AAY card: ಅನ್ನಭಾಗ್ಯ ಕಾರ್ಡದಾರರಿಗೆ ಆಹಾರ ಇಲಾಖೆಯಿಂದ ಶಾಕ್! ಈ 6 ನಿಯಮ ಮೀರಿದವರಿಗಿಲ್ಲ ಅನ್ನಭಾಗ್ಯ ಕಾರ್ಡ.

August 17, 2023 | Siddesh

ಅನ್ನಭಾಗ್ಯ ಯೋಜನೆ ಕಾರ್ಡ ಹೊಂದಿರುವವರು ಈ ಕೆಳಗೆ ತಿಳಿಸಿರುವ ಆಹಾರ ಇಲಾಖೆಯ 6 ಮಾನದಂಡಗಳನ್ನು ಮೀರಿದರೆ ಅಂತವರ ರೇಷನ್ ಕಾರ್ಡ(ration card) ಸಂಪೂರ್ಣ ರದ್ದಾಗಲಿದೆ.

ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯಿಂದ ಸರ್ವೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಒಟ್ಟು ಕಾರ್ಡಗಳ ಪಕ್ಕಿ ಈಗಾಗಲೇ 8 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ.

ಇದರ ಜೊತೆಗೆ ನಕಲಿ ಕಾರ್ಡ ಹೊಂದಿರುವವರಿಗೆ ಮತ್ತು ಈ ಹಿಂದೆ ಬಿಪಿಎಲ್ ಕಾರ್ಡ ದುರುಪಯೋಗ ಪಡಿಸಿಕೊಂಡಿರುವವರಿಗೆ ದಂಡವನ್ನು ವಿಧಿಸಲಾಗಿದೆ.

ಅನ್ನಭಾಗ್ಯ ಕಾರ್ಡ ರದ್ದು ಮಾಡಲು ಆಹಾರ ಇಲಾಖೆ ಅನುಸರಿಸುವ 6 ಮಾನದಂಡಗಳ ವಿವರ ಹೀಗಿದೆ:

1) ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು.

2) 7.5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರಬಾರದು.

3) ವೈಟ್ ಬೋರ್ಡ್ ಕಾರು ಇರಬಾರದು.

4) ಯಾವುದೇ ಸರ್ಕಾರಿ ನೌಕರ ಅಗಿರಬಾರದು.

5) ನಗರ ಭಾಗದಲ್ಲಿ ಮನೆ ವಿಸ್ತೀರ್ಣ 1000 sq.ft ಮೀರಬಾರದು.

6) ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT Returns ಪಾವತಿದಾರ ಆಗಿರಬಾರದು

ಈ ಮೇಲಿನ ಮಾನದಂಡಗಳು ಉಲ್ಲಂಘನೆಯಾಗಿದ್ದಲ್ಲಿ ಆಹಾರ ಇಲಾಖೆಯಿಂದ ಅಂತವರ ಅನ್ನಭಾಗ್ಯ ಯೋಜನೆ ಕಾರ್ಡ(AAY)  ರದ್ದು ಮಾಡಲಾಗುತ್ತದೆ  ಮತ್ತು ಸುಳ್ಳು ಮಾಹಿತಿ ನೀಡಿ ಕಾರ್ಡ ಪಡೆದಿದ್ದರೆ ದಂಡ ವಸೂಲಿಯನ್ನು ಸಹ ಮಾಡಲಾಗುತ್ತದೆ.

ಇದನ್ನೂ ಓದಿ: ಹೊಸ ಪಡಿತರ ಚೀಟಿ ವಿತರಣೆ ಮತ್ತು ಹೆಸರು ಸೇರ್ಪಡೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಆಹಾರ ಇಲಾಖೆ!

ರದ್ದಾಗಿರುವ ರೇಷನ್ ಕಾರ್ಡ ಪಟ್ಟಿಯನ್ನು ಪಡೆಯುವ ವಿಧಾನ:

ಗ್ರಾಹಕರು ಪ್ರತಿ ತಿಂಗಳು ಆಹಾರ ಇಲಾಖೆಯಿಂದ ರದ್ದಾದ ಪಡಿತರ ಚೀಟಿಯ ಪಟ್ಟಿಯನ್ನು ಈ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ ಫಲಾನುಭವಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಾಲ್ಲೂಕುವಾರು ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ತಿಳಿಯಬವುದು.

Step-1: ಮೊದಲಿಗೆ ಈ ಲಿಂಕ್ https://ahara.kar.nic.in/Home/EServices ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಬಲ ಬದಿಯಲ್ಲಿ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಯ್ಕೆ ವಿಭಾಗ ತೆರೆದುಕೊಳ್ಳುತ್ತದೆ. ಇಲ್ಲಿ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: "ಇ-ಪಡಿತರ ಚೀಟಿ"  ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಅಲ್ಲೇ ಕೆಳಗೆ ಗೋಚರಿಸುವ "ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆ ಮಾಡಿಕೊಂಡು "GO" ಮೇಲೆ ಕ್ಲಿಕ್ ಮಾಡಿದರೆ ರದ್ದುಗೊಳಿಸಲಾದ ಅಥವಾ  ತಡೆಹಿಡಿಯಲಾದ ರೇಷನ್ ಕಾರ್ಡ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ಪಡಿತರ ಚೀಟಿಯ RC number, ಪಡಿತರ ಚೀಟಿಯ ಮುಖ್ಯಸ್ಥರ ಹೆಸರು, ರದ್ದಾಗಳು ಕಾರಣ ಮತ್ತು ದಿನಾಂಕ ತಿಳಿಸಿರುತ್ತಾರೆ.

ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

ಇದನ್ನೂ ಓದಿ: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.

ಇದನ್ನೂ ಓದಿ: ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ 

ಇದನ್ನೂ ಓದಿ: ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.

ಇದನ್ನೂ ಓದಿ: ರೇಷನ್ ಕಾರ್ಡ ಕಳೆದು ಹೋದರೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?

ಇದನ್ನೂ ಓದಿ: ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ? ರೇಷನ್ ಕಾರ್ಡ್ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: