NREGA Yojana Shed: ಜಾನುವಾರು ಶೆಡ್ ನಿರ್ಮಾಣಕ್ಕೆ ರೂ. 57,000 ಸಹಾಯಧನ ಪಡೆಯುವುದು ಹೇಗೆ?

August 18, 2023 | Siddesh

ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ ಸಾಕಾಣಿಕೆ ಮಾಡುತ್ತಿರುವವರಿಗೆ ಸೂಕ್ತ ವ್ಯವಸ್ಥಿತ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಥಿಕವಾಗಿ ನೆರವನ್ನು ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(nrega scheme)ಪಡೆಯಬವುದಾಗಿದೆ.

ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಜಾನುವಾರು ಶೆಡ್’ನ ಸಹಾಯಧನದ ಮೊತ್ತವು ರೂ. 57,000 ರೂ ಅಗಿರುತ್ತದೆ. ಈ ಹಿಂದೆ ಈ ಸಹಾಯಧನದ ಮೊತ್ತ ರೂ. 43,000 ಅಗಿತ್ತು ಕಳೆದ ವರ್ಷ ಇದನ್ನು ಈ ಮೊತ್ತವನ್ನು 57,000 ರೂ  ಏರಿಕೆ ಮಾಡಲಾಗಿದೆ.

ಈ ಆದೇಶದ್ವಯ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ  ಸಾಮಾನ್ಯ ವರ್ಗದವರಿಗೆ ಸಮಾನ ಸಹಾಯಧನ ನೀಡಲಾಗುತ್ತಿದೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಸಹಾಯಧನ ದೊರಕುವಂತೆ ಮಾಡಲಾಗಿದೆ. 

ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದವರು ಹಾಗೂ 4 ಅಥವಾ 4ಕ್ಕಿಂತ ಹೆಚ್ಚು ಜಾನುವಾರು ಸಾಕಿದ ಪ್ರತಿಯೊಬ್ಬರೂ ಜಾನುವಾರು ಶೆಡ್ ನಿರ್ಮಿಸಿಕೊಂಡು ರೂ. 57,000 ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. 

ಅರ್ಜಿ ಎಲ್ಲಿ ಸಲ್ಲಿಸಬೇಕು?

ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳು ಇರುವ ಕುರಿತು ದೃಢೀಕರಣ ಪತ್ರ ಪಡೆದ್ದು. ಈ ದಾಖಲೆಗಳಿರುವ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಈ ಸ್ವೀಕೃತ ಅರ್ಜಿಯನ್ನು ಗ್ರಾಮ ಪಂಚಾಯತಿಯವರು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಮೇಲಧಿಕಾರಿಗಳಿಂದ  ಅನುಮೋದನೆ ಪಡೆದ ನಂತರ ಕಾಮಗಾರಿ ಅನುಷ್ಠಾನಗೊಳ್ಳುತ್ತದೆ.  

ಇದನ್ನೂ ಓದಿ: AAY card: ಅನ್ನಭಾಗ್ಯ ಕಾರ್ಡದಾರರಿಗೆ ಆಹಾರ ಇಲಾಖೆಯಿಂದ ಶಾಕ್! ಈ 6 ನಿಯಮ ಮೀರಿದವರಿಗಿಲ್ಲ ಅನ್ನಭಾಗ್ಯ ಕಾರ್ಡ.

ಶೆಡ್ ಅಳತೆ ಮತ್ತು ಸಹಾಯಧನ?

ನರೇಗಾ ಯೋಜನೆಯಡಿ ನಿರ್ಮಿಸಲಾಗುವ ಜಾನುವಾರು ಶೆಡ್ 10 ಅಡಿ ಅಗಲ, 18 ಅಡಿ ಉದ್ದ ಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಗೋದಲಿ/ಮೇವುತೊಟ್ಟಿ ಒಳಗೊಂಡಿರಬೇಕು. ಜೊತೆಗೆ ಜಾನುವಾರುಗಳಿಗೆ ಗಾಳಿ ಆಡಲು ಜಾಗವಿರುವಂತೆ ಶೆಡ್ ಗೆ ಶೀಟ್ಗಳನ್ನು ಅಳವಡಿಸಬೇಕು. ಜಾನುವಾರು ನಿರ್ಮಾಣಕ್ಕೆ ನರೇಗಾದಡಿ ಫಲಾನುಭವಿಗಳಿಗೆ ಸಿಗುವ ಟ್ಟೂ 57 ಸಾವಿರ ಸಹಾಯಧನದಲ್ಲಿ 10,556 ರೂ. ಕೂಲಿ ಹಾಗೂ 46,444 ರೂ. ಸಾಮಗ್ರಿ ಮೊತ್ತ ದೊರೆಯಲಿದೆ. 

Kuri shed- ಈಗಾಗಲೇ ಈ ಯೋಜನೆಯಡಿ ಸಹಾಯಧನ ಪಡೆದು ಕುರಿ/ದನದ/ಕೋಳಿ ಶೆಡ್ ನಿರ್ಮಾಣ ಮಾಡಿಕೊಂಡಿರುವ ಚಿತ್ರ ಸಹಿತ ಮಾಹಿತಿ:

1) ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಶ್ರೀ. ಪರಸಪ್ಪ ಬಿನ್ ಉದ್ರಿ ಬಂಗಾರಪ್ಪ ರೈತರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ಪಡೆದು ಕುರಿ ಶೆಡ್ ನಿರ್ಮಾಣ ಮಾಡಿಕೊಂಡಿರುವುದು. 

2) ಮೈಸೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹದೇವುರವರು ನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಿಸಿಕೊಂಡಿದ್ದಾರೆ.

3)ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕುಕಿನ ಸೊನ್ನ ಗ್ರಾಮ ಪಂಚಾಯಿತಿಯ ಮಲ್ಲಿಗೆ ಸ್ವಸಹಾಯ ಸಂಘದ ಸದಸ್ಯರು ಸ್ತ್ರೀ ಚೇತನ ಕಾರ್ಯಕ್ರಮದಡಿಯಲ್ಲಿ ಸಮುದಾಯ ಕೋಳಿ ಶೆಡ್  ನಿರ್ಮಿಸಿಕೊಂಡಿರುವುದು.

ಹೆಚ್ಚಿನ ಮಾಹಿತಿಗಾಗಿ:

ನರೇಗಾ ಯೋಜನೆ ಟ್ವಿಟರ್ ಖಾತೆ: https://twitter.com/MgnregsK?s=20

ಸಹಾಯವಾಣಿ: 1800 425 8666

ವೆಬ್ಸೈಟ್: https://nrega.nic.in/MGNREGA_new/Nrega_home.aspx

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: