Free Beauty Parlour Training-35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

March 8, 2026 | Siddesh
Free Beauty Parlour Training-35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!
Share Now:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೋಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI) ವತಿಯಿಂದ ನಿರುದ್ಯೋಗಿ ಯುವತಿಯರಿಗಾಗಿ ಮತ್ತು ಮಹಿಳೆಯರಿಗಾಗಿ 35 ದಿನಗಳ ಕಾಲ ಉಚಿತ ಬ್ಯೂಟಿ ಪಾರ್ಲರ್ ತರಬೇತಿ(Free Beauty Parlour Training) ಶಿಬಿರವನ್ನು ಆಯೋಜಿಸಲಾಗಿದ್ದು ಇದಕ್ಕಾಗಿ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಏಪ್ರಿಲ್ ತಿಂಗಳ ಮೊದಲ ವಾರದಿಂದ ಪ್ರಾರಂಭವಾಗುವ ಈ ತರಬೇತಿಯು ಮಹಿಳೆಯರು(Free Beauty Parlour Training Application) ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಉತ್ತಮ ವೇದಿಕೆಯನ್ನು ಒದಗಿಸಲಿದೆ. ಈ ಶಿಬಿರದ ವಿಶೇಷತೆಯೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: Diploma Scholarship-ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿ ವೇತನ!

ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ (BPL) ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದ ವತಿಯಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಈ ಪ್ರಮಾಣ ಪತ್ರವು ಮುಂದೆ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಹಾಗೂ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ವಿಳಾಸದ ಮೂಲ ದಾಖಲೆಗಳೊಂದಿಗೆ ನಿಗದಿಪಡಿಸಿದ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಒಂದು ವೇಳೆ ನಿಗದಿತ ದಿನದಂದು ಬರಲು ಸಾಧ್ಯವಾಗದಿದ್ದಲ್ಲಿ, ಪಕಟಣೆಯಲ್ಲಿ ನೀಡಲಾಗಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Ganga Kalyana-2026: ಗಂಗಾ ಕಲ್ಯಾಣ ಯೋಜನೆ ಬಜೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ!

Free Beauty Parlour Training Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಯುವತಿಯರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯ ವಯೋಮಿತಿ 18 ರಿಂದ 45 ವರ್ಷಗಳ ಒಳಗಿರಬೇಕು.

ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ತರಬೇತಿಯನ್ನು ಪಡೆದ ಬಳಿಕ ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!

Beauty Parlour Training Date-ತರಬೇತಿ ನಡೆಯುವ ದಿನಾಂಕ:

23/03/2026 (ಸೋಮವಾರ) ಬೆಳಿಗ್ಗೆ 10:00 ಗಂಟೆಗೆ ನೇರ ಸಂದರ್ಶನ ಇರುತ್ತದೆ.

ತರಬೇತಿಯು ಏಪ್ರಿಲ್ ಮೊದಲ ವಾರದಿಂದ ಆರಂಭವಾಗಿ ಒಟ್ಟು 35 ದಿನಗಳ ಕಾಲ ನಡೆಯಲಿದೆ.

Beauty Parlour Training Benefits-ಬ್ಯೂಟಿ ಪಾರ್ಲರ್ ತರಬೇತಿ ಪ್ರಯೋಜನಗಳ ವಿವರ:

ಸಂಪೂರ್ಣ ಉಚಿತ ತರಬೇತಿ, ವಸತಿ ಮತ್ತು ಊಟದ ವ್ಯವಸ್ಥೆ.

ತರಬೇತಿ ನಂತರ ಕೇಂದ್ರ ಸರ್ಕಾರದಿಂದ ಅಧಿಕೃತ ಪ್ರಮಾಣ ಪತ್ರ ವಿತರಣೆ.

ಸ್ವಂತ ಉದ್ಯೋಗ ಅಥವಾ ಬ್ಯೂಟಿ ಪಾರ್ಲರ್ ತೆರೆಯಲು ಅಗತ್ಯವಿರುವ ಕೌಶಲ್ಯದ ಕಲಿಕೆ.

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

Free Beauty Parlour Training

Beauty Parlour Training Center-ತರಬೇತಿ ನಡೆಯುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೋಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ.

Beauty Parlour Training Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ದಿನಾಂಕ 23/03/2026 ರಂದು ಬೆಳಿಗ್ಗೆ 10:00 ಗಂಟೆಗೆ ನೇರವಾಗಿ ಮೇಲ್ಕಂಡ ವಿಳಾಸಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
8970476050, 6363139123, 9591514154, 9686248369, 9505894247.

ಇದನ್ನೂ ಓದಿ: Journalists Training-ಮಹಿಳಾ ಪತ್ರಕರ್ತೆಯರಿಗೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೈಟೆಕ್ ತರಬೇತಿಗೆ ಅರ್ಜಿ ಆಹ್ವಾನ!

Required Documents For Beauty Parlour Training-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

  • ಅಭ್ಯರ್ಥಿಯ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ರೇಶನ್ ಕಾರ್ಡ

ಬ್ಯೂಟಿ ಪಾರ್ಲರ್ ವ್ಯವಹಾರವು ಇಂದಿನ ದಿನಗಳಲ್ಲಿ ಅತ್ಯಂತ ಲಾಭದಾಯಕವಾದ ಕ್ಷೇತ್ರಗಳಲ್ಲಿ ಒಂದಾಗಿದೆ. ಸರಿಯಾದ ಯೋಜನೆ ಮತ್ತು ಕೌಶಲ್ಯವಿದ್ದರೆ ಇದರಲ್ಲಿ ಉತ್ತಮ ಯಶಸ್ಸು ಕಾಣಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: