Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

December 14, 2025 | Siddesh
Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!
Share Now:

ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಂಡಿರುವ ನಾಗರಿಕರು ಒಂದೇ ಬಾರಿಗೆ ರಿಯಾಯಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಲು ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(Bank Loan Settlement Yojane)ಯನ್ನು ಅನುಷ್ಥಾನ ಮಾಡಲಾಗುತ್ತಿದ್ದು, ರಾಜ್ಯದಲ್ಲಿರುವ ಬಹುತೇಕ ಬ್ಯಾಂಕ್ ನಲ್ಲಿ ಅವಕಾಶವನ್ನು ನೀಡಲಾಗಿದ್ದು ಈ ಯೋಜನೆಯ ಕುರಿತು ಹಲವು ಜನರಿಗೆ ಮಾಹಿತಿಯ ಕೊರತೆ ಇರುವ ಕಾರಣ ಇಂದಿನ ಅಂಕಣದಲ್ಲಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕೃಷಿ ಸಾಲ, ಉದ್ದಿಮೆ ಸಾಲ ಸೇರಿದಂತೆ ಇನ್ನಿತರೆ ಹಲವು ಬಗ್ಗೆಯ ಸಾಲಗಳನ್ನು ಪಡೆದುಕೊಂಡು ನಾಗರಿಕರು ಸರಿಯಾಗಿ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡದೇ ಇದ್ದಲ್ಲಿ ಇಂತಹ ಪ್ರಕರಣಗಳಲ್ಲಿ ಬಹುತೇಕ ರಾಜ್ಯದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(Bank Loan Settlement Scheme In Karnataka) ಯೋಜನೆಯಡಿ ಕಡಿಮೆ ಸಾಲದ ಮೊತ್ತ ಮತ್ತು ಬಡ್ಡಿ ರಿಯಾಯಿತಿಯನ್ನು ಪಡೆದು ಸಾಲವನ್ನು ಮರು ಪಾವತಿ ಮಾಡುವ ಜನಸ್ನೇಹಿ ಅವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ: Agriculture Subsidy Schemes-ಕೃಷಿ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

ಈ ಲೇಖನದಲ್ಲಿ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(Loan Settlement Scheme) ಎಂದರೇನು? ಇದರಿಂದ ಸಾಲಗಾರಿಗೆ ಯಾವೆಲ್ಲ ಪ್ರಯೋಜನಗಳಿವೆ? ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ನಾಗರಿಕರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರವನ್ನು ಸೇರಿದಂತೆ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bank Loan Settlement Scheme-ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ(OTS) ಎಂದರೇನು?

ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ (One Time Settlement – OTS) ಎಂಬುದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ನೀಡುವ ಒಂದು ವಿಶೇಷ ವ್ಯವಸ್ಥೆಯಾಗಿದೆ. ಈ ಯೋಜನೆಯಡಿ, ಸಾಲಗಾರರು ದೀರ್ಘಕಾಲ ಬಾಕಿ ಉಳಿದಿರುವ ಸಾಲವನ್ನು ಒಮ್ಮೆಲೇ (ಏಕಕಾಲದಲ್ಲಿ) ಕಡಿಮೆ ಮೊತ್ತದಲ್ಲಿ ಪಾವತಿಸಿ ಸಾಲ ಮುಕ್ತರಾಗಲು ಅವಕಾಶ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಯೋಜನೆ NPA (Non-Performing Asset) ಆಗಿರುವ ಸಾಲಗಳಿಗೆ ಅನ್ವಯಿಸುತ್ತದೆ.

ಸರಳವಾಗಿ ಹೇಳುವುದಾದರೆ ಬ್ಯಾಂಕ್‌ಗೆ ಸಂಪೂರ್ಣ ಸಾಲ ವಸೂಲಿ ಆಗದ ಸ್ಥಿತಿಯಲ್ಲಿ, ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ಸಾಲದ ಒಂದು ಭಾಗವನ್ನು ಪಾವತಿಸಿದರೆ ಉಳಿದ ಬಾಕಿಯನ್ನು ಮನ್ನಾ ಮಾಡಿ ಖಾತೆಯನ್ನು ಮುಚ್ಚುವುದು OTS ಯೋಜನೆ.

ಇದನ್ನೂ ಓದಿ: PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

Bank Loan One Time Settlement

Bank Loan Settlement Objectives-OTS ಯೋಜನೆಯ ಉದ್ದೇಶಗಳು:

ಸಾಲಗಾರರಿಗೆ ಸಾಲದ ಭಾರ ಕಡಿಮೆ ಮಾಡುವುದು.

ಬ್ಯಾಂಕ್‌ಗೆ ಬಾಕಿ ಹಣವನ್ನು ವೇಗವಾಗಿ ವಸೂಲಿ ಮಾಡಿಕೊಳ್ಳುವುದು.

ನ್ಯಾಯಾಲಯದ ಪ್ರಕರಣಗಳು ಮತ್ತು ಕಾನೂನು ತೊಂದರೆಗಳನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

Who Can Apply-ಯಾರಿಗೆ ಅನ್ವಯಿಸುತ್ತದೆ?

ಬ್ಯಾಂಕ್ ಸಾಲ NPA ಆಗಿರುವ ಖಾತೆದಾರರು ಅರ್ಜಿ ಸಲ್ಲಿಸಬಹುದು.

ಕೃಷಿ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, MSME ಸಾಲಗಳನ್ನು ಪಡೆದಿರುವವರು ಸಹ ಅರ್ಹರು.

ಬ್ಯಾಂಕ್ ಘೋಷಿಸಿದ OTS ಅವಧಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ.

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

Bank Loan One Time Settlement Benefits-ಈ ಯೋಜನೆಯಿಂದ ಸಾಲಗಾರಿಗೆ ಯಾವೆಲ್ಲ ಪ್ರಯೋಜನಗಳಿವೆ?

OTS ಯೋಜನೆ ಅಡಿಯಲ್ಲಿ ಸಾಲ ಇತ್ಯರ್ಥ ಮಾಡಿದರೆ ಸಾಲಗಾರರಿಗೆ ಕೆಳಗಿನ ಪ್ರಮುಖ ಪ್ರಯೋಜನಗಳು ದೊರೆಯುತ್ತವೆ.

ಸಾಲದ ಮೊತ್ತದಲ್ಲಿ ರಿಯಾಯಿತಿ: ಮೂಲಧನ ಮತ್ತು ಬಡ್ಡಿಯ ಮೇಲೆ ಗಣನೀಯ ರಿಯಾಯಿತಿ ಸಿಗುತ್ತದೆ, ಸಂಪೂರ್ಣ ಸಾಲ ಪಾವತಿಸುವ ಅಗತ್ಯವಿಲ್ಲ, ಕಡಿಮೆ ಮೊತ್ತದಲ್ಲೇ ಸಾಲ ಮುಕ್ತರಾಗಬಹುದು.

ಒಮ್ಮೆಲೇ ಸಾಲ ಮುಕ್ತಿಯಾಗುವ ಅವಕಾಶ: ದೀರ್ಘಕಾಲ EMI ಒತ್ತಡದಿಂದ ಪೂರ್ಣ ಮುಕ್ತಿ, ಸಾಲ ಖಾತೆ ಒಮ್ಮೆಲೇ ಕ್ಲೋಸ್ ಆಗುತ್ತದೆ.

ಕಾನೂನು ಕ್ರಮಗಳಿಂದ ರಕ್ಷಣೆ: ಬ್ಯಾಂಕ್ ಕಡೆಯಿಂದ ನಡೆಯಬಹುದಾದ, ನೋಟಿಸ್, ಕೋರ್ಟ್ ಕೇಸ್, ಹರಾಜು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ: Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

ಮಾನಸಿಕ ಒತ್ತಡ ಕಡಿಮೆ: ಸಾಲದ ವಿಚಾರದಲ್ಲಿ ನಿರಂತರ ಚಿಂತೆ, ಬ್ಯಾಂಕ್ ಕರೆಗಳು ಮುಕ್ತಾಯ, ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆ.

ವ್ಯಾಪಾರ / ಉದ್ಯೋಗದ ಮೇಲೆ ಗಮನ ಹರಿಸಬಹುದು: ಸಾಲದ ಒತ್ತಡ ಕಡಿಮೆಯಾಗುವುದರಿಂದ ವ್ಯಾಪಾರ ವಿಸ್ತರಣೆ ಅಥವಾ ಉದ್ಯೋಗದ ಮೇಲೆ ಗಮನಹರಿಸಬಹುದು.

ಆಸ್ತಿ ಕಳೆದುಕೊಳ್ಳುವ ಅಪಾಯ ಕಡಿಮೆ: ಗೃಹ, ಜಮೀನು, ಯಂತ್ರೋಪಕರಣಗಳ ಮೇಲೆ ಹರಾಜು ಬೀಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Insurance Scholarship-TATA AIA ಲೈಫ್ ಇನ್ಶುರೆನ್ಸ್ ವತಿಯಿಂದ 15,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

How To Apply-ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆಯಡಿ ಪ್ರಯೋಜನವನ್ನು ಪಡೆಯುವುದು ಹೇಗೆ?

ಸಾಲಗಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಈಗಾಗಲೇ ಸಾಲವನ್ನು ಹೊಂದಿರುವ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಒಟ್ಟು ಸಾಲದ ಬಗ್ಗೆ ಮಾಹಿತಿಯನ್ನು ಪಡೆದು ಪ್ರಸ್ತುತ ಎಷ್ಟು ಮೊತ್ತವನ್ನು ಪಾವತಿ ಮಾಡಬೇಕು ಎಂದು ತಿಳಿದು ಸಾಲವನ್ನು ಮರು ಪಾವತಿ ಮಾಡಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: