parihara farmer list-2024: ಗ್ರಾಮ ಪಂಚಾಯತಿಯಲ್ಲಿ ಹೆಸರು ಬಿಟ್ಟು ಹೋದ ರೈತರ ಬರ ಪರಿಹಾರ ಪಟ್ಟಿ ಬಿಡುಗಡೆ!

ರಾಜ್ಯ ಸರಕಾರದಿಂದ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಮೊದಲ ಕಂತಿನ ರೂ 2,000 ಜಮಾ ಮಾಡಲಾಗಿದ್ದು ಹೆಸರು ಬಿಟ್ಟು ಹೋದ ರೈತರ ಬರ ಪರಿಹಾರ ಪಟ್ಟಿಯನ್ನು(parihara farmer list-2024) ಗ್ರಾಮ ಪಂಚಾಯತಿಯಲ್ಲಿ ಪ್ರಕಟಿಸಲಾಗಿದೆ.

parihara farmer list-2024: ಗ್ರಾಮ ಪಂಚಾಯತಿಯಲ್ಲಿ ಹೆಸರು ಬಿಟ್ಟು ಹೋದ ರೈತರ ಬರ ಪರಿಹಾರ ಪಟ್ಟಿ ಬಿಡುಗಡೆ!
parihara farmer list-2024

ರಾಜ್ಯ ಸರಕಾರದಿಂದ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಮೊದಲ ಕಂತಿನ ರೂ 2,000 ಜಮಾ ಮಾಡಲಾಗಿದ್ದು ಹೆಸರು ಬಿಟ್ಟು ಹೋದ ರೈತರ ಬರ ಪರಿಹಾರ ಪಟ್ಟಿಯನ್ನು(parihara farmer list-2024) ಗ್ರಾಮ ಪಂಚಾಯತಿಯಲ್ಲಿ ಪ್ರಕಟಿಸಲಾಗಿದೆ.

ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಮೊದಲ ಕಂತಿನ ರೂ 2,000 ಅನ್ನು ಅರ್ಹ ರೈತರಿಗೆ ವರ್ಗಾವಣೆ ಮಾಡಲು ಎಲ್ಲಾ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ರಾಜ್ಯ ಸರಕಾರದಿಂದ NDRF ಮಾರ್ಗಸೂಚಿಯನ್ವ 105 ಕೋಟಿಯನ್ನು ಜಿಲ್ಲಾ  ಮಟ್ಟಕ್ಕೆ ವರ್ಗಾವಣೆ ಮಾಡಲಾಗಿತ್ತು.

ಈ ಮೊದಲ ಕಂತಿನ 105 ಕೋಟಿಯನ್ನು ಹಣವನ್ನು ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಿಸಿದ ತಾಲ್ಲೂಕಿನ ರೈತರಿಗೆ ಸಿಗಲಿದ್ದು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ವರ್ಗಾವಣೆ ಮಾಡಲಾಗಿತ್ತಿದ್ದು ತಾಂತ್ರಿಕ ಸಮಸ್ಯೆಯಿಂದ ರೂ 2,000 ಜಮಾ ಮಾಡಲು ಅಗದಿರುವ ಪಟ್ಟಿಯನ್ನು ಗ್ರಾಮ ಪಂಚಾಯತಿಯಲ್ಲಿ ಪ್ರಕಟಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Monsoon update 2024: ಎಲ್ ನಿನೊ ವಾತಾವರಣ ದುರ್ಬಲ ಈ ವರ್ಷ ಉತ್ತಮ ಮುಂಗಾರು ನಿರೀಕ್ಷೆ, ಹವಾಮಾನ ತಜ್ಞರಿಂದ ಮಾಹಿತಿ!

parihara farmer list-2024: ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಹೀಗೆ ಮಾಡಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಅರ್ಹ ರೈತರಿಗೆ ಬರ ಪರಿಹಾರ ತಲುಪಿಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕುರಿತ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ರೈತರು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪರಿಶೀಲಿಸಬಹುದು. 

ಹೆಸರು ಬಿಟ್ಟು ಹೋಗಿದ್ದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: agriculture land registration- ಜಮೀನಿನ ಮಾಲೀಕ ಮರಣವಾದ ಬಳಿಕ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು?

FID ಆಧಾರದ ಮೇಲೆ ಬರ ಪರಿಹಾರ!

ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ರೈತರ ಮಾಹಿತಿಯ ಆಧಾರದ ಮೇಲೆ ಈ ಬಾರಿ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆಯ(DBT) ಮೂಲಕ ಜಮಾ ಮಾಡಲಾಗುತ್ತಿದ್ದು, ರೈತರು ಇನ್ನು ಮುಂದೆ ರಾಜ್ಯ ಸರಕಾರದ ಯಾವುದೇ ಬಗ್ಗೆಯ ಪರಿಹಾರ ಮತ್ತು ಇತರೆ ಯೋಜನೆಯಡಿ ಸಹಾಯಧನ ಪಡೆಯಲು FID ನಂಬರ್ ಅನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಈ ಕಾರಣದಿಂದ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ FID ನಂಬರ್ ಅನ್ನು ರಚನೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Bengalore Job fair- 26, 27 ಫೆಬ್ರವರಿ 2024 ರಂದು ಬೃಹತ್ ಉದ್ಯೋಗ ಮೇಳ!

FID number- ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮ ಹೆಸರಿನಲ್ಲಿ FID ನಂಬರ್ ಇದಿಯೇ ಎಂದು ತಿಳಿಯಿರಿ:

ರೈತರು ಒಮ್ಮೆ ನಿಮ್ಮ ಜಮೀನಿನ ಮೇಲೆ ಈಗಾಗಲೇ FID ನಂಬರ್ ರಚನೆ ಅಗಿದಿಯೋ? ಇಲ್ಲವೋ? ಆಧಾರ್ ನಂಬರ್ ಹಾಕಿ ತಿಳಿಯಬಹುದಾಗಿದೆ ಈ ಕೆಳಗಿನ ವಿಧಾನವನ್ನು ಅನುಸರಿಸಿ FID ಕುರಿತು ತಿಳಿಯಿರಿ.

Step-1: ಮೊದಲಿಗೆ ಈ FID number check ಲಿಂಕ್ ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯ ಅಧಿಕೃತ pmkisan ಪ್ರೂಟ್ಸ್ ತಂತ್ರಾಂಶವನ್ನು ಭೇಟಿ ಮಾಡಬೇಕು.

Step-2: ಬಳಿಕ ನಿಮ್ಮ ಜಮೀನು ಯಾರ ಹೆಸರಿಗೆ ಇದಿಯೋ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದ್ದರೆ ರೈತರ ಹೆಸರು, FID/Fruits ID, ಪಿ ಎಂ ಕಿಸಾನ್ ಐಡಿ ಬರುತ್ತದೆ. ಒಂದೊಮ್ಮೆ FID ನಂಬರ್ ಇಲ್ಲವಾದಲ್ಲಿ "No data found" ಎಂದು ತೋರಿಸುತ್ತದೆ.