Free Sewing Machine-ಈ ಜಿಲ್ಲೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

March 9, 2026 | Siddesh
Free Sewing Machine-ಈ ಜಿಲ್ಲೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!
Share Now:

2025-26ನೇ ಸಾಲಿನಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್‌ ಚಾಲಿತ(Free Sewing Machine) ಹೊಲಿಗೆ ಯಂತ್ರ ಪಡೆಯುವ ಅರ್ಜಿ ಜಿಲ್ಲಾ ಕೈಗಾರಿಕೆ ಕೇಂದ್ರ ಧಾರವಾಡವತಿಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಧಾರವಾಡ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಮತ್ತು ವೃತ್ತಿಪರ ಕುಶಲಕರ್ಮಿಗಳ ಬದುಕಿಗೆ ಆಸರೆಯಾಗಲು ಜಿಲ್ಲಾ ಕೈಗಾರಿಕಾ ಕೇಂದ್ರವು(DIC) ಮಹತ್ವದ ಹೆಜ್ಜೆಯನ್ನಿಟ್ಟಿದೆ. 2025-26ನೇ ಸಾಲಿನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು (Electric Sewing Machines) ವಿತರಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Mobile Canteen-ಒಕ್ಕಲಿಗ ನಿಗಮದಿಂದ 3.0 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಗೆ ಅರ್ಜಿ!

ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಮತ್ತು ಮಹಿಳೆಯರು ಹಾಗೂ ಕುಶಲಕರ್ಮಿಗಳನ್ನು(Free Sewing Machine Application) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Free Sewing Machine Purpose-ಯೋಜನೆಯ ಮುಖ್ಯ ಉದ್ದೇಶ:

ಇಂದಿನ ದಿನಗಳಲ್ಲಿ ಸಿದ್ಧ ಉಡುಪುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಅನೇಕರು ಟೈಲರಿಂಗ್ ಕಲಿತಿದ್ದರೂ, ಆಧುನಿಕ ವಿದ್ಯುತ್ ಚಾಲಿತ ಯಂತ್ರಗಳನ್ನು ಕೊಳ್ಳಲು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹವರಿಗೆ ನೆರವಾಗಲು ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ವತಿಯಿಂದ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರಿಂದ ಕುಶಲಕರ್ಮಿಗಳು ತಮ್ಮ ಮನೆಯಲ್ಲಿಯೇ ಸ್ವಂತ ಉದ್ಯೋಗ ಆರಂಭಿಸಿ, ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Education Assistance-ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ!

Free Sewing Machine Eligibility Criteria-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕಡ್ಡಾಯವಾಗಿ ಧಾರವಾಡ ಜಿಲ್ಲೆಯ ನಿವಾಸಿಯಾಗಿರಬೇಕು.

ಅರ್ಜಿದಾರರು ಟೈಲರಿಂಗ್ (ಹೊಲಿಗೆ) ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು.

ಯಾವುದೇ ಸರ್ಕಾರಿ ನೌಕರರು ಅಥವಾ ಅವರ ಮೇಲೆ ಅವಲಂಬಿತರಾದ ಕುಟುಂಬದ ಸದಸ್ಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಈ ಯೋಜನೆಯು ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ವೃತ್ತಿ ಕೌಶಲ ಹೊಂದಿರುವ ಕುಶಲಕರ್ಮಿಗಳಿಗಾಗಿ ಮೀಸಲಾಗಿದೆ.

ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಇದನ್ನೂ ಓದಿ: Free Beauty Parlour Training-35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Free Sewing Machine Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅರ್ಜಿದಾರರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕ ಮನೆಯಿಂದಲೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

Free Sewing Machine

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಜಿಲ್ಲೆ ಧಾರವಾಡ ಎಂದು ಆಯ್ಕೆ ಮಾಡಿಕೊಂಡು ನಿಮ್ಮ ತಾಲ್ಲೂಕು ಆಯ್ಕೆ ಮಾಡಿಕೊಂಡು ಇಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ.

Step-3: ನಂತರ ಈ ಕೆಳಗೆ ಕೇಳಿರುವ ಎಲ್ಲಾ ವಿವರವನ್ನು ಸಮರ್ಪಕವಾಗಿ ಭರ್ತಿ ಮಾಡಿ ಕೊನೆಯಲ್ಲಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Diploma Scholarship-ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿ ವೇತನ!

Required Documents Free Sewing Machine-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

1) ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
2) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣಪತ್ರ / ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಇನ್ನಿತರ ಪ್ರಮಾಣಪತ್ರ) (in PDF file),
3) ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣಪತ್ರ / ಅಂಕಪಟ್ಟಿ)
4) ಜಾತಿ ಪ್ರಮಾಣ ಪತ್ರ (ಪ.ಜಾ , ಪ.ಪಂ ಮತ್ತು ಅಲ್ಪಸಂಖ್ಯಾತರವರಿಗೆ ಮಾತ್ರ)
5) ಪಡಿತರ ಚೀಟಿ ,
6) ಮತದಾರರ ಗುರುತಿನ ಚೀಟಿ ,
7) ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ.

ಸರ್ಕಾರದ ಇಂತಹ ಯೋಜನೆಗಳು ಸಣ್ಣ ಪ್ರಮಾಣದ ಕುಶಲಕರ್ಮಿಗಳಿಗೆ ವರದಾನವಾಗಿವೆ. ನೀವು ಅಥವಾ ನಿಮ್ಮ ಪರಿಚಿತರು ಧಾರವಾಡ ಜಿಲ್ಲೆಯವರಾಗಿದ್ದು, ಟೈಲರಿಂಗ್ ವೃತ್ತಿ ಮಾಡುತ್ತಿದ್ದರೆ ತಡಮಾಡದೆ ಈ ಕೂಡಲೇ ಅರ್ಜಿ ಸಲ್ಲಿಸಿ. ಉಚಿತ ಹೊಲಿಗೆ ಯಂತ್ರ ಪಡೆಯುವ ಮೂಲಕ ನಿಮ್ಮ ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ ಬರೆಯಿರಿ.

ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರತಿಯನ್ನು (Acknowledgement) ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ಇದು ಮುಂದಿನ ಆಯ್ಕೆ ಪ್ರಕ್ರಿಯೆಗೆ ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ಧಾರವಾಡದ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: