Gruhalakshmi pending amount-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಒಂದೇ ಬಾರಿಗೆ ಬಾಕಿ ಕಂತಿನ ಎಲ್ಲಾ ಗೃಹಲಕ್ಷ್ಮಿ ಯೋಜನೆ ಹಣ ಬಂತು!

January 26, 2024 | Siddesh

ಗೃಹಲಕ್ಷ್ಮಿ(Gruhalakshmi yojana) ಯೋಜನೆಯಡಿ ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ಪ್ರತಿ ತಿಂಗಳು ರಾಜ್ಯ ಸರಕಾರದಿಂದ ರೂ 2,000 ಅರ್ಥಿಕ ನೆರವನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ಸ್ವಲ್ಪ ಪ್ರಮಾಣದ ಅರ್ಹ ಮಹಿಳೆಯರಿಗೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಕೆಲವು ತಾಂತ್ರಿಕ ತೊಂದರೆಗಳು ಉಂಟಾಗಿರುತ್ತವೆ.

ಈ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವವರು ಮತ್ತು ಈ ಯೋಜನೆಯಡಿ ಬಾಕಿ ಹಣ ಪಡೆಯಲು ಯಾವ ಕ್ರಮ ಅನುಸರಿಸಬೇಕು ಎಂದು ವಿವರಿಸಲಾಗಿದೆ.

ಮೊದಲಿಗೆ ಇಲ್ಲಿಯವರೆಗೆ ಒಂದು ಕಂತು ಬರದವರು ಏನು ಮಾಡಬೇಕು ಎಂದು ತಿಳಿಸಲಾಗಿ ನಂತರ ಮೊದಲೆ ಅರ್ಜಿ ಸಲ್ಲಿಸಿದರು ಒಂದೆರಡು ಕಂತು ಬಂದವರು ಬಾಕಿ ಕಂತಿನ ಹಣ ಹೇಗೆ ಪಡೆಯಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Ration card application-ಗ್ರಾಮ ಒನ್ ನಲ್ಲಿ ರೇಷನ್ ಕಾರ್ಡಗೆ ಹೊಸ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

Gruhalakshmi pending amount- ಮೊದಲೇ ಅರ್ಜಿ ಸಲ್ಲಿಸಿದರು ಇನ್ನು ಒಂದು ಕಂತು ಹಣ ಪಡೆಯದವರು ಈ ಕೆಳಗಿನ ವಿಧಾನವನ್ನು ಅನುಸರಿ ಬಾಕಿ ಕಂತಿನ ಹಣ ಪಡೆಯಬಹುದು:

1) CDPO office- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಭೇಟಿ:

ಯಾವ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿರುತ್ತಿರುವ ಅಲ್ಲಿಂದ ಈ ಯೋಜನೆಯಡಿ ಬಾಕಿ ಕಂತಿನ ಹಣ ಪಡೆಯಲು ಅರ್ಹರಿರುತ್ತಾರೆ ಇಂತಹ ಫಲಾನುಭವಿಗಳು ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯನ್ನು ಅಗತ್ಯ ದಾಖಲಾತಿಗಳಾದ ಬ್ಯಾಂಕ್ ಪಾಸ್ ಬುಕ್, ಅರ್ಜಿದಾರರ ಆಧಾರ್ ಕಾರ್ಡ, ಕುಟುಂಬದ ಪಡಿತರ ಚೀಟಿಯೋಂದಿಗೆ ಭೇಟಿ ಮಾಡಿ,

ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಇ-ಕೆವೈಸಿ ಮಾಡುವುದು ಏನಾದರು ಪೆಂಡಿಗ್ ಇದಿಯಾ? ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯಾ? ಇಲ್ಲವಾ? ಯಾವ ತಾಂತ್ರಿಕ ಸಮಸ್ಯೆಯಿಂದ ನಿಮಗೆ ಅರ್ಜಿ ಸಲ್ಲಿಸಿಯೂ ಹಣ ಬಂದಿರುವುದಿಲ್ಲ ಎಂದು ಚೆಕ್ ಮಾಡಿಕೊಂಡು ಆ ಸಮಸ್ಯೆ ನಿರ್ವಹಣೆ ಕ್ರಮದ ಕುರಿತು ಮಾಹಿತಿ ಪಡೆದು ಅರ್ಜಿ ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು ತಿಳಿಯಬವುದು.

ಇದರ ಜೊತೆಗೆ ನಿಮ್ಮ ಅರ್ಜಿ ಸಿಡಿಪಿಒ ಲಾಗಿನ್ ನಲ್ಲಿ ಏನಾದರು ಅನುಮೋದನೆಗೆ ಬಾಕಿ ಉಳಿದಿದೆಯೇ? ಎಂದು ಒಮ್ಮೆ ಚೆಕ್ ಮಾಡಿಸಿಕೊಳ್ಳಬೇಕು.

ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(CDPO office) ವಿಳಾಸ ಪಡೆಯಲು ಲಿಂಕ್: click here

2) Gruhalakshmi e-KYC: ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು:

ಅರ್ಜಿದಾರರು ನೀವು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭೇಟಿ ಮಾಡಿದಾಗ ನಿಮ್ಮ ಅರ್ಜಿಯ ಇ-ಕೆವೈಸಿ ಅಗಿದಿಯೇ ಎಂದು ಚೆಕ್ ಮಾಡಿಕೊಳ್ಳಬೇಕು ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPIC mapping ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಬಂದಿಲ್ಲ ಎಂದು ತಿಳಿಸಿದರೆ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಫಲಾನುಭವಿ ಅಗತ್ಯ ದಾಖಲಾತಿಗಳನ್ನು ನೀಡಿ ಅಕೌಂಟ್ ಅನ್ನು ತೆರೆಯಿರಿ.

ಇದನ್ನೂ ಓದಿ: ಕೇರಾ ಸುರಕ್ಷಾ ರೂ. 94/- ಪಾವತಿ ಮಾಡಿ 5 ಲಕ್ಷ ವಿಮಾ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಈ ಮೇಲೆ ತಿಳಿಸಿರುವಂತೆಗೆ ನಿಮ್ಮ ಅರ್ಜಿ ಸಿಡಿಪಿಒ ಲಾಗಿನ್ ಅನ್ನು ಬಾಕಿ ಉಳಿದಿರುವುದನ್ನು ಅನುಮೋದನೆ ಮಾಡಿಸಿದ ಬಳಿಕ ಮತ್ತು ನಿಮ್ಮ ಅರ್ಜಿಯ ಇ-ಕೆವೈಸಿಯನ್ನು ಮಾಡಿಸಿ ಇದರ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ತಾಂತ್ರಿಕ ಸಮಸ್ಯೆಗೆ ಅಂಚೆ ಕಚೇರಿಯಲ್ಲಿ ಫಲಾನುಭವಿ ಹೆಸರಿನಲ್ಲಿ ಹೊಸ ಅಕೌಂಟ್ ಅನ್ನು ತೆರೆದರೆ ನಿಮಗೆ ಈ ಯೋಜನೆಯಡಿ ನೀವು ಅರ್ಜಿ ಸಲ್ಲಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಕಂತು ಹಣ ಬರುವುದು ಬಾಕಿಯಿರುತ್ತದೆಯೋ ಎಲ್ಲವೂ ಒಂದೇ ಬಾರಿಗೆ ನಿಮ್ಮ ಖಾತೆಗೆ ಜಮಾ ಅಗುತ್ತದೆ.

ಈ ರೀತಿ ಮಾಡಿರುವ ನಮ್ಮ ಪುಟದ ಹಿಂಬಾಲಕರಿಗೆ ಜನವರಿ ತಿಂಗಳಲ್ಲಿ ಒಂದರಲ್ಲೇ ಮೂರು ಕಂತು ಗೃಹಲಕ್ಷ್ಮಿ ಹಣ ಬಂದಿರುವ ಮಾಹಿತಿ ಈ ಕೆಳಗಿನ ಚಿತ್ರದಲ್ಲಿದೆ:

ಗೃಹಲಕ್ಷ್ಮಿ ಯೋಜನೆಯ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here

WhatsApp Group Join Now
Telegram Group Join Now
Share Now: