Free CCTV Training-ಉಚಿತ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

March 23, 2026 | Siddesh
Free CCTV Training-ಉಚಿತ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಹಾವೇರಿ: ಇಂದಿನ ದಿನಗಳಲ್ಲಿ ಭದ್ರತೆ ಎಂಬುದು ಪ್ರತಿಯೊಬ್ಬರ ಆದ್ಯತೆಯಾಗಿದೆ. ಮನೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಕ್ಷೇತ್ರದಲ್ಲಿ ನುರಿತ ತಂತ್ರಜ್ಞರಿಗೆ ಅಪಾರ ಬೇಡಿಕೆಯಿದೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಹಾವೇರಿಯ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI) ಗ್ರಾಮೀಣ ನಿರುದ್ಯೋಗಿ(CCTV Installation and Repair Training) ಯುವಕ-ಯುವತಿಯರಿಗಾಗಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ರಿಪೇರಿ ವಿಷಯದಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದೆ.

ಈ ತರಬೇತಿಯು ಕೇವಲ ಒಂದು ಶಿಕ್ಷಣವಲ್ಲದೆ, ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು(Free CCTV Training in Haveri) ಅಭ್ಯರ್ಥಿಗಳಿಗೆ ತಾಂತ್ರಿಕ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸವನ್ನು ತುಂಬುವ ಗುರಿಯನ್ನು ಹೊಂದಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ATM Card-ಎಟಿಎಂ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು!

ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ನುರಿತ ತಜ್ಞರಿಂದ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಮಾಹಿತಿ ನೀಡಲಾಗುತ್ತದೆ. ಆಧುನಿಕ ಸಿಸಿ ಕ್ಯಾಮರಾಗಳ ಜೋಡಣೆ, ಸಾಫ್ಟ್‌ವೇರ್ ಅಳವಡಿಕೆ ಹಾಗೂ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡಲಾಗುವುದು. ಈ ಮೂಲಕ ಯುವಕರು ಬೇರೆಯವರ ಹತ್ತಿರ ಕೆಲಸಕ್ಕೆ ಹೋಗುವ ಬದಲು ತಾವೇ ಸ್ವತಃ ಉದ್ಯಮಿಯಾಗಿ ಹೊರಹೊಮ್ಮಲು ಅವಕಾಶವಿದೆ.

Free CCTV Installation and Repair Training-ತರಬೇತಿಯ ಸಂಪೂರ್ಣ ವಿವರಗಳು:

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • 18 ರಿಂದ 45 ವರ್ಷ ವಯೋಮಾನದೊಳಗಿನ ಆಸಕ್ತ ಯುವಕ/ಯುವತಿಯರು.
  • ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
  • ಬಿ.ಪಿ.ಎಲ್ (BPL) ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.

ಇದನ್ನೂ ಓದಿ: Ration Card-2026: ರೇಶನ್ ಕಾರ್ಡದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ!

Free CCTV Training-ಸಂಪೂರ್ಣ ಉಚಿತ ತರಬೇತಿ:

ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಂದ ಯಾವುದೇ ಶುಲ್ಕವನ್ನು ಪಡೆಯಲಾಗುವುದಿಲ್ಲ.

CCTV Installation and Repair Training Details-ತರಬೇತಿಯಲ್ಲಿ ಏನೆಲ್ಲಾ ಕಲಿಸಲಾಗುತ್ತದೆ?

  • ವಿವಿಧ ಮಾದರಿಯ ಸಿಸಿ ಕ್ಯಾಮರಾಗಳ (Dome, Bullet, IP) ಪರಿಚಯ.
  • ಡಿವಿಆರ್ (DVR) ಮತ್ತು ಎನ್ವಿಆರ್ (NVR) ಸೆಟ್ಟಿಂಗ್‌ಗಳು.
  • ವೈರಿಂಗ್ ಮತ್ತು ಕೇಬಲ್ ಕನೆಕ್ಷನ್ ವಿಧಾನಗಳು.
  • ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಲೈವ್ ವೀಕ್ಷಣೆಗಾಗಿ ಸಾಫ್ಟ್‌ವೇರ್ ಇನ್‌ಸ್ಟಾಲೇಶನ್.
  • ರಿಪೇರಿ ಮತ್ತು ಮೇಂಟೆನೆನ್ಸ್ ತಂತ್ರಗಳು.

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

CCTV Installation and Repair Training

CCTV Installation and Repair Training Date-ತರಬೇತಿ ಪ್ರಾರಂಭ ದಿನಾಂಕ: ತರಬೇತಿಯು 07.05.2026 ರಿಂದ ಪ್ರಾರಂಭವಾಗಲಿದೆ.

Required Documents For Training-ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿ.
  • ಬಿ.ಪಿ.ಎಲ್ ರೇಷನ್ ಕಾರ್ಡ್ ಪ್ರತಿ.
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು.

Registration Method-ನೋಂದಣಿ ಮಾಡಿಕೊಳ್ಳುವುದು ಹೇಗೆ?

ಆಸಕ್ತರು ಕೂಡಲೇ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಅಥವಾ ಹಾವೇರಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾ RSETI ಕಚೇರಿಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.ಸಂಪರ್ಕ ಸಂಖ್ಯೆ: 8660219375

ಇದನ್ನೂ ಓದಿ: KSOU Admission-2026: ರಾಜ್ಯದ ಮುಕ್ತ ವಿವಿಯಿಂದ 2025-26ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ!

Training Center Address-ತರಬೇತಿ ಕೇಂದ್ರದ ವಿಳಾಸ:

ಬ್ಯಾಂಕ್ ಅಫ್ ಬರೋಡ
ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸ್ಥಂಸ್ಥೆ(ರಿ).ಹಾವೇರಿ
ಡಿ.ಸಿ ಅಪೀಸ್ ಕಾಂಪ್ಲೆಕ್ಸ್ ಹಿಂಬಾಗ
ದೇವಗಿರಿ ಗ್ರಾಮ,ಹಾವೇರಿ-581110, Mob: 8660219375

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: