Free Embroidery Training-ಮಹಿಳೆಯರಿಗೆ ಸಿಹಿ ಸುದ್ದಿ ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿ!

December 15, 2025 | Siddesh
Free Embroidery Training-ಮಹಿಳೆಯರಿಗೆ ಸಿಹಿ ಸುದ್ದಿ ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿ!
Share Now:

ಮನೆಯಲ್ಲೇ ಇದ್ದುಕೊಂಡು ಬಿಡುವಿನ ಸಮಯದಲ್ಲಿ ಕೌಶಲ್ಯ ಭರಿತ ಕೆಲಸಗಳಿಂದ ಆದಾಯವನ್ನು ಗಳಿಸುವ ಉದ್ದೇಶವನ್ನು ಹೊಂದಿರುವ ಮಹಿಳೆಯರಿಗೆ ಕೆನರಾ ಬ್ಯಾಂಕ್(Canara Bank) ಗ್ರಾಮೀಣ ಸ್ವ-ಉದ್ಯೋಗ ತರಬೇತಿ(Skill Training) ಸಂಸ್ಥೆಯಿಂದ ವಿನೂತನ ತರಬೇತಿಯನ್ನು ಆಯೋಜನೆ ಮಾಡಿದ್ದು ಇದರ ಕುರಿತು ಇಂದಿನ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು/ಗೃಹಿಣಿಯರು ಬಿಡುವಿನ ಸಮಯದಲ್ಲಿ ಮನೆಯಲ್ಲೇ ಇದ್ದುಕೊಂಡು ಕಸೂತಿ(Embroidery), ಆರಿ ವರ್ಕ್(Aari Work) ಫ್ಯಾಬ್ರಿಕ್ ಪೇಂಟಿಂಗ್(Fabric Painting) ವರ್ಕ್ ಅನ್ನು ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಲು ಅವಕಾಶವಿದ್ದು ಈ ಕೌಶಲ್ಯಗಳನ್ನು ಉಚಿತವಾಗಿ ಮಹಿಳೆಯರಿಗೆ ಒದಗಿಸಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ "ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯನ್ನು" ಆಯೋಜನೆ ಮಾಡಲಾಗಿದ್ದು ಮಹಿಳೆಯರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸ್ವಂತ ಉದ್ದಿಮೆಯನ್ನು ಆರಂಭಿಸಬಹುದು.

ಇದನ್ನೂ ಓದಿ: Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯಲ್ಲಿ(Free Embroidery Training Application) ಯಾವೆಲ್ಲ ವಿಷಯಗಳನ್ನು ಕಲಿಸಲಾಗುತ್ತದೆ? ಈ ತರಬೇತಿಯಲ್ಲಿ ಭಾಗವಹಿಸಲು ಮಹಿಳೆಯರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳವ ವಿಧಾನ ಹೇಗೆ? ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ದಾಖಲಾತಿಗಳಾವುವು? ತರಬೇತಿ ಅವಧಿ,ತರಬೇತಿ ಕೇಂದ್ರ ವಿಳಾಸ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Vastra Chitra Kala Udyami-ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಆಯೋಜನೆ ಮಾಡಿರುವ "ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯಲ್ಲಿ" ಯಾವೆಲ್ಲ ಕೌಶಲ್ಯಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ ಎನ್ನುವ ವಿವರ ಈ ಕೆಳಗಿನಂತಿದೆ:

ಕಸೂತಿ/Embroidery
ಆರಿ ವರ್ಕ್/Aari Work
ಫ್ಯಾಬ್ರಿಕ್ ಪೇಂಟಿಂಗ್/Fabric Painting ಕುರಿತು ತರಬೇತಿಯನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

Free Embroidery Training-ಸಂಪೂರ್ಣ ಉಚಿತ ತರಬೇತಿ:

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳೆಯರು ಈ 30 ದಿನದ "ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯನ್ನು" ಪಡೆಯಲು ಯಾವುದೇ ಬಗ್ಗೆ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಇದಲ್ಲದೇ ತರಬೇತಿ ಸಮಯದಲ್ಲಿ ತರಬೇತಿ ಕೇಂದ್ರದಲ್ಲೇ ಉಚಿತ ವಸ್ತಿ ಮತ್ತು ಊಟದ ವ್ಯವಸ್ಥೆಯನ್ನು ಕೇಂದ್ರದಿಂದ ಆಯೋಜನೆ ಮಾಡಲಾಗಿರುತ್ತದೆ.

Training Duration-ತರಬೇತಿ ಅವಧಿ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದಿಂದ ಏರ್ಪಡಿಸಿರುವ ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯು ದಿನಾಂಕ: 22 ಡಿಸೆಂಬರ್ 2025 ರಿಂದ ಪ್ರಾರಂಭವಾಗಿ 21 ಜನವರಿ 2026ಕ್ಕೆ ಮುಗಿಯಲಿದ್ದು ಒಟ್ಟು 31 ದಿನದ ತರಬೇತಿ ಇದಾಗಿರುತ್ತದೆ.

ಇದನ್ನೂ ಓದಿ: Agriculture Subsidy Schemes-ಕೃಷಿ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Who Can Apply Embroidery Training-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ತರಬೇತಿ ದಿನ ನೇರವಾಗಿ ಕೇಂದ್ರಕ್ಕೆ ಭೇಟಿ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರ ಅಭ್ಯರ್ಥಿಯ ವಯಸ್ಸು 18 ರಿಂದ 50 ವರ್ಷದ ಒಳಗಿರಬೇಕು.
ಗ್ರಾಮೀಣ ಭಾಗದ BPL ಕಾರ್ಡ ಹೊಂದಿರುವವರಿಗೆ ಮೊದಲ ಆದ್ಯತೆ ಇರುತ್ತದೆ.
ತರಬೇತಿಯನ್ನು ಪಡೆದು ಸ್ವಂತ ಉದ್ದಿಮೆಯನ್ನು ಆರಂಭಿಸುವವರಿಗೆ ಮೊದಲ ಆದ್ಯತೆ ಇರುತ್ತದೆ.

ಇದನ್ನೂ ಓದಿ: PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

Training Center Address-ತರಬೇತಿ ನಡೆದುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ,
ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ. - 581343

Embroidery Training Registration Method-ಮುಂಚಿತವಾಗಿ ಹೆಸರು ನೋಂದಣಿ ಮಾಡುವುದು ಹೇಗೆ?

ಈ ಮೇಲೆ ತಿಳಿಸಿರುವ ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ಮಹಿಳೆಯರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಿ ತರಬೇತಿಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಣಿ ಮಾಡಿ.

Step-1: ಮೊದಲಿಗೆ Register Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಿ.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣಿಸುವ "Submit" ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿಯನ್ನು ಪೂರ್ಣಗೊಳಿಸಿ.

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

Embroidery Training-

ಇದನ್ನೂ ಓದಿ: Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Required Documents For Embroidery Training- ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ದಾಖಲೆಗಳು:

ಅರ್ಹ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ಮೇಲಿನ ವಿಧಾನವನ್ನು ಅನುಸರಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡ ಬಳಿಕ ತರಬೇತಿ ನಡೆಯುವ ದಿನಾಂಕದಂದು ಕೇಂದ್ರಕ್ಕೆ ಭೇಟಿ ಮಾಡುವ ಸಮಯದಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ಅಭ್ಯರ್ಥಿಯ ನಾಲ್ಕು ಪಾಸ್ ಪೋರ್ಟ್ ಸೈಜ್ ಫೋಟೋ/Photo
ಅಭ್ಯರ್ಥಿಯ ಆಧಾರ್ ಕಾರ್ಡ/Aadhar
ಬ್ಯಾಂಕ್ ಪಾಸ್ ಬುಕ್/Bank Pass Book
ರೇಷನ್ ಕಾರ್ಡ್/Ration Card
ಪಾನ್ ಕಾರ್ಡ್/Pan Card ಇವುಗಳ ಜೆರಾಕ್ಸ್ ಪ್ರತಿ.

ಇದನ್ನೂ ಓದಿ: Insurance Scholarship-TATA AIA ಲೈಫ್ ಇನ್ಶುರೆನ್ಸ್ ವತಿಯಿಂದ 15,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

For More Information-ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಇತರೆ ತರಬೇತಿಗಾಗಿ ಸಂಪರ್ಕಿಸಿ:- 9538281989, 9449860007, 9916783825, 8880444612
Website Link- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: