Internship Program-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಯೋಜನೆ!ತಿಂಗಳಿಗೆ ರೂ 20,000/- ಗೌರವಧನ!

August 13, 2025 | Siddesh
Internship Program-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಯೋಜನೆ!ತಿಂಗಳಿಗೆ ರೂ 20,000/- ಗೌರವಧನ!
Share Now:

ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಯೋಜನೆಯಡಿಯಲ್ಲಿ(Internship Program) ಅರ್ಹ ಮಹಿಳೆಯರಿಗೆ ಕೌಶಲ್ಯ ಕಲಿಕೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

“ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್” ಎಂಬ ಪ್ರಧಾನ ಮಂತ್ರಿಗಳ ಕಲ್ಪನೆಯನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇಂಟರ್ನ್‌ಶಿಪ್ ಪ್ರೋಗ್ರಾಂನ್ನು(Govt internship Scheme) ಆರಂಭಿಸಿದೆ. ಈ ಯೋಜನೆಯ ಉದ್ದೇಶ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮಹಿಳಾ ವಿದ್ಯಾರ್ಥಿನಿಯರು, ಸಂಶೋಧಕರು, ಸಮಾಜ ಸೇವಕರು ಹಾಗೂ ಶಿಕ್ಷಕಿಯರ ಪ್ರತಿಭೆಯನ್ನು ಬಳಸಿಕೊಳ್ಳುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BPL Card-ಶೀಘ್ರದಲ್ಲಿ ರಾಜ್ಯ ಸರಕಾರದಿಂದ 12.68 ಲಕ್ಷ ಅಕ್ರಮ BPL ಕಾರ್ಡ ರದ್ದು: ಸಚಿವ ಕೆ ಹೆಚ್ ಮುನಿಯಪ್ಪ!

ಇಂಟರ್ನ್‌ಶಿಪ್ ಯೋಜನೆ ಆನ್ಲೈನ್ ಮೂಲಕ(Government internship for women) ಅರ್ಜಿ ಸಲ್ಲಿಸುವುದು ಹೇಗೆ? ಇದರಿಂದ ಮಹಿಳೆಯಾರಿಗೆ ಯಾವೆಲ್ಲ ಪ್ರಯೋಜನಗಳಿವೆ? ಇಂಟರ್ನ್‌ಶಿಪ್ ಯೋಜನೆ ಹೇಗಿರುತ್ತದೆ? ಸೌಲಭ್ಯಗಳ ವಿವರ ಸೇರಿದಂತೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Government Internship Eligibility Criteria-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರ ಮಹಿಳೆಯರು ಭಾರತದ ಖಾಯಂ ನಿವಾಸಿಯಾಗಿರಬೇಕು.

ದೇಶದ ಎಲ್ಲಾ ಭಾಗದ ಟಿಯರ್-1 ನಗರಗಳ ಹೊರಗಿನ ಭಾಗಗಳಿಂದ ಅಥವಾ ಗ್ರಾಮೀಣ ಪ್ರದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿಶ್ವವಿದ್ಯಾಲಯ / ಶೈಕ್ಷಣಿಕ ಅಥವಾ ಅಶೈಕ್ಷಣಿಕ ಸಂಸ್ಥೆಗಳಿಗೆ ಸೇರಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯ ವಯೋಮಿತಿ: 21 ರಿಂದ 40 ವರ್ಷದ ಒಳಗಿರಬೇಕು.

ಒಮ್ಮೆ ಆಯ್ಕೆಯಾದವರು ಮತ್ತೆ ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

Internship Details-ಯೋಜನೆಯ ವ್ಯಾಪ್ತಿ:

ಇಂಟರ್ನ್‌ಶಿಪ್ ಅವಧಿಯಲ್ಲಿ ಮಹಿಳೆಯರು ಸಚಿವಾಲಯದ ನೀತಿ ಮತ್ತು ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಸಣ್ಣ ಮಟ್ಟಿನ ಸಂಶೋಧನೆ, ಪೈಲಟ್ ಪ್ರಾಜೆಕ್ಟ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ವಿಷಯಗಳಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರದ ಯೋಜನೆಗಳ ಸುಧಾರಣೆಗೆ ಸಲಹೆ ನೀಡುವ ಉದ್ದೇಶವನ್ನು ಒಳಗೊಂಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Internship Admission Timing-ಅವಧಿ ಮತ್ತು ಬ್ಯಾಚ್‌ಗಳು ಪ್ರತಿ ಹಣಕಾಸು ವರ್ಷದಲ್ಲಿ ನಾಲ್ಕು ಹಂತಗಳಲ್ಲಿ ನಡೆಯುತ್ತದೆ:

  • ಮೇ – ಜೂನ್
  • ಆಗಸ್ಟ್ – ಸೆಪ್ಟೆಂಬರ್
  • ನವೆಂಬರ್ – ಡಿಸೆಂಬರ್
  • ಫೆಬ್ರವರಿ – ಮಾರ್ಚ್

ಇದನ್ನೂ ಓದಿ: SIM Card Status-ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ತೆಗೆದುಕೊಳ್ಳಲಾಗಿದೆ? ಈಗಲೇ ಚೆಕ್ ಮಾಡಿ!

Internship Duration-ಪ್ರತಿ ಹಂತದ ಅವಧಿ ಎಷ್ಟು?

ಇಂಟರ್ನ್‌ಶಿಪ್ ತರಬೇತಿಯನ್ನು ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ 2 ತಿಂಗಳು ಅವಧಿಯ ತರಬೇತಿಯನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೀಡಲಾಗುತ್ತದೆ ಪ್ರತಿ ಬ್ಯಾಚ್‌ಗೆ ಗರಿಷ್ಠ 20 ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ.

Internship Facilities-ಇಂಟರ್ನ್‌ಶಿಪ್ ಸೌಲಭ್ಯಗಳು:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ₹20,000 ಸ್ಟೈಪೆಂಡ್ ನೀಡಲಾಗುತ್ತದೆ.
  • ಪ್ರಯಾಣ ವೆಚ್ಚ (AC ಬಸ್ / 3-tier AC ರೈಲು) ಒದಗಿಸಲಾಗುತ್ತದೆ.
  • ಹಾಸ್ಟೆಲ್ ಸೌಲಭ್ಯ (ಟ್ರಿಪಲ್ ಶೇರ್ ರೂಮ್, ಬೆಡ್, ಟೇಬಲ್, ಕುರ್ಚಿ, ಕಬರ್ಡ್) – ಮೆಸ್ ವೆಚ್ಚ ಸ್ವಂತ ಭರಿಸಬೇಕಾಗುತ್ತದೆ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರವನ್ನು ಆರಂಭಿಸಲು ಅರ್ಜಿ ಆಹ್ವಾನ!

How To Apply-ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

Step-1: ಮೊದಲಿಗೆ ಇಲ್ಲಿ ಕ್ಲಿಕ್ "Internship Online Application" ಮಾಡಿ ಅಧಿಕೃತ ಕೇಂದ್ರದ ಇಂಟರ್ನ್‌ಶಿಪ್ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

internship program

Step-2: ಪ್ರತಿ ತಿಂಗಳು 01 ರಿಂದ 10 ನೇ ತಾರೀಕಿನ ಮಧ್ಯದಲ್ಲಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದ್ದು ಈ ಪೇಜ್ ನಲ್ಲಿ ಕಾಣುವ "Register" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು ಬಳಿಕ ಅರ್ಜಿ ಬಳಕೆದಾರ ಐಡಿ ಮತ್ತು ಪಾರ್ವಡ್ ಅನ್ನು ಹಾಕಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Ganga Kalyana-2025: ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Apllication Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:

ಇಂಟರ್ನ್‌ಶಿಪ್ ಪ್ರಾರಂಭಕ್ಕೂ 2 ತಿಂಗಳು ಮೊದಲು, ಪ್ರತಿ ಹಂತಕ್ಕೆ 1ರಿಂದ 10ರೊಳಗೆ ಅರ್ಜಿ ಸಲ್ಲಿಸಬೇಕು.

Selecetion Procces-ಆಯ್ಕೆ ಪ್ರಕ್ರಿಯೆ:

ಸಚಿವಾಲಯದ ಆಯ್ಕೆ ಸಮಿತಿ, ಅಗತ್ಯವಿದ್ದರೆ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಅಥವಾ ತಜ್ಞರ ಸಹಾಯದಿಂದ ಆಯ್ಕೆ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Students Scholarship-1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Internship Benefits-ಇಂಟರ್ನ್‌ಶಿಪ್ ಪಡೆಯುವುದರಿಂದ ಆಗುವ ಪ್ರಯೋಜನವೇನು?

ಈ ಇಂಟರ್ನ್‌ಶಿಪ್ ಯೋಜನೆಯ ಪ್ರಯೋಜನವನ್ನು ಪಡೆಯುವುದರ ಮೂಲಕ ಅಭ್ಯರ್ಥಿಗಳು ಮುಂದಿನ ಭವಿಷ್ಯದ ದಿನಗಳಲ್ಲಿ ಉತ್ತಮ ಸ್ಥಳ/ಕಂಪನಿ/ಸರಕಾರಿ ಕಚೇರಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕೌಶಲ್ಯವನ್ನು ಒದಗಿಸುತ್ತದೆ. ನೆನಪಿರಲಿ ಈ ಇಂಟರ್ನ್‌ಶಿಪ್ ಯೋಜನೆಯು ಇದು ಉದ್ಯೋಗದ ಆಫರ್ ಅಗಿರುವುದಿಲ್ಲ.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಗತ್ಯ ಮಾಹಿತಿ:

ಡಿಪ್ಯುಟಿ ಡೈರೆಕ್ಟರ್ (ಇಂಟರ್ನ್‌ಶಿಪ್ ಪ್ರೋಗ್ರಾಂ)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
Jeevan Tara Building, ಅಶೋಕ ರಸ್ತೆ, ನವದೆಹಲಿ – 110001
Email: mwcd-research@gov.in
ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: