Maternity Benefit-ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ 50,000 ರೂ. ಹೆರಿಗೆ ಸಹಾಯಧನ!

January 29, 2026 | Siddesh
Maternity Benefit-ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ 50,000 ರೂ. ಹೆರಿಗೆ ಸಹಾಯಧನ!
Share Now:

ಕರ್ನಾಟಕ ಕಟ್ಟಡ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ (Taayi Lakshmi Bond Scheme)ತಾಯಿ ಲಕ್ಷ್ಮೀ ಬಾಂಡ್ ಯೋಜನೆಯ ಅಡಿಯಲ್ಲಿ ಮಹಿಳಾ ಕಾರ್ಮಿಕರಿಗೆ 50,000 ರೂ. ವರೆಗೆ ಹೆರಿಗೆ ಸಹಾಯಧನ ಪಡೆಯಲು ಅವಕಾಶವಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹಿಂದೂ ಎಂದೆಂದಿಗೂ ಮಹಿಳೆಯೇ ಒಂದು ಕುಟುಂಬದ (Karnataka women labour scheme)ಆಧಾರ ಸ್ತಂಭವಾಗಿರುತ್ತಾಳೆ. ಅದರಲ್ಲಿಯೂ ಮಹಿಳಾ ಕಾರ್ಮಿಕರು ಶಾರೀರಿಕವಾಗಿ ಕಷ್ಟಕರ ಕೆಲಸ ಮಾಡುವುದರ ಜೊತೆಗೆ ಗರ್ಭಾವಸ್ಥೆ ಮತ್ತು ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Samudaya Bhavana Grant-ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಆರ್ಥಿಕ ನೆರವು!

ಇಂತಹ ಸಂದರ್ಭಗಳಲ್ಲಿ ಅವರಿಗೆ ನೆರವಾಗಲು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಹಾಗೂ ಮಹಿಳೆಯು ಗರ್ಭಧಾರಣೆಯಿಂದ ಹಿಡಿದು ಮಗುವಿನ(pregnancy support government scheme) ಜನನದವರೆಗೆ ಮಹಿಳೆಯ ಆರೋಗ್ಯ ಮತ್ತು ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಪ್ರಸ್ತುತ ಈ ಅಂಕಣದಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಹರು? ಏನಿದು ತಾಯಿ ಲಕ್ಷ್ಮೀ ಬಾಂಡ್ ಯೋಜನೆ? ಅರ್ಜಿಯನ್ನು ಎಲ್ಲಿ ಕೊಡಬೇಕು? ಈ ಯೋಜನೆಯ ಪ್ರಮುಖ ಉದ್ದೇಶವೇನು? ಈ ಯೋಜನೆಯಡಿ ನೀಡುವ ಸಹಾಯಧನದ ಮೊತ್ತ? ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

ಇದನ್ನೂ ಓದಿ: Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

Taayi Lakshmi Bond Scheme-ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಎಂದರೇನು?

ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಇದನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಜಾರಿಗೆ ತಂದಿರುವ ಯೋಜನೆಯಾಗಿದ್ದು, ನೋಂದಾಯಿತ ಮಹಿಳಾ ಕಾರ್ಮಿಕರಿಗೆ ನೀಡಲಾಗುವ ವಿಶೇಷ ಮಾತೃತ್ವ ಸಹಾಯ ಯೋಜನೆಯಾಗಿದೆ. ಹಾಗೂ ಹೆರಿಗೆ ಸಮಯದಲ್ಲಿ ಆಗುವಂತಹ ಆಸ್ಪತ್ರೆ ವೆಚ್ಚ, ಪೌಷ್ಟಿಕ ಆಹಾರ, ಔಷಧಿ, ಆರೈಕೆ ಇತ್ಯಾದಿಗಳಿಗಾಗಿ ಸರ್ಕಾರದಿಂದ ನೇರವಾಗಿ ಹಣಕಾಸಿನ ನೆರವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತಂದಿದೆ.

Purpose Of This SCheme-ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು?

ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಮಯದಲ್ಲಿ ಆರ್ಥಿಕ ಸಹಾಯವನ್ನು ನೀಡುವುದು.

ತಾಯಿ ಮತ್ತು ಶಿಶು ಗಳಲ್ಲಾಗುವ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದು.

ಸುರಕ್ಷಿತ ಮತ್ತು ಆಸ್ಪತ್ರೆ ಆಧಾರಿತ ಹೆರಿಗೆಗೆ ಉತ್ತೇಜನ ನೀಡುವುದು.

ಕಾರ್ಮಿಕ ಕುಟುಂಬಗಳ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು.

ಮಹಿಳೆಯರಿಗೆ ಗೌರವಯುತ ಮಾತೃತ್ವ ಜೀವನ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ:Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Maternity Benefit Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ?

ಕರ್ನಾಟಕ ಕಟ್ಟಡ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯು ಜಾರಿಗೆ ತಂದಿರುವ ತಾಯಿ ಲಕ್ಷ್ಮೀ ಬಾಂಡ್ ಯೋಜನೆಯ ಅಡಿಯಲ್ಲಿ ಒಟ್ಟು 50,000 ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ

ಹೆಣ್ಣು ಮಗು ಜನಿಸಿದರೆ: 30,000 ರೂ ಗಳು
ಗಂಡು ಮಗು ಜನಿಸಿದರೆ: 20,000 ರೂ ಗಳು

ಈ ಮೊತ್ತವೂ ಹೆರಿಗೆಯ ನಂತರ ನೇರವಾಗಿ ಮಹಿಳೆಯ ಬ್ಯಾಂಕ್ ಖಾತೆಗೆ DBT ಯ ಮೂಲಕ ನೇರವಾಗಿ ಜಮಾ ಆಗುತ್ತದೆ.

ಇದನ್ನೂ ಓದಿ: Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!

Who Can Apply-ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಹರು?

ಸಹಾಯಧನವನ್ನು ಪಡೆಯಲು ಅರ್ಜಿದಾರ‍ ಮಹಿಳೆಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅಭ್ಯರ್ಥಿಯು ನೋಂದಾಯಿತರಾಗಿರಬೇಕು.

ಮಹಿಳಾ ಕಾರ್ಮಿಕರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಈ ಯೋಜನೆಯ ಸೌಲಭ್ಯವು ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಹಿಂದಿನ 12 ತಿಂಗಳಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.

ಇದನ್ನೂ ಓದಿ: Marriage Registration-ಇನ್ಮುಂದೆ ಮನೆಯಲ್ಲೇ ಕುಳಿತು ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿ!

maternity subsidy scheme

ಇದನ್ನೂ ಓದಿ: Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ/Aadhar Card
  • ಕಾರ್ಮಿಕ ಕಾರ್ಡ/Karmika Card
  • ಹೆರಿಗೆ ಪ್ರಮಾಣ ಪತ್ರ/Delivery Certificate
  • ಮಗುವಿನ ಜನನ ಪ್ರಮಾಣ ಪತ್ರ/Birth Certificate
  • ಬ್ಯಾಂಕ್ ಪಾಸ್ ಪುಸ್ತಕ/Bank Passbook
  • ಫೋಟೊ/Photocopy

Where To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ತಾಯಿ ಲಕ್ಷ್ಮೀ ಬಾಂಡ್ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಹರಿರುವ ಮಹಿಳಾ ಅಭ್ಯರ್ಥಿಗಳು ನಿಮ್ಮ ಹತ್ತಿರದ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಗೆ ಅಥವಾ ಸೇವಾ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಅಥವಾ

ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!

Website Link: ಕಾರ್ಮಿಕ ಮಂಡಳಿಯ ಅಧಿಕೃತ ವೆಬ್ಸೈಟ್ ಲಿಂಕ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: