Free Mushroom Training-ಉಚಿತ ಅಣಬೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

March 15, 2026 | Siddesh
Free Mushroom Training-ಉಚಿತ ಅಣಬೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!
Share Now:

ಇಂದಿನ ದಿನಗಳಲ್ಲಿ ಕೃಷಿ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಾಗಿಲ್ಲ. ಉಪಕಸುಬಾಗಿ ಅಣಬೆ ಸಾಕಾಣಿಕೆಯು(Free Mushroom Cultivation Training) ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡುವ ಉತ್ತಮ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಯುವಜನರಲ್ಲಿ ಸ್ವಯಂ ಉದ್ಯೋಗದ ಆಸಕ್ತಿ ಮೂಡಿಸಲು ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಿತ ಆರ್‌ಸೆಟಿ (RSETI) ಸಂಸ್ಥೆಯು ದೇವಗಿರಿ ಹಾವೇರಿಯಲ್ಲಿ ಹತ್ತು ದಿನಗಳ ಉಚಿತ ಅಣಬೆ ಸಾಕಾಣಿಕೆ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಈ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತದೆ. ಕೃಷಿಯೊಂದಿಗೆ ಹೆಚ್ಚುವರಿ ಆದಾಯ ಗಳಿಸಲು ಬಯಸುವವರು ಅಥವಾ ಸ್ವತಂತ್ರವಾಗಿ ಉದ್ಯಮ ಆರಂಭಿಸಲು ಆಸಕ್ತಿ ಇರುವವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು ಎಂಬುದು ವಿಶೇಷ.

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

ಅಣಬೆ ಸಾಕಾಣಿಕೆಯ ತಾಂತ್ರಿಕತೆ, ಮಾರುಕಟ್ಟೆ ಅವಕಾಶಗಳು ಮತ್ತು ನಿರ್ವಹಣೆಯ ಬಗ್ಗೆ ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಆಸಕ್ತರು ಈ ಕೂಡಲೇ ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಸ್ವಯಂ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು.

Free Mushroom Cultivation Training Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉಚಿತ ಅಣಬೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದು.

  • ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • 18 ರಿಂದ 50 ವರ್ಷ ವಯೋಮಿತಿಯೊಳಗಿನ ಯಾವುದೇ ಜಿಲ್ಲೆಯ ಆಸಕ್ತ ಯುವಕ ಮತ್ತು ಯುವತಿಯರು ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿದಾರರು ತರಬೇತಿಯನ್ನು ಪಡೆದ ಬಳಿಕ ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

Mushroom Farming Training Date-ತರಬೇತಿ ದಿನಾಂಕ:

ಉಚಿತ ಅಣಬೆ ಸಾಕಾಣಿಕೆ ತರಬೇತಿಯು ಜೂನ್ 1 ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ: Pearl farming-ಸಿಹಿ ನೀರು ಮುತ್ತು ಕೃಷಿ ತರಬೇತಿ: ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ!

Mushroom Farming Training Center-ತರಬೇತಿ ನಡೆಯುವ ಸ್ಥಳ:

ಅಣಬೆ ಸಾಕಾಣಿಕೆ ತರಬೇತಿಯು ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI), ದೇವಗಿರಿ, ಹಾವೇರಿ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗಿದೆ.

How To Apply For Mushroom Farming Training-ಅರ್ಜಿ ಸಲ್ಲಿಸುವುದು ಹೇಗೆ?

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿ ಇಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ 8660219375 ಕರೆ ಮಾಡಿ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು.

ಇದನ್ನೂ ಓದಿ: Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

ಇದನ್ನೂ ಓದಿ: Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

Free Mushroom Cultivation Training-ಸಂಪೂರ್ಣ ಉಚಿತ ತರಬೇತಿ:

ಅಣಬೆ ಸಾಕಾಣಿಕೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಅರ್ಜಿದಾರರು ಯಾವುದು ಬಗ್ಗೆಯ ಶುಲ್ಕವನ್ನು ಪಾವತಿಸುವಾಗಿಲ್ಲ ಜೊತೆಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಲ್ಲೇ ಏರ್ಪಡಿಸಲಾಗಿರುತ್ತದೆ.

Free Mushroom Cultivation Training Benefits-ಅಣಬೆ ಸಾಕಾಣಿಕೆಯ ಪ್ರಯೋಜನಗಳು:

ಕಡಿಮೆ ಜಾಗದಲ್ಲಿ ಮತ್ತು ಅಲ್ಪ ಹೂಡಿಕೆಯಲ್ಲಿ ಪ್ರಾರಂಭಿಸಬಹುದು.

ಕೃಷಿ ತ್ಯಾಜ್ಯಗಳನ್ನು ಬಳಸಿ ಬೆಳೆಯಬಹುದಾದ ಪರಿಸರ ಸ್ನೇಹಿ ಉದ್ಯಮ.

ಆಹಾರದಲ್ಲಿ ಅಣಬೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಉತ್ತಮ ಮಾರುಕಟ್ಟೆ ಲಭ್ಯವಿದೆ.

ಮನೆಯಲ್ಲಿಯೇ ಮಹಿಳೆಯರು ಕೂಡ ಉಪಕಸುಬಾಗಿ ಮಾಡಬಹುದು.

ಇದನ್ನೂ ಓದಿ: Milk incentive-ಬಮೂಲ್ ನಿಂದ ಹಾಲು ಉತ್ಪಾದಕರಿಗೆ 59 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ!

Documents For Free Mushroom Cultivation Training-ಅಗತ್ಯ ದಾಖಲೆಗಳ ಪಟ್ಟಿ:

ಉಚಿತ ಅಣಬೆ ಬೇಸಾಯ ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

ಆಧಾರ್ ಕಾರ್ಡ್ ಪ್ರತಿ/Adhar
ರೇಷನ್ ಕಾರ್ಡ್/Ration Card
ಪಾನ್ ಕಾರ್ಡ್/Pan Card
ಬ್ಯಾಂಕ್ ಪಾಸ್ ಬುಕ್/Bank Pass Book
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು/Photo

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: