್ಲಿ ಕೃಷಿ ಸಾಲ ಪಡೆಯುತ್ತಾರ‍ೆ ಅದರೆ ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಅನೇಕ ರೈತಗೆ ಈ ಬಾರಿ ಸಾಲ ಮರುಪಾವತಿ ಮಾಡುವುದಕ್ಕೆ ಕಷ್ಟದ ಸನ್ನಿವೇಶ ಬಂದಿರುತ್ತದೆ.

ಇದನ್ನೂ ಓದಿ: Fruits Id updates: ಪ್ರೂಟ್ಸ್ ಐಡಿಯಲ್ಲಿ ನಮೂದಿಸಿದ ವಿವರದ ಕುರಿತು ರೈತರು ತಪ್ಪದೇ ಈ ಮಾಹಿತಿ ತಿಳಿಯಿರಿ!

Crop loan-ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ: ಕೃಷಿ ಬೈರೇಗೌಡ

ಸಾಲ ಮರುಪಾವತಿ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ದೇಸೆಯಲ್ಲಿ ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ “ರೈತರ ಸಾಲ ಮರುಪಾವತಿ ಅವಧಿ ಪರಿವರ್ತಿಸಲು ಕ್ರಮ ವಹಿಸಲಾಗಿದ್ದು  ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸುವಂತೆ ಈಗಾಗಲೇ ಬ್ಯಾಂಕ್ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷಿ ಬೈರೇಗೌಡ ರವರು ಮಾಹಿತಿ ಹಂಚಿಕೊಂಡಿದ್ದಾರೆ.

agriculture loan duration-ಅವಧಿ ವಿತರಣೆಯಿಂದ ರೈತರಿ ಸಹಕಾರ:

ಸಾಲ ಮರುಪಾವತಿ ಅವಧಿ ವಿಸ್ತರಣೆ ಕ್ರಮ ಜಾರಿ ಅಗುವುದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಇನ್ನು ಹೆಚ್ಚಿನ ಸಮಯ ಸಿಗುತ್ತದೆ ಇದರಿಂದ ಅನೇಕ ರೈತರಿಗೆ ನೆರವಾಗಲಿದೆ ಎನ್ನುತ್ತಾರೆ ರೈತ ಮಿತ್ರರು.

ಇದನ್ನೂ ಓದಿ: Ganga kalyana yojana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 3 ದಿನ ಮಾತ್ರ ಬಾಕಿ!

Agriculture loan status check- ಈ ಹಿಂದೆ ಆದ ರೈತರ ಸಾಲ ಮನ್ನಾ ವಿವರವನ್ನು ಮೊಬೈಲ್ ನಲ್ಲಿ ತಿಳಿಯುವ ವಿಧಾನ:

ರೈತರು ಈ ಹಿಂದೆ ಸರಕಾರದ ವತಿಯಿಂದ ರೈತರು ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಿರುವ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿ ಹೇಗೆ ತಿಳಿದುಕೊಳ್ಳಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.

Step-1: agriculture loan status ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ “ಮಾದರಿ” ಆಯ್ಕೆ ವಿಧಾಗದಲ್ಲಿ “ರೈತ” ಎಂದು ಆಯ್ಕೆ ಮಾಡಿಕೊಳ್ಳಬೇಕು.

Step-2: ತದನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ನಿಮ್ಮ ಗ್ರಾಮದಲ್ಲಿ ಎಷ್ಟು ಜನರಿಗೆ ಈ ಹಿಂದೆ ಸಾಲ ಮನ್ನಾ ಮಾಡಿದಾಗ ಬ್ಯಾಂಕ್ ನಲ್ಲಿ ಸಾಲ ಎಷ್ಟು ಮನ್ನಾ ಅಗಿದೆ ಎಂದು ಸಂಪೂರ್ಣ ವಿವರ ತೋರಿಸುತ್ತದೆ.

ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮಗೆ ಎಷ್ಟು ಸಾಲ ಮನ್ನಾ ಅಗಿದೆ ಎನ್ನುವ ವಿವರ ನೋಡಬವುದು.

ಇದನ್ನೂ ಓದಿ: Bara parihara-2023: ರಾಜ್ಯ ಸರಕಾರದಿಂದ ಬರ ಪರಿಹಾರದ ಮೊತ್ತ ನಿಗದಿ! ಒಂದು ಎಕರೆಗೆ ಎಷ್ಟು ಸಿಗಲಿದೆ?

ಗಮನಿಸಿ: ಪಟ್ಟಿಯ ಕಾಲಂ ನಲ್ಲಿ ಹಸಿರು ಪಟ್ಟಿಯ ಕಾಲಂ ನಲ್ಲಿ “Yes” ಎಂದು ತೋರಿಸಿ ಅದರೆ ಮುಂದಿನ ಕಾಲಂ ಸಾಲ ಮನ್ನಾ ವಿತರಿಸಲಾಗಿದೆ ಆಯ್ಕೆಯಲ್ಲಿ “Yes” ಎಂದು ಇದ್ದರೆ ಅಂತಹವರಿಗೆ ಸಾಲ ಮನ್ನಾ ಅಗಿದೆ ಎಂದು ತಿಳಿದುಕೊಳ್ಳಬೇಕು.

Most Popular

Latest Articles

Related Articles