Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!

February 19, 2026 | Siddesh
Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!
Share Now:

ಸ್ವಯಂ ಉದ್ಯೋಗದ ಕನಸು ಕಾಣುತ್ತಿರುವ ವಿವಿಧ ಸಮುದಾಯದ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯದ ವಿವಿಧ ಅಭಿವೃದ್ಧಿ ನಿಗಮದ ವತಿಯಿಂದ 'ಆಹಾರ ವಾಹಿನಿ' (ಆಹಾರ ಕಿಯೋಸ್ಕ್) ಯೋಜನೆಯಡಿ(Mobile Canteen Subsidy) ಸಂಚಾರಿ ಉಪಹಾರ ವಾಹನವನ್ನು ಆರಂಭಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಧುನಿಕ ಯುಗಕ್ಕೆ ತಕ್ಕಂತೆ ಪರಿಸರ ಸ್ನೇಹಿ ಇವಿ-ಗೂಡ್ಸ್ (ಎಲೆಕ್ಟ್ರಿಕ್) ವಾಹನಗಳನ್ನು ಆಹಾರ ಮಾರಾಟ ಮಳಿಗೆಗಳನ್ನಾಗಿ(Mobile Canteen Subsidy Application) ನವೀಕರಿಸಿ ವಿತರಿಸುವುದು ಈ ಯೋಜನೆಯ ವಿಶೇಷ. ಈ ವಾಹನಗಳ ಖರೀದಿಗೆ ನಿಗಮವು ಬರೋಬ್ಬರಿ 3.00 ಲಕ್ಷ ರೂಪಾಯಿಗಳ ಭಾರಿ ಸಹಾಯಧನ (Subsidy) ನೀಡಲಿದ್ದು, ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸಲು ಹಾದಿ ಸುಗಮವಾಗಿದೆ.

ಇದನ್ನೂ ಓದಿ: SSLC ಮತ್ತು PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ!

ಪ್ರಸ್ತುತ 2025-26ನೇ ಸಾಲಿಗೆ ಅನುದಾನ ಲಭ್ಯತೆ ಆಧಾರದ ಮೇಲೆ ರಾಜ್ಯದ ಕೇಲವು ಆಯ್ದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಸೇವಾ ಸಿಂಧು(Seva Sindhu Portal) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Mobile Canteen Subsidy Yojana-ಏನಿದು ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆ?

ಇದು ಸುಸಜ್ಜಿತ ಸಂಚಾರಿ ಆಹಾರ ಮಳಿಗೆಗಳನ್ನು ಸ್ಥಾಪಿಸಲು ನೆರವು ನೀಡುವ ಯೋಜನೆಯಾಗಿದೆ. ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಆಹಾರ ತಯಾರಿಕೆ ಮತ್ತು ಮಾರಾಟಕ್ಕೆ ಪೂರಕವಾಗಿ ನವೀಕರಿಸಿ ನೀಡಲಾಗುತ್ತದೆ.

ಇದನ್ನೂ ಓದಿ: Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!

Who Can Apply For Mobile Canteen Subsidy Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕಡ್ಡಾಯವಾಗಿ ಆಯಾ ನಿಗಮಕ್ಕೆ ಸಂಬಂಧಪಟ್ಟ ಸಮುದಾಯಕ್ಕೆ ಮತ್ತು ಅದರ ಉಪಜಾತಿಗಳಿಗೆ ಸೇರಿದವರಾಗಿರಬೇಕು.

ಕುಟುಂಬದ ವಾರ್ಷಿಕ ವರಮಾನ ₹3,00,000/- ಗಳ ಮಿತಿಯೊಳಗಿರಬೇಕು.

ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು.

ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದವರು ಮತ್ತು ಅವರ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಇದನ್ನೂ ಓದಿ: Model Question Papers-SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆ ಬಿಡುಗಡೆ! ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

Mobile Canteen Subsidy-ಯಾವೆಲ್ಲ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದೆ?

ಪ್ರಸ್ತುತ ವಿಶ್ವಕರ್ಮ ನಿಗಮ, ಲಿಂಗಾಯತ, ಒಕ್ಕಲಿಗ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಸೇರಿದಂತೆ
ರಾಜ್ಯದಲ್ಲಿರುವ ಬಹುತೇಕ ಎಲ್ಲಾ ನಿಗಮಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತು ಅಧಿಕೃತ ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಮಾರ್ಚ್ 2026

Who To Apply For Mobile Canteen Subsidy-ಎಲ್ಲಿ ಅರ್ಜಿ ಸಲ್ಲಿಸಬಹುದು?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

Required Documents For Mobile Canteen Subsidy-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಹೊಂದಿರಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಹೀಗಿದೆ:

ಆಧಾರ್ ಕಾರ್ಡ್(ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು).

ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಹೆಸರು ಆಧಾರ್‌ನಂತೆಯೇ ಇರಬೇಕು).

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ವಾಹನ ಚಾಲನಾ ಪರವಾನಗಿ ಪತ್ರ.

ಇದನ್ನೂ ಓದಿ: lost property documents-ಆಸ್ತಿ ಪತ್ರ ಕಳೆದುಹೋಗಿದೆಯೇ? ಮರಳಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ!

Online Application For Mobile Canteen-ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ:

ಅರ್ಹ ಅಭ್ಯರ್ಥಿಗಳು ಎಲ್ಲಿಯೂ ಅಲೆಯದೆ ತಮ್ಮ ಮೊಬೈಲ್ ಮೂಲಕವೇ ಸೇವಾ ಸಿಂಧು ಪೋರ್ಟಲ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

Step-1: ಪ್ರಥಮದಲ್ಲಿ ಅರ್ಜಿದಾರರು ಈ ಲಿಂಕ್ ಮೇಲೆ ಒತ್ತಿ "Apply Now" ಸೇವಾ ಸಿಂಧು ಪೋರ್ಟಲ್‌ನ ಮುಖಪುಟವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!

Mobile Canteen Subsidy Application

Step-2: ನಂತರ ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ, "New User" ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ವಿವರಗಳನ್ನು ನೀಡಿ 'ಬಳಕೆದಾರ ಐಡಿ (User ID)' ಮತ್ತು 'ಪಾಸ್‌ವರ್ಡ್' ಸೃಜಿಸಿ ಲಾಗಿನ್ ಆಗಿ.

Step-3: ಲಾಗಿನ್ ಆದ ಬಳಿಕ ಸರ್ಚ್ ಬಾಕ್ಸ್‌ನಲ್ಲಿ "ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆ" ಅಥವಾ ಅಭಿವೃದ್ಧಿ ನಿಗಮದ ಹೆಸರನ್ನು ಟೈಪ್ ಮಾಡಿ ಹುಡುಕಿ. ಆಗ ನಿಗಮದ ಅರ್ಜಿ ನಮೂನೆ ಕಾಣಿಸುತ್ತದೆ.

Step-4: ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು (Scan Copy) ಅಪ್‌ಲೋಡ್ ಮಾಡಿ. ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ ಕೊನೆಯಲ್ಲಿ "Submit" ಬಟನ್ ಒತ್ತಿ ಅರ್ಜಿಯನ್ನು ಪೂರ್ಣಗೊಳಿಸಿ.

ಗಮನಿಸಿ: ಅರ್ಜಿ ಸಬ್ಮಿಟ್ ಮಾಡಿದ ನಂತರ ಬರುವ 'ಅಕ್ನಾಲೆಡ್ಜ್‌ಮೆಂಟ್' (ಸ್ವೀಕೃತಿ ಪತ್ರ) ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ, ಇದು ಮುಂದಿನ ಪ್ರಕ್ರಿಯೆಗೆ ಅತ್ಯಗತ್ಯ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: