Danta Bhagya Yojane-ದಂತ ಭಾಗ್ಯ ಯೋಜನೆ ಉಚಿತವಾಗಿ ಹಲ್ಲಿನ ಸೆಟ್ ಪಡೆಯಲು ಅವಕಾಶ!

January 23, 2026 | Siddesh
Danta Bhagya Yojane-ದಂತ ಭಾಗ್ಯ ಯೋಜನೆ ಉಚಿತವಾಗಿ ಹಲ್ಲಿನ ಸೆಟ್ ಪಡೆಯಲು ಅವಕಾಶ!
Share Now:

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿರಿಯ ನಾಗರಿಕರಿಗಾಗಿ 'ದಂತ ಭಾಗ್ಯ' ಎಂಬ ಮಹತ್ವದ ಯೋಜನೆಯನ್ನು(Danta Bhagya Yojana) ಜಾರಿಗೆ ತಂದಿದ್ದು. ವಯಸ್ಸಾದಂತೆ ಎದುರಾಗುವ ಹಲ್ಲಿನ ಸಮಸ್ಯೆಗಳು ಕೇವಲ ಆಹಾರ ಸೇವನೆಗೆ ಮಾತ್ರವಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತವೆ. ಇದನ್ನು ಮನಗಂಡು ಸರ್ಕಾರವು ಉಚಿತವಾಗಿ ಉತ್ತಮ ಗುಣಮಟ್ಟದ ಹಲ್ಲಿನ ಸೆಟ್ ಜೋಡಿಸುವ ಸೇವೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಕುರಿತು ಅನೇಕ ಜನರಿಗೆ ಮಾಹಿತಿಯ ಕೊರತೆಯಿರುವುದರಿಂದ ಇಂದಿನ ಅಂಕಣದಲ್ಲಿ ಈ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಬಹುತೇಕ ಶೇ 85-90 ರಷ್ಟು ಗಟ್ಟಿ ಹಲ್ಲುಗಳು ಇಲ್ಲದೇ ಇರುವ ನಾಗರಿಕರು ಹಲ್ಲಿನ ಸೆಟ್ ಅನ್ನು ರಾಜ್ಯ ಸರಕಾರದ 'ದಂತ ಭಾಗ್ಯ' ಯೋಜನೆ(Danta Bhagya Scheme) ಅಡಿ ಉಚಿತವಾಗಿ ಪಡೆಯಲು ಅವಕಾಶವಿದ್ದು ಹೊರಗಿನ ಆಸ್ಪತ್ರೆಯಲ್ಲಿ ಈ ಹಲ್ಲಿನ ಸೆಟ್ ಗಾಗಿ ಅಧಿಕ ವೆಚ್ಚ ಭರಿಸಬೇಕಾಗಿದ್ದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Online Property Details-ನಿಮ್ಮ ಹಳ್ಳಿಯ ಆಸ್ತಿ ವಿವರ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ದಂತ ಭಾಗ್ಯ ಯೋಜನೆ ಅಡಿಯಲ್ಲಿ ಹಲ್ಲಿನ ಸೆಟ್ ಅನ್ನು ಪಡೆಯಲು ಸಾರ್ವಜನಿಕರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇದಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲಾತಿಗಳೇನು? ಈ ಯೋಜನೆ ಪಡೆಯಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು ಯಾವುವು? ಈ ಬಗ್ಗೆ ಅವಶ್ಯವಿರುವ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Danta Bhagya Scheme Eligibilityಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಹರು:

ದಂತ ಭಾಗ್ಯ ಯೋಜನೆ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಇಲಾಖೆಯಿಂದ ನಿಗದಿಪಡಿರುವ ಅರ್ಹ ಮಾನದಂಡಗಳ ಪಟ್ಟಿ ಈ ಕೆಳಗಿನಂತಿದೆ:

ಈ ಯೋಜನೆಯ ಸೌಲಭ್ಯವು 45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಅನ್ವಯವಾಗುತ್ತದೆ.

ಬಿ.ಪಿ.ಎಲ್ (BPL) ಪಡಿತರ ಚೀಟಿ ಹೊಂದಿರುವ ಕುಟುಂಬದವರಿಗೆ ಲಭ್ಯವಿರುತ್ತದೆ.

ಅಭ್ಯರ್ಥಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

41,218ಕ್ಕೂ ಹೆಚ್ಚು ಹಿರಿಯರು ಈ ಯೋಜನೆಯ ಪ್ರಯೋಜನ:

ಈಗಾಗಲೇ ರಾಜ್ಯಾದ್ಯಂತ 41,218ಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಯೋಜನೆಯಡಿ ಅಗತ್ಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Deepika Scholarship 2026-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಆರ್ಥಿಕ ನೆರವು!

Danta Bhagya Yojane

ಇದನ್ನೂ ಓದಿ: Akrama-Sakrama-ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ!

How To Get Danta Bhagya Scheme Benefits-ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

ದಂತ ಭಾಗ್ಯ ಯೋಜನೆಯಡಿ ಅಗತ್ಯವಿರುವ ಸೌಲಭ್ಯವನ್ನು ಪಡೆಯಲು ಅರ್ಹ ನಾಗರಿಕರು ಅವಶ್ಯವಿರುವ ದಾಖಲೆಗಳ ಸಮೇತ ಹತ್ತಿರದ ಜಿಲ್ಲಾ ಆಸ್ಪತ್ರೆಗಳು ಹಾಗೂ ರಾಜ್ಯಾದ್ಯಂತ ಸರ್ಕಾರ ಗುರುತಿಸಿರುವ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಉಚಿತ ಸೇವೆಯನ್ನು ಪಡೆಯಬಹುದಾಗಿದೆ.

Required Documents For Danta Bhagya Yojana-ಸೌಲಭ್ಯ ಪಡೆಯಲು ಅವಶ್ಯವಿರುವ ದಾಖಲೆಗಳು:

ದಂತ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಲು ನಾಗರಿಕರು ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆಗಳ ವಿವರ ಹೀಗಿದೆ:

ಅಧಾರ್ ಕಾರ್ಡ/Aadhar
ಬ್ಯಾಂಕ್ ಪಾಸ್ ಬುಕ್/Bank Pass Book
ಬಿಪಿಎಲ್ ರೇಶನ್ ಕಾರ್ಡ/BPL Ration Card
ಪೋಟೋ/Photo

ಹಲ್ಲಿನ ಸಮಸ್ಯೆಯಿಂದಾಗಿ ಪೌಷ್ಟಿಕ ಆಹಾರ ತ್ಯಜಿಸದೆ, ಈ ಯೋಜನೆಯ ಸದುಪಯೋಗ ಪಡೆದು ಹಿರಿಯರು ತಮ್ಮ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಂದು ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BGM Foundation-ಬಿಜಿಎಂ ಫೌಂಡೇಶನ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ!

Health Department Website-ಇನ್ನು ಅಧಿಕ ಮಾಹಿತಿ ಪಡೆಯಲು ಆರೋಗ್ಯ ಇಲಾಖೆಯ ಅಧಿಕೃತ ವೆಬ್ಸೈಟ್- Click Here
Helpline-ಸಹಾಯವಾಣಿ- 1800 425 8330

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: