Bank adhar link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಪಟ್ಟಿ ಬಿಡುಗಡೆ! ಇಲ್ಲಿದೆ ಚೆಕ್ ಮಾಡಲು ವೆಬ್ಸೈಟ್ ಲಿಂಕ್.

January 23, 2024 | Siddesh

ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಒಟ್ಟು ವಿವರವನ್ನು ಪ್ರಕಟಿಸಲಾಗಿದೆ. ರೈತರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯೇ? ಎಂದು ಖಚಿತಪಡಿಸಿಕೊಳ್ಳಬಹುದು.

ರಾಜ್ಯ ಮತ್ತು ಕೇಂದ್ರ ಸರಕಾರದ ಬಹುತೇಕ ಸಹಾಯಧನ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಅರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಆಧಾರ್ ಲಿಂಕ್ /NPCI mapping ಇರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

ಈ ಕಾರಣದಿಂದಾಗಿ ರೈತರು ಬರ ಪರಿಹಾರ, ಬೆಳೆ ವಿಮೆ, ಕಿಸಾನ್ ಸಮ್ಮಾನ್ ನಿಧಿ, ಪಿಂಚಣಿ ಹಣ, ಇತರೆ ವಿವಿಧ ಇಲಾಖೆಯ ಸಹಾಯಧನ ಯೋಜನೆಯಡಿ ಹಣ ಪಡೆಯಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI mapping ಇರುವುದು ಕಡ್ಡಾಯ ಇಲ್ಲವಾದಲ್ಲಿ ನಿಮಗೆ ಹಣ ಜಮಾ ಅಗುವುದಿಲ್ಲ. ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿದಿಯೇ? ಇಲ್ಲವೇ? ಎಂದು.

ಇದನ್ನೂ ಓದಿ: Crop loan interest- ರೈತರ ಕೃಷಿ ಸಾಲದ 440 ಕೋಟಿ ರೂ ಬಡ್ಡಿ ಮನ್ನಾ! ಬಡ್ಡಿ ಮನ್ನಾಕ್ಕೆ ಯಾರೆಲ್ಲ ಅರ್ಹರು?

Aadhar Not Seeded Report- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಪಟ್ಟಿ ಬಿಡುಗಡೆ:

ಕೃಷಿ ಇಲಾಖೆಯಿಂದ ರಾಜ್ಯದಲ್ಲಿ ಒಟ್ಟು ಎಷ್ಟು ಜನ ರೈತರು ಇನ್ನು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲ ಎನ್ನುವ ವಿವರವನ್ನು PMkisan fruits ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದು ಈ ಕೆಳಗಿನ ವಿಧಾನ ಅನುಸರಿಸಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ, ಹಳ್ಳಿ ಆಯ್ಕೆ ಮಾಡಿಕೊಂಡು ಈ ವಿವರವನ್ನು ಪಡೆಯಬವುದು.

Step-1: ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ aadhar link status ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಇದಾದ ಬಳಿಕ ಈ ಪೇಜ್ ನಲ್ಲಿ ಜಿಲ್ಲಾವಾರು ಒಟ್ಟು ಎಷ್ಟು ಜನ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲ ಎನ್ನುವ ಅಂಕಿ-ಸಂಖ್ಯೆ ವಿವರ ತೋರಿಸುತ್ತದೆ.

Step-2: ಬಳಿಕ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಆ ಜಿಲ್ಲೆಯ ತಾಲ್ಲೂಕು ಪಟ್ಟಿ ಕಾಣಿಸುತ್ತದೆ ಇದೇ ರೀತಿ ನಿಮ್ಮ ತಾಲ್ಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿದಾರ ಹೋಬಳಿಯ ವಿವರ ಮತ್ತು ಹೋಬಳಿಯ ಮೇಲೆ ಕ್ಲಿಕ್ ಮಾಡಿದರೆ ಆ ಹೋಬಳಿಯಲ್ಲಿರುವ ಒಟ್ಟು ಹಳ್ಳಿಯ ವಿವರ ತೋರಿಸುತ್ತದೆ.

ಇದನ್ನೂ ಓದಿ: Parihara amount-2024: 30 ಲಕ್ಷ ರೈತರಿಗೆ ಬರ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಈ ಮಾಹಿತಿಯ ಪ್ರಕಾರ ಇನ್ನು 2 ಲಕ್ಷ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲ ಈ ರೈತರು ಸರಕಾರಿ ಯೋಜನೆಯ ಅರ್ಥಿಕ ನೆರವು ಪಡೆಯಲು ಅಸಾಧ್ಯವಾಗಿದೆ ಅದ ಕಾರಣ ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಿಕೊಂಡು ಲಿಂಕ್ ಅಗದಿದ್ದಲ್ಲಿ ಕೊಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

Bank-Aadhar link status check: ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ರೈತರು ತಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿದಿಯೋ ಅಥವಾ ಇಲ್ಲವೋ? ಎಂದು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT karnayaka app ಸರಕಾರದ ಅಧಿಕೃತ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಫಲಾನುಭವಿಯ ಅಧಾರ್ ಸಂಖ್ಯೆಯನ್ನು ಹಾಕಿ "OTP ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ನಿಮ್ಮ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ನಿಮಗೆ ನೆನಪಿನಲ್ಲಿ ಉಳಿಯು ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಎರಡು ಬಾರಿ ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: January Pension status: ಜನವರಿ-2024ರ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

Step-3: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಅಪ್ಲಿಕೇಶನ್ ನ ಮುಖಪುಟದ ಬಲ ಬದಿಯಲ್ಲಿ "ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ ಸ್ಥಿತಿ/Aadhr-bank link status" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದ್ದರೆ ಇಲ್ಲಿ ಬ್ಯಾಂಕ್ ಅಕೌಂಟ್ ವಿವರ ತೋರಿಸಿ ಕೊನೆಯಲ್ಲಿ Seeding status: "Active" ಎಂದು ತೋರಿಸುತ್ತದೆ.

ಲಿಂಕ್ ಅಗದಿದ್ದಲ್ಲಿ "inactive" ಎಂದು ತೋರಿಸುತ್ತದೆ ಅಗ ನೀವು ಮತ್ತೊಮ್ಮೆ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: