Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

October 19, 2025 | Siddesh
Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!
Share Now:

ಪ್ರಸ್ತುತ ದಿನಗಳಲ್ಲಿ ಅನೇಕ ಸಾರ್ವಜನಿಕರು ಪ್ರತಿ ತಿಂಗಳು ನಾವು ತೆಗೆದುಕೊಳ್ಳುವ ಗ್ಯಾಸ್ ಗೆ ಸರಿಯಾಗಿ ಸಬ್ಸಿಡಿ(Gas Cylinder Subsidy Scheme)ಜಮಾ ಅಗುತ್ತಿಲ್ಲ ಎಂದು ದೂರುತ್ತಿದ್ದು ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಗ್ಯಾಸ್ ಸಬ್ಸಿಡಿ ಜಮಾ ಅಗದಿರಲು ಕಾರಣಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ(PM Ujwal Yojane) ದೇಶಾದ್ಯಂತ ಮನೆ ಬಳಕೆಗೆ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಲೇಖನದಲ್ಲಿ ಸದರಿ ಯೋಜನೆ ಸಬ್ಸಿಡಿ ಹಣ ವರ್ಗಾವಣೆಯ ಕುರಿತು ಉಪಯುಕ್ತ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Bussiness Loan Subsidy-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ ₹1.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

ಗ್ರಾಹಕರಿಗೆ ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಗ್ಯಾಸ್ ಸಬ್ಸಿಡಿ ಹೇಗೆ ವರ್ಗಾವಣೆ ಮಾಡಲಾಗುತ್ತದೆ? ಗ್ಯಾಸ್ ಸಬ್ಸಿಡಿ ಸ್ಥಗಿತವಾಗಲು ಪ್ರಮುಖ ಕಾರಣಗಳೇನು?ಎಲ್ಲಾ ಮಾಹಿತಿ ಸರಿಯಾಗಿದ್ದರು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಜಮಾ ಆಗದಿದ್ದರೆ ದೂರು ಸಲ್ಲಿಸುವುದು ಹೇಗೆ? ಗ್ಯಾಸ್ ಸಬ್ಸಿಡಿ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Gas Subsidy Amount-ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಗ್ರಾಹಕರು ಮನೆ ಬಳಕೆಗೆ ಪ್ರತಿ ತಿಂಗಳು ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಗೆ ಕೇಂದ್ರ ಸರಕಾರವು ಪ್ರತಿ ಸಿಲಿಂಡರ್ ಗೆ ರೂ 300/-ಮರು ಪಾವತಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

How to get gas subsidy amount-ಗ್ಯಾಸ್ ಸಬ್ಸಿಡಿ ಹೇಗೆ ವರ್ಗಾವಣೆ ಮಾಡಲಾಗುತ್ತದೆ?

ಸಾರ್ವಜನಿಕರು ಪೂರ್ಣ ಪ್ರಮಾಣದ ಹಣವನ್ನು ಪಾವತಿ ಮಾಡಿ ಅಂದರೆ ರೂ 920/- ಅನ್ನು ಪಾವತಿ ಮಾಡಿ ಸಿಲಿಂಡರ್ ಪಡೆಯಬೇಕು ಬಳಿಕ ಗ್ರಾಹಕರು ಯಾರ ಹೆಸರಿಗೆ ಗ್ಯಾಸ್ ಬುಕ್ ಮಾಡಿರುತ್ತಾರೋ ಅವರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ 30 ದಿನದಲ್ಲಿ ರೂ 3,00/- ಅನ್ನು ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: Ragi Kharidi Kendra 2025-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ! ಪ್ರತಿ ಕ್ವಿಂಟಾಲ್ ಗೆ 4886/- ರೂ ನಿಗದಿ!

Reason for the cessation of gas subsidy-ಗ್ಯಾಸ್ ಸಬ್ಸಿಡಿ ಸ್ಥಗಿತವಾಗಲು ಪ್ರಮುಖ ಕಾರಣಗಳು ಮತ್ತು ಸರಿಪಡಿಸುವ ಕ್ರಮ:

ಅನೇಕ ಸಾರ್ವಜನಿಕರು ನಮಗೆ ಈ ಹಿಂದೆ ಸರಿಯಾಗಿ ನಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಜಮಾ ಅಗುತ್ತಿತ್ತು ಅದರೆ ಪ್ರಸ್ತುತ ಸಬ್ಸಿಡಿ ಹಣ ಜಮಾ ಅಗುವುದು ಸ್ಥಗಿತವಾಗಿ ಎಂದು ತಿಳಿಸಿದ್ದು ಇದಕ್ಕೆ ಪ್ರಮುಖ ಕಾರಣಗಳ ಪಟ್ಟಿ ಈ ಕೆಳಗಿನಂತಿದೆ:

E-kyc ಬಾಕಿಯಿರುವುದು: ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿಯನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಕೊಳ್ಳುವುದು ಕಡ್ಡಾಯ ಸದರಿ ಕಾರಣದಿಂದ ಕೂಡಲೇ ಇ-ಕೆವೈಸಿ ಮಾಡಿಕೊಳ್ಳದೇ ಇರುವವರು ನಿಮಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಡೆಲಿವರಿವವರ ಬಳಿ ಅಗತ್ಯ ವಿವರ ಸಲ್ಲಿಸಿ ಕೆವೈಸಿ ಮಾಡಿಸಿ ಅಥವಾ ಗ್ಯಾಸ್ ಸರಬರಾಜು ಏಜೆನ್ಸಿ ಕಚೇರಿಯನ್ನು ಭೇಟಿ ಮಾಡಿ ಕೆವೈಸಿ ಮಾಡಿಸಬಹುದು.

ಇದನ್ನೂ ಓದಿ: Bele Parihara 2025-ಮಳೆ ಮತ್ತು ಪ್ರವಾಹ ಸಂತ್ರಸ್ತ ರೈತರಿಗೆ ಬೆಳೆ ಹಾನಿ ಪರಿಹಾರ ₹ 31,000ಗೆ ಹೆಚ್ಚಿಸಿದ ರಾಜ್ಯ ಸರಕಾರ!

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೇ ಇರುವುದು: ಎಲ್ಲಾ ಸಾರ್ವಜನಿಕರಿಗೂ ಸರ್ವೆ ಸಾಮಾನ್ಯವಾಗಿ ತಿಳಿದಿರುವ ಹಾಗೇ ಯಾವುದೇ ಸರಕಾರಿ ಯೋಜನೆಯ ಲಾಭವನ್ನು ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅಗುವುದು ಕಡ್ಡಾಯವಾಗಿ ಈ ನಿಟ್ಟಿನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇದ್ದರೆ ಗ್ಯಾಸ್ ಸಬ್ಸಿಡಿ ಹಣ ಜಮಾ ಅಗುವುದಿಲ್ಲ.

ಬ್ಯಾಂಕ್ ಅಕೌಂಟ್ Inactive ಆಗಿರುವುದು: ಬ್ಯಾಂಕ್ ಖಾತೆಯನ್ನು ತೆರೆದು ಬಹಳ ವರ್ಷ ಹಣ ವರ್ಗಾವಣೆ ಮಾಡದೇ ಹಾಗೇಯೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆ Inactive ಅಗಿರುತ್ತದೆ ಒಂದೊಮ್ಮೆ ಈ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಗ್ಯಾಸ್ ಸಬ್ಸಿಡಿ ಜಮಾ ಅಗುವುದಿಲ್ಲ ಇದನ್ನು ಸರಿಪಡಿಸಲು ಕೂಡಲೇ ಈ ಬ್ಯಾಂಕ್ ಖಾತೆಯನ್ನು "Active" ಮಾಡಿ ಅಥವಾ ಪ್ರಸ್ತುತ ಚಾಲ್ತಿಯಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಸಿ.

ಇದನ್ನೂ ಓದಿ: Gram Sumangal Scheme-ಪ್ರತಿ ತಿಂಗಳು 95 ಪಾವತಿಸಿದರೆ, 14 ಲಕ್ಷ ರೂಪಾಯಿ ಪಡೆಯಿರಿ!

Cylinder Subsidy

Gas subsidy complaint-ಎಲ್ಲಾ ಮಾಹಿತಿ ಸರಿಯಾಗಿದ್ದರು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಜಮಾ ಆಗದಿದ್ದರೆ ದೂರು ಸಲ್ಲಿಸುವುದು ಹೇಗೆ?

ಸಾರ್ವಜನಿಕರು ಈ ಮೇಲೆ ತಿಳಿಸಿರುವ ಎಲ್ಲಾ ತಾಂತ್ರಿಕ ಮಾಹಿತಿಗಳು ಸರಿಯಾಗಿದ್ದರು ಸಹ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸಬ್ಸಿಡಿ ಹಣ ಜಮಾ ಅಗದೇ ಇದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ಗ್ಯಾಸ್ ಸಬ್ಸಿಡಿ ಜಮಾ ಅಗದೇ ಇರುವ ಬಗ್ಗೆ ಕೆಳಗಿನ ವಿಧಾನವನ್ನು ಅನುಸರಿಸಿ ದೂರನ್ನು ಸಲ್ಲಿಸಬಹುದು.

Step-1: https://pmuy.gov.in/mylpg.html ಈ ಲಿಂಕ್ ಮೇಲೆ ಕ್ಲಿಕ್ ಮಾಡಿ mylpg ಜಾಲತಾಣವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!

Step-2: ಇಲ್ಲಿ HP/Indian/Bharat ಸಿಲಿಂಡರ್ ಚಿತ್ರಗಳು ಈ ಪೇಜ್ ನ ಬಲಬದಿಯಲ್ಲಿ ಕಾಣಿಸುತ್ತವೆ ನಿಮ್ಮ ಮನೆಗೆ ತರಿಸುವ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮುಂಚಿತ ಪುಟಕ್ಕೆ ಭೇಟಿ ಮಾಡಿ.

Step-3: ಈ ಪೇಜ್ ನಲ್ಲಿ ಮೇಲೆ ಕಾಣುವ "Give Feedback" ಬಟನ್ ಮೇಲೆ ಕ್ಲಿಕ್ ಮಾಡಿ ಮುದಿನ ಪೇಜ್ ನಲ್ಲಿ "LPG" ಎಂದು ಆಯ್ಕೆ ಮಾಡಿಕೊಂಡು Type ಆಯ್ಕೆಯಲ್ಲಿ-"Complaint" ಸೆಲೆಕ್ಟ್ ಮಾಡಿ ಬಳಿಕ Program ಆಯ್ಕೆಯಲ್ಲಿ "Subsidy Related" ಎಂದು ಆಯ್ಕೆ ಮಾಡಿಕೊಂಡು ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ದೂರು ಸಲ್ಲಿಸಿ.

ಇದನ್ನೂ ಓದಿ: B-Khata to A-Khata-ರಾಜ್ಯ ಸರಕಾರದಿಂದ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ!

Gas subsidy status-ಗ್ಯಾಸ್ ಸಬ್ಸಿಡಿ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಸಾರ್ವಜನಿಕರು ಪ್ರತಿ ತಿಂಗಳು ಸರಿಯಾಗಿ ತಮಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಜಮಾ ಅಗುವುದನ್ನು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡಿ ಬ್ಯಾಂಕ್ ಪಾಸ್ ಬುಕ್ ಅನ್ನು ಪ್ರಿಂಟ್ ಮಾಡಿ ಇದರಲ್ಲಿ ujjwal subsidy ಎಂದು ರೂ 3,00/- ಜಮಾ ವಿವರ ಇದಿಯಾ? ಎಂದು ಚೆಕ್ ಮಾಡುವ ಮೂಲಕ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: