Education Assistance-ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ!

March 8, 2026 | Siddesh
Education Assistance-ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ!
Share Now:

ಕಟ್ಟಡ ನಿರ್ಮಾಣದಂತಹ ಕಠಿಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಕುಟುಂಬಗಳ ಪಾಲಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು(Education Assistance Online Application) ಸಿಹಿ ಸುದ್ದಿಯೊಂದನ್ನು ನೀಡಿದೆ. ದುರಾದೃಷ್ಟವಶಾತ್ ಕೆಲಸದ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಮೃತಪಡುವ ಕಾರ್ಮಿಕರ ಮಕ್ಕಳು ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಮಂಡಳಿಯು ಮಹತ್ವದ ತಿದ್ದುಪಡಿ ತಂದಿದೆ. ಈ ಯೋಜನೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಈ ಹಿಂದೆ, ನೋಂದಾಯಿತ ಫಲಾನುಭವಿ ಕಾರ್ಮಿಕರು ಮರಣ ಹೊಂದಿದಲ್ಲಿ ಕೇವಲ ಪೆನ್ಷನ್ ಸೌಲಭ್ಯವನ್ನು(Education Assistance) ಮಾತ್ರ ನೀಡುವ ನಿಯಮವಿತ್ತು. ಆದರೆ, ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡ ಮಕ್ಕಳ ಭವಿಷ್ಯವು ಅನಿಶ್ಚಿತವಾಗುತ್ತಿರುವುದನ್ನು ಗಮನಿಸಿದ ಮಂಡಳಿಯು, ಈಗ ಅವರ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಮುಂದಾಗಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೈಗೊಂಡ ಈ ನಿರ್ಧಾರವು 2025-26ರ ಶೈಕ್ಷಣಿಕ ವರ್ಷದಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಇದನ್ನೂ ಓದಿ: Free Beauty Parlour Training-35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

ಈ ಯೋಜನೆಯಡಿ, ಕೆಲಸದ ಅವಧಿಯಲ್ಲಿ ಅಪಘಾತದಿಂದ ಮೃತಪಟ್ಟ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ (Post Graduation) ಶೈಕ್ಷಣಿಕ ಸಹಾಯಧನವನ್ನು ಮಂಡಳಿಯೇ ಭರಿಸಲಿದೆ. ಈ ಮೂಲಕ ಬಡತನದ ಬೇಗೆಯಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸಿನ ಉನ್ನತ ಶಿಕ್ಷಣವನ್ನು ಪೂರೈಸಲು ಹಾದಿ ಸುಗಮವಾದಂತಾಗಿದೆ. ಅರ್ಹ ಫಲಾನುಭವಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

Education Assistance Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರ ಮಕ್ಕಳು.

ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟ ಕಾರ್ಮಿಕರ ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.

2025-26ರ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.

ಇದನ್ನೂ ಓದಿ: Diploma Scholarship-ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿ ವೇತನ!

How To Apply For Education Assistance-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಫಲಾನುಭವಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರ ಕಾರ್ಮಿಕ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕವು ಸಹ ಅರ್ಜಿ ಸಲ್ಲಿಸಬಹುದು.

Apply Method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ Online Application ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಖಾತೆಯನ್ನು ರಚನೆ ಮಾಡಿಕೊಂಡು ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Ganga Kalyana-2026: ಗಂಗಾ ಕಲ್ಯಾಣ ಯೋಜನೆ ಬಜೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ!

Education Assistance

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

Required Documents For Education Assistance-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಶೈಕ್ಷಣಿಕ ಸಹಾಯಧನವನ್ನು ಪಡೆಯಲು ವಿದ್ಯಾರ್ಥಿಗಳು ಅಗತ್ಯವಾಗಿ ಹೊಂದಿರಬೇಕಾದ ದಾಖಲೆಗಳ ಪಟ್ಟಿ ಹೀಗಿವೆ:

ಮೃತ ಕಾರ್ಮಿಕರ ನೋಂದಾಯಿತ ಗುರುತಿನ ಚೀಟಿ (Labour Card).

ಮರಣ ಪ್ರಮಾಣ ಪತ್ರ ಹಾಗೂ ಅಪಘಾತದ ಬಗ್ಗೆ ಪೊಲೀಸ್ ವರದಿ ಅಥವಾ ಅಧಿಕೃತ ದಾಖಲೆ.

ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಫೋಟೋ.

ಇದನ್ನೂ ಓದಿ: Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!

ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಬಗ್ಗೆ ವಿದ್ಯಾಸಂಸ್ಥೆಯಿಂದ ದೃಢೀಕರಣ ಪತ್ರ (Study Certificate).

ಹಿಂದಿನ ತರಗತಿಯ ಅಂಕಪಟ್ಟಿಗಳು.

ಬ್ಯಾಂಕ್ ಪಾಸ್ ಬುಕ್ ಪ್ರತಿ (ವಿದ್ಯಾರ್ಥಿಯ ಹೆಸರಿನಲ್ಲಿರುವ ಖಾತೆ).

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: