HomeGovt SchemesAyushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!

Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!

ನಮ್ಮ ದೇಶದಲ್ಲಿ ಬಡ ವರ್ಗದ ಜನರಿಗೆ ಯಾವುದಾದರು ಆರೋಗ್ಯ ಸಮಸ್ಯೆ ಬಂದರೆ ಅದನ್ನು ಸರಿಪಡಿಸಿಕೊಳ್ಳಲು ದೊಡ್ಡ ಮೊತ್ತ ತೆರಬೇಕಾದ ಪರಿಸ್ಥಿತಿ ಬಂದು ಬಿಡುತ್ತದೆ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ದೇಶಾದ್ಯಂತ ಆಯುಷ್ಮಾನ್ ಭಾರತ್  ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತದೆ.

ಪ್ರಸ್ತುತ ಚಾಲ್ತಿಯಲ್ಲಿ 28,15,37,087 ಅಯುಷ್ಮಾನ್ ಭಾರತ್ ಕಾರ್ಡಗಳು ಚಲಾವಣೆಯಲ್ಲಿದು ಅನೇಕ ಬಡ ಕುಟುಂಬಗಳು ಈ ಯೋಜನೆಯಡಿ ಅತೀ ಕಡಿಮೆ ಹಣ ಬಳಕೆ ಮಾಡಿಕೊಂಡು ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ.

ಆಯುಷ್ಮಾನ್ ಭಾರತ್ ಕಾರ್ಡನಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬವುದು? ಈ ಕಾರ್ಡ ಅನ್ನು ಎಲ್ಲಿ ಪಡೆಯಬೇಕು? ಒದಗಿಸಬೇಕಾದ ದಾಖಲಾತಿಗಳೇನು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: NPCI mapping: ಈ ಕೆಲಸ ಮಾಡಿದರೆ ಗೃಹಲಕ್ಷ್ಮಿ,ಪಿಂಚಣಿ  ಹಣ ಸೇರಿದಂತೆ ಎಲ್ಲಾ ಯೋಜನೆಯ DBT ಹಣ ನಿಮ್ಮ ಖಾತೆಗೆ ಸುಲಭವಾಗಿ ಜಮಾ ಅಗುತ್ತದೆ!

Ayushman Bharat Yojana-ಈ ಕಾರ್ಡ ಅನ್ನು ಎಲ್ಲಿ ಪಡೆಯಬವುದು?

ಅರ್ಹ ಫಲಾನುಭವಿಗಳು ನಿಮ್ಮ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವ ಸೀಂಧು ಪೋರ್ಟಲ್ ಮೂಲಕ ಈ ಕಾರ್ಡ ಪಡೆಯಲು ಅಗತ್ಯ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಬವುದು.

ಒದಗಿಸಬೇಕಾದ ದಾಖಲಾತಿಗಳೇನು?

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
ರೇಷನ್ ಕಾರ್ಡ ಪ್ರತಿ.
ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Bara parihara-ಈ ದಿನಾಂಕದ ಒಳಗಾಗಿ FID ನಂಬರ್ ಮತ್ತು ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಜೋಡಣೆ ಮಾಡಿಕೊಂಡರೆ ಮಾತ್ರ ಬರ ಪರಿಹಾರ ಸಿಗಲಿದೆ!

Ayushman Bharat card-ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಎಷ್ಟು ಸಹಾಯಧನ ಪಡೆಯಬಹುದು? 

ಈ ಯೋಜನೆಯಡಿ ವೈದ್ಯಕೀಯ ಸೇವೆಗಳಿಗೆ ಅರ್ಥಿಕ ನೆರವು ಪಡೆಯಲು ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಅರ್ಜಿ ಸಲ್ಲಿಸಬವುದು ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. 

Ayushman Bharat-ಯಾವೆಲ್ಲ ಚಿಕಿತ್ಸೆಗಳಿಗೆ ಅರ್ಥಿಕ ಸಹಾಯಧನ ಪಡೆಯಬಹುದು?

ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಇದನ್ನೂ ಓದಿ: New Ration card- ಸರಕಾರದಿಂದ ಹೊಸ ರೇಷನ್ ಕಾರ್ಡ ವಿತರಣೆಗೆ ದಿನಾಂಕ ನಿಗದಿ!

ನಿಮ್ಮ ಹತ್ತಿರದ ಯಾವ ಹಾಸ್ಪಿಟಲ್ ನಲ್ಲಿ ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು ಎಂದು ತಿಳಿಯುವ ವಿಧಾನ:

ಸಾರ್ವಜನಿಕರು ಈ ಯೋಜನೆಯಡಿ ಸರಕಾರಿ ಮತ್ತು ಖಾಸಗಿ ಹಾಸ್ಪಿಟಲ್ ನಲ್ಲಿಯು ವೈದ್ಯಕೀಯ ಸೇವೆಗಳಿಗೆ ಅರ್ಥಿಕ ಸಹಾಯಧನ ಪಡೆಯಬಹುದು ಈ ಕೆಳಗಿನ ಲಿಂಕ್ FIND Hospital ಮೇಲೆ ಕ್ಲಿಕ್ ಮಾಡಿ ರಾಜ್ಯ, ನಿಮ್ಮ ಜಿಲ್ಲೆ, ಇತರ ಆಯ್ಕೆಗಳನ್ನು ಕ್ಲಿಕ್ ಮಾಡಿ ಪರಿಶೀಲಿಸಿಕೊಳ್ಳಬವುದು.

ಈ ಯೋಜನೆಯಡಿ ಸೌಲಭ್ಯ ಹಾಗೂ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು,
ಸಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು,
ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು,
ಆರೋಗ್ಯ ಸಹಾಯವಾಣಿ 104, ಟೋಲ್ ಫ್ರೀ ಸಂಖ್ಯೆ: 1800 425 8330

ಇನ್ನು ಹೆಚ್ಚಿನ ಮಾಹಿತಿಗಾಗಿ:

ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್  ಅಧಿಕೃತ ವೆಬ್ಸೈಟ್ : click here 

ಇದನ್ನೂ ಓದಿ: NPCI status: ಬರಪರಿಹಾರ, ಬೆಳೆವಿಮೆ ,ಮತ್ತು ಪಿ ಎಂ ಕಿಸಾನ್ ಹಣ ಜಮಾ ಆಗಲು NPCI ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Most Popular

Latest Articles

Related Articles