HomeAgricultureBorewell subsidy scheme-2024: ಸಹಾಯಧನದಲ್ಲಿ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

Borewell subsidy scheme-2024: ಸಹಾಯಧನದಲ್ಲಿ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

ಕರ್ನಾಟಕ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದಿಂದ ಸಹಾಯಧನದಲ್ಲಿ ಬೋರ್ವೆಲ್/ಕೊಳವೆ ಬಾವಿಯನ್ನು ಕೊರೆಸುವ ಯೋಜನೆಗೆ(Borewell subsidy scheme) ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ನೀಡಲಾಗಿದೆ.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್, ಅಗತ್ಯ ದಾಖಲೆಗಳ ಮಾಹಿತಿ ಸೇರಿದಂತೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ 3 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ ಮತ್ತು ವಾಸವಿ ಜಲಶಕ್ತಿ(Borewell subsidy scheme)ಯೋಜನೆಗಳಿಗೆ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: male munsuchane-ರಾಜ್ಯದ ಮಳೆ ಮುನ್ಸೂಚನೆ ವಿವರ ಹೀಗಿದೆ!

Borewell subsidy scheme details-ಯೋಜನೆಯ ಉದ್ದೇಶ:

ಈ ಯೋಜನೆಯಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪ್ ಸೆಟ್ ಅಳವಡಿಸುವುದು ಮತ್ತು ವಿದ್ಯುದ್ಧೀಕರಣವನ್ನು ಮಾಡಿಸಲು ಅತೀ ಕಡಿಮೆ ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ.2.00 ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ರೂ.50,000/- ಸಹಾಯಧನ ನೀಡಿ ಕೃಷಿಗೆ ಅನುವಾಗುವಂತೆ ನೆರವು ನೀಡಲಾಗುತ್ತದೆ.

Online application last date-ಅರ್ಜಿ ಸಲ್ಲಿಕೆ ಆರಂಭ ಯಾವ ದಿನ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 12 ರಿಂದ ಅವಕಾಶ ಮಾಡಿಕೊಡಲಾಗಿದ್ದು ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ: karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ವಿವರ.

Apply method-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಜುಲೈ 12 ರ ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

Required documents for application- ಸೌಲಭ್ಯ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮತ್ತು ಹೊಂದಿರಬೇಕಾದ ದಾಖಲೆಗಳು:

  • ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು, ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/- ಗಳ ಮಿತಿ ಒಳಗಿರಬೇಕು.
  • ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರಾಗಿರಬೇಕು.
  • ಅರ್ಜಿದಾರರು ಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಮತ್ತು ಗರಿಷ್ಠ 5 ಕರೆ ಜಮೀನು ಹೊಂದಿರಬೇಕು.
  • ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

  • ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶೇ.33 ರಷ್ಟು ಮಹಿಳಾ ಫಲಾನುಭವಿಗಳನ್ನು, ಶೇ.5 ರಷ್ಟು ವಿಶೇಷಚೇತನರಿಗೆ ಮತ್ತು ಶೇ.5 ರಷ್ಟು ತೃತೀಯ ಲಿಂಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗತ್ತದೆ.
  • ಈ ಯೋಜನೆಯಡಿಯಲ್ಲಿ ಸಾಲವನ್ನು ಭದ್ರತೆ ರಹಿತವಾಗಿ ನೀಡಲಾಗುವುದು.
  • ಅರ್ಜಿದಾರರು ಸಣ್ಣ ರೈತರಾಗಿರುವ ಬಗ್ಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಧೃಡೀಕರಣ ಪತ್ರ.
    ಸಾಲವು ಘಟಕ ವೆಚ್ಚ ರೂ.2.00 ಲಕ್ಷಗಳಿಗಿಂತ ಹೆಚ್ಚದ್ದಲ್ಲಿ ಫಲಾನುಭವಿಯು ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡತಕ್ಕದ್ದು.

Borewell subsidy scheme-2024: ಈ ಯೋಜನೆಯಡಿ ಸೌಲಭ್ಯ ಪಡೆಯಲು ಇತರೆ ಷರತ್ತುಗಳ ವಿವರ:

1) ಈ ಯೋಜನೆಯಲ್ಲಿ ನಿಗಮದಿಂದ ಸಾಲ/ಸಹಾಯಧನವನ್ನು ಪಡೆದ ಫಲಾನುಭವಿಯು ಕಡ್ಡಾಯವಾಗಿ ನಿಗಮದ ಹೆಸರು ಮತ್ತು ಲಾಂಛನವನ್ನು ಕೃಷಿ ಭೂಮಿಯಲ್ಲಿ ಫಲಕದಲ್ಲಿ ನಮೂದಿಸಿ ಪ್ರದರ್ಶಿಸಬೇಕಾಗಿರುತ್ತದೆ.

2) ನಿಗಮದ ವತಿಯಿಂದ ಆಯೋಜಿಸುವ ಮಾರ್ಕೆಟಿಂಗ್ ತರಬೇತಿ ಅಥವಾ ಕೃಷಿಗೆ ಸಂಬಂಧಿಸಿದ ಟ್ರೈನಿಂಗ್ ಗಳಿಗೆ ಫಲಾನುಭವಿಯು ಕಡ್ಡಾಯವಾಗಿ ಹಾಜರಿರತಕ್ಕದ್ದು.

3) ಫಲಾನುಭವಿಯು ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಐ.ಎಸ್.ಐ ಗುರುತಿನ ಎಲ್ಲಾ ಕೃಷಿ ಉಪಕರಣಗಳನ್ನು ಬಳಸತಕ್ಕದ್ದು.

4) ಫಲಾನುಭವಿಯು ಕಡ್ಡಾಯವಾಗಿ BEE (Bureau of Energy Efficiency) ರವರು ದೃಢೀಕರಿಸಿದ 4 ಅಥವಾ 5 ರೇಟಿಂಗ್ ಸಬ್ಮರ್ಸಿಬಲ್ ಪಂಪ್ಸೆಟ್ಗಳನ್ನು ಅಳವಡಿಸುವುದು ಪಂಪ್ಸೆಟ್ ಹಾಗೂ ಪೂರಕ ಸಾಮಗ್ರಿಗಳು ಐ.ಎಸ್.ಐ ಗುಣಮಟ್ಟದಾಗಿರಬೇಕು.

Most Popular

Latest Articles

Related Articles