Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!

August 15, 2025 | Siddesh
Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!
Share Now:

SC,ST Business Loan: ಕರ್ನಾಟಕದ ಎಸ್ ಸಿ ಹಾಗೂ ಎಸ್ ಟಿ ಸಮುದಾಯದವರೆಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ! ಈ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ತಮ್ಮ ಸ್ವಂತ ಪ್ರಾರಂಭಿಸಲು "ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ -ಐ.ಎಸ್.ಬಿ (ಬ್ಯಾಂಕ್‌ ಸಹಯೋಗದಲ್ಲಿ)" ಯೋಜನೆಯಡಿ ಒಟ್ಟು ಸಾಲದ ಮೊತ್ತಕ್ಕೆ ಶೇ 70% ರಷ್ಟು ಗರಿಷ್ಟ ರೂ ₹2.0 ಲಕ್ಷ ಸಬ್ಸಿಡಿ ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಲವು ನಿಗಮಗಳಿಂದ "ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ" ಅಡಿಯಲ್ಲಿ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಒಟ್ಟು ಸಾಲದ ಮೊತ್ತಕ್ಕೆ ಶೇ 70% ಸಹಾಯಧನವನ್ನು ಒಗಿಸಲು ಅವಕಾಶವಿದ್ದು ಇಂದಿನ ಅಂಕಣದಲ್ಲಿ ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: Mobile Canteen Subsidy-ಮೊಬೈಲ್ ಕ್ಯಾಂಟಿನ್ ಸ್ಥಾಪನೆಗೆ ₹4.0 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Main Purpose for Business Loan- ಈ ಯೋಜನೆಯ ಪ್ರಮುಖ ಉದ್ದೇಶ?

ಈ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ನಿರುದ್ಯೋಗದಲ್ಲಿರುವ ಎಸ್ ಸಿ, ಎಸ್ ಟಿ ಸಮುದಾಯದವರಿಗೆ ಉದ್ಯೋಗ ಪ್ರಾರಂಭಿಸಲು ಸಹಾಯ ಮಾಡುವ ಜೊತೆಗೆ ಇಂಥವರನ್ನು ಆರ್ಥಿಕವಾಗಿ ಬೆಂಬಲಿಸುವ ಮಹತ್ಕಾರ್ಯ ಕೆಲಸವನ್ನು ಸರ್ಕಾರ ಕೈಗೊಂಡಿದೆ. ಚಿಕ್ಕ ಪುಟ್ಟ ಉದ್ಯೋಗ ಮಾಡಲು ಯೋಜನೆಯನ್ನು ಹಾಕಿಕೊಂಡಿರುವವರಿಗೆ ಈ ಯೋಜನೆಯು ಒಂದು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. ಅರ್ಹ ಅರ್ಜಿದಾರರು ಇಂದೇ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.

Eligibility for SC,ST Business Loan- ಅರ್ಜಿ ಸಲ್ಲಿಸಲು ಅರ್ಹತೆಗಳು?

ನೀವೇನಾದ್ರೂ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ನಿಮಗೆ ಕನಿಷ್ಠ ವಯಸ್ಸು 18 ಆಗಿರಬೇಕು ಮತ್ತು ಗರಿಷ್ಠ ವಯಸ್ಸು 60 ವರ್ಷಗಳ ಒಳಗಿರಬೇಕು. ಬಹು ಮುಖ್ಯವಾಗಿ ಈ ಯೋಜನೆಗೆ ಕೇವಲ ಎಸ್ ಟಿ ಹಾಗೂ ಎಸ್ ಸಿ ಸಮುದಾಯದವರೇ ಈ ಸಾಲ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಇರುವ ಕುಟುಂಬಗಳಿಗೆ 1.5 ಲಕ್ಷ ಆದಾಯ ದಾಟಬಾರದು ಹಾಗೂ ನಗರ ಪ್ರದೇಶದಲ್ಲಿ ಇರುವ ಕುಟುಂಬಗಳಿಗೆ 2 ಲಕ್ಷ ವಾರ್ಷಿಕ ಆದಾಯ ದಾಟಬಾರದು.

ಅರ್ಜಿ ಸಲ್ಲಿಸಲು 10 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿದೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ತಡ ಮಾಡದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ ಅದನ್ನು ಅನುಸರಿಸಿ.

ಇದನ್ನೂ ಓದಿ: Dairy Farm Subsidy-ಹೈನುಗಾರಿಕೆ ಆರಂಭಿಸಲು ₹1.25 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Documents for SC,ST Business Loan- ಅರ್ಜಿ ಸಲ್ಲಿಸುವಾಗ ಕೇಳಲಾಗುವ ಅಗತ್ಯ ದಾಖಲೆಗಳು?

ನೀವೇನಾದ್ರೂ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಹೋದರೆ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಕೇಳಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಶಿಕ್ಷಣ ಪ್ರಮಾಣ ಪತ್ರ, ನಿಮ್ಮ ಅಡ್ರೆಸ್ ಪ್ರೂಫ್,ಯೋಜನಾ ವರದಿ / ದರಪಟ್ಟಿ ಇತ್ಯಾದಿ…

How to Apply for SC,ST Business Loan - ಅರ್ಜಿ ಸಲ್ಲಿಸುವ ವಿಧಾನ?

ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮೊದಲನೇದು ನೀವು ಆನ್ಲೈನ್ ಮೂಲಕ ಮನೆಯಲ್ಲಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಎರಡನೆಯದು ನೀವು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ.

Step-1: ಅರ್ಜಿದಾರರು ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ https://sevasindhu.karnataka.gov.in/ ಗೆ ಭೇಟಿ ನೀಡಿ.

ಇದನ್ನೂ ಓದಿ: Internship Program-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಯೋಜನೆ!ತಿಂಗಳಿಗೆ ರೂ 20,000/- ಗೌರವಧನ!

Business Loan subsidy

Step-2: ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಬಳಸಿಕೊಂಡು ಲಾಗಿನ್ ಮಾಡಿಕೊಳ್ಳಿ.
Step-3: ಸೆಲ್ಫ್ ಎಂಪ್ಲಾಯ್ಮೆಂಟ್ ಲೋನ್ ಸ್ಕೀಮ್(Self Employment Direct Loan Scheme) ಅನ್ನು ಇದನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
Step-4: ನಿಮ್ಮ ಮುಂದೆ ಒಂದು ಅರ್ಜಿಯ ಫಾರಂ ತೆರೆಯುವುದು ಅದನ್ನು ನಿಮ್ಮ ಎಲ್ಲಾ ಸಂಬಂಧಪಟ್ಟ ವಿವರಗಳನ್ನು ತುಂಬಿಸಿ. ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿ.
Step-5: ಕೊನೆಗೆ ನಿಮ್ಮ ಅರ್ಜಿಯನ್ನು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: BPL Card-ಶೀಘ್ರದಲ್ಲಿ ರಾಜ್ಯ ಸರಕಾರದಿಂದ 12.68 ಲಕ್ಷ ಅಕ್ರಮ BPL ಕಾರ್ಡ ರದ್ದು: ಸಚಿವ ಕೆ ಹೆಚ್ ಮುನಿಯಪ್ಪ!

Last Date for SC,ST Business Loan - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಕೊನೆಯ ದಿನಾಂಕ 10 ಸೆಪ್ಟೆಂಬರ್ 2025 ರಂದು ಅರ್ಜಿ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ತಡಮಾಡದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಎಸ್ ಟಿ ಎಸ್ ಸಿ ಸಮುದಾಯದವರಿಗೆ ಮಾತ್ರ ನೀಡುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ಸರ್ಕಾರದಿಂದ 50,000 ವರೆಗೆ ಸಹಾಯಧನ ಸಿಗುವುದು ಇದನ್ನು ಬಳಸಿಕೊಂಡು ನಿಮ್ಮದೇ ಆದಂತ ಸ್ವಂತ ಉದ್ಯಮನ್ನು ಆರಂಭಿಸಲು ಉಪಯೋಗವಾಗುತ್ತದೆ. ಈ ಯೋಜನೆಯನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

ಈ ಯೋಜನೆಯ ಹೆಚ್ಚಿನ ಮಾಹಿತಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ನಲ್ಲಿ ಕೆಳಗೆ ನೀಡಲಿದೆ:

Helpline Number-ಸಹಾಯವಾಣಿ- 9482300400
Website Link-ಅಧಿಕೃತ ವೆಬ್ಸೈಟ್-Click Here Scheme Details-ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: