Online Property Details-ನಿಮ್ಮ ಹಳ್ಳಿಯ ಆಸ್ತಿ ವಿವರ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

January 23, 2026 | Siddesh
Online Property Details-ನಿಮ್ಮ ಹಳ್ಳಿಯ ಆಸ್ತಿ ವಿವರ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!
Share Now:

ಗ್ರಾಮೀಣ ಭಾಗದ ಸಾರ್ವಜನಿಕರು ಮನೆಯಿಂದಲೇ ತಮ್ಮ ಮೊಬೈಲ್ ಮೂಲಕವೇ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ನೂತನ ಇ-ಸ್ವತ್ತು 2.0 ವೆಬ್ಸೈಟ್ ಅನ್ನು ಭೇಟಿ ಮಾಡಿ ಹಳ್ಳಿಯ ಆಸ್ತಿಯ(Village Property Details)ವಿವರ ಸೇರಿದಂತೆ ಇನ್ನಿತರೆ ಅಗತ್ಯ ದಾಖಲೆಗಳನ್ನು ಪಡೆಯಲು ಆನ್ಲೈನ್ ಮೂಲವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದರ ಬಗ್ಗೆ ಅವಶ್ಯವಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಒಂದು ಜಾಗ/ನಿವೇಶನ/ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು(Grama Panchayth Property) ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿಗೆ ಉದಾಹರಣೆಗೆ ಹೇಳುವುದಾದರೆ ಹೊಸ ಮನೆಯನ್ನು ಕಟ್ಟುವ ಯೋಜನೆಯನ್ನು ಹೊಂದಿರುವವರು ಜಾಗದ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ದಾಖಲೆಗಳು ಸರಿಯಾಗಿರಬೇಕಾಗುತ್ತದೆ.

ಇದನ್ನೂ ಓದಿ: Deepika Scholarship 2026-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಆರ್ಥಿಕ ನೆರವು!

ಇಂದಿನ ಅಂಕಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಯ ದಾಖಲೆಯ(Asti Vivara) ವಿವರ ಮತ್ತು ಮಾಲೀಕರ ಪಕ್ಕ ಮಾಹಿತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಹೇಗೆ ಚೆಕ್ ಮಾಡಿಕೊಳ್ಳಬಹುದು ಮತ್ತು ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ನಮೂನೆ 11ಎ ಪಡೆಯಲು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Online Property Details Status Check-ನಿಮ್ಮ ಹಳ್ಳಿಯ ಆಸ್ತಿ ವಿವರ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಯ ಅಧಿಕೃತ ಮಾಲೀಕರ ವಿವರವನ್ನು ಮೊಬೈಲ್ ಮೂಲವೇ ಚೆಕ್ ಮಾಡಿಕೊಳ್ಳಲು ಅಧಿಕೃತ ತಂತ್ರಾಂಶವನ್ನು ಹೊಂದಿದ್ದು ಸಾರ್ವಜನಿಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಹಳ್ಳಿಯಲ್ಲಿನ ಆಸ್ತಿಯ ನೋಂದಣಿ ವಿವರವನ್ನು ಮೊಬೈಲ್ ಮೂಲಕವೇ ತಿಳಿಯಬಹುದಾಗಿದೆ.

Step-1: ಸಾರ್ವಜನಿಕರು ಮೊದಲ ಹಂತದಲ್ಲಿ ಈ "Property Details Status Check" ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಇ-ಸ್ವತ್ತು 2.0 ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Akrama-Sakrama-ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ!

Property Details

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣಿಸುವ "ಪರಿಶೀಲನೆ" ವಿಭಾಗದ ಕೆಳಗಿರುವ "ದಾಖಲೆಗಳನ್ನು ಪರಿಶೀಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಈ ಪೇಜ್ ನಲ್ಲಿ "ಆಸ್ತಿಗಳ ಶೋಧನೆ/Search Your Property" ಬಟನ್ ಮೇಲೆ ಕ್ಲಿಕ್ ಮಾಡಿ Select Property Form ಅಲ್ಲಿ Form-9 ಎಂದು ಆಯ್ಕೆ ಮಾಡಿಕೊಂಡು ಬಳಿಕ ನಿಮ್ಮೆ ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯಿತಿ/ಹಳ್ಳಿ ಹೆಸರನ್ನು ಆಯ್ಕೆ ಮಾಡಿ ಬಳಿಕ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಸರಿಯಾಗಿ ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿರುವ ಎಲ್ಲಾ ಆಸ್ತಿಯ ಮಾಲೀಕರ ಆಸ್ತಿಯ ಇ-ಸ್ವತ್ತು ಸಂಖ್ಯೆ, ಮಾಲೀಕರ ಹೆಸರು, ಆಸ್ತಿಯ ನಂಬರ್ ಮತ್ತು ಆಸ್ತಿ ಹೇಗೆ ಬಂದಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಚೆಕ್ ಮಾಡಬಹುದು.

ಇದನ್ನೂ ಓದಿ: BGM Foundation-ಬಿಜಿಎಂ ಫೌಂಡೇಶನ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ!

E-Swathu Online Application-ಇ-ಖಾತಾ/ಇ-ಸ್ವತ್ತು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಗ್ರಾಮೀಣ ಪ್ರದೇಶದಲ್ಲಿ ಆಸ್ತಿಯನ್ನು ಹೊಂದಿರುವ ನಾಗರಿಕರು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಿ ತಮ್ಮ ಆಸ್ತಿಗೆ ಅಧಿಕೃತ ಇ-ಖಾತಾವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ನೂತನ ಇ-ಸ್ವತ್ತು 2.0 ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದ್ದು ಕೆಳಗಿನ ವಿಧಾನವನ್ನು ಅನುಸರಿಸಿ ನಮೂನೆ-11ಎ ದಾಖಲೆಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Step-1: ಸಾರ್ವಜನಿಕರು ಈ ಲಿಂಕ್ "E-Swathu/E-Khatha Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ಇ-ಸ್ವತ್ತು 2.0 ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ನಂತರ ಇಲ್ಲಿ ಗೋಚರಿಸುವ ನಾಗರಿಕ ಸೇವೆ ವಿಭಾಗದಲ್ಲಿ "ಇ-ಖಾತಾ" ಬಟನ್ ಮೇಲೆ ಕ್ಲಿಕ್ ಮಾಡಿ "ಹೊಸ ಖಾತಾ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಈ ಪೇಜ್ ನಲ್ಲಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ ನಮೂದಿಸಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ ಅರ್ಜಿ ಸಲ್ಲಿಸಲು ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Best Savings Plan-ಸುಕನ್ಯಾ ಸಮೃದ್ಧಿ ಯೋಜನೆ: ₹1.5 ಲಕ್ಷ ಹೂಡಿಕೆಗೆ ₹69 ಲಕ್ಷ ರಿಟರ್ನ್ಸ್!

E-Swathu/E-Khatha Benefits-ಗ್ರಾಮ ಪಂಚಾಯಿತಿ ಇ-ಖಾತಾ/ಇ-ಸ್ವತ್ತು ಪ್ರಯೋಜನಗಳೇನು?

ಗ್ರಾಮ ಪಂಚಾಯಿತಿ ಇ-ಖಾತಾ (ಇ-ಸ್ವತ್ತು) ಗ್ರಾಮೀಣ ಆಸ್ತಿಗಳ ಡಿಜಿಟಲ್ ಮಾಲೀಕತ್ವದ ದಾಖಲೆಯಾಗಿದ್ದು, ಆಸ್ತಿಯ ಪಾರದರ್ಶಕತೆ, ಕಾನೂನುಬದ್ಧ ಮಾನ್ಯತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇದು ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ, ಮಾರಾಟ/ಖರೀದಿ, ಬ್ಯಾಂಕ್ ಸಾಲ ಸೌಲಭ್ಯ, ಮತ್ತು ಗ್ರಾಮ ಪಂಚಾಯತ್ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಮನೆಯಲ್ಲೇ ಕುಳಿತು ದಾಖಲೆ ಪಡೆಯಲು ಸಹಾಯ ಮಾಡುತ್ತದೆ.

E-Swathu/E-Khatha-ಗ್ರಾಮ ಪಂಚಾಯಿತಿ ಇ-ಖಾತಾದ ಪ್ರಮುಖ ಪ್ರಯೋಜನಗಳು:

ಕಾನೂನುಬದ್ಧ ಮಾನ್ಯತೆ ಮತ್ತು ಸುರಕ್ಷತೆ: ಇ-ಖಾತಾಗಳು (ನಮೂನೆ 11A ಮತ್ತು 11B) ಆಸ್ತಿಯ ಕಾನೂನುಬದ್ಧ ದಾಖಲೆಗಳಾಗಿದ್ದು, ವಂಚನೆ ಮತ್ತು ಅನಧಿಕೃತ ನೋಂದಣಿಯನ್ನು ತಡೆಯುತ್ತದೆ.

ಆನ್‌ಲೈನ್ ಸೇವೆಗಳು: ನಾಗರಿಕರು ಪಂಚಾಯತ್ ಕಚೇರಿಗೆ ಪದೇ ಪದೇ ಅಲೆಯದೆ, ಮನೆಯಲ್ಲೇ ಕುಳಿತು ಇ-ಸ್ವತ್ತು 2.0 ಪೋರ್ಟಲ್ ಮೂಲಕ ಇ-ಖಾತಾ ಪಡೆಯಬಹುದು.

ಸುಲಭ ಆಸ್ತಿ ವಹಿವಾಟು: ಆಸ್ತಿ ಖರೀದಿ, ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಗಳು ಸರಳ ಮತ್ತು ವೇಗವಾಗುತ್ತವೆ.

ಬ್ಯಾಂಕ್ ಸಾಲ ಸೌಲಭ್ಯ: ಇ-ಖಾತಾ ಇದ್ದರೆ ಮಾತ್ರ ಬ್ಯಾಂಕ್‌ಗಳಲ್ಲಿ ಆಸ್ತಿಯ ಮೇಲೆ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Prize Money-2025-26ನೇ ಸಾಲಿನ ಮೆಟ್ರಿಕ್ ನಂತರದ ಮತ್ತು SSLC ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

ಏಕರೂಪದ ತೆರಿಗೆ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಏಕರೂಪದ ತೆರಿಗೆ ಮತ್ತು ಶುಲ್ಕಗಳ ನಿಗದಿಗೆ ಅವಕಾಶ ಕಲ್ಪಿಸಲಾಗಿದೆ.

ಪಾರದರ್ಶಕತೆ: ಆಸ್ತಿ ವಿವರಗಳ ಡಿಜಿಟಲೀಕರಣದಿಂದ ಆಸ್ತಿ ದಾಖಲೆಗಳಲ್ಲಿನ ಲೋಪದೋಷಗಳು ಕಡಿಮೆಯಾಗುತ್ತವೆ.

ಈ ವ್ಯವಸ್ಥೆಯು ಕೃಷಿಯೇತರ ಆಸ್ತಿಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ ಮತ್ತು ಗ್ರಾಮೀಣ ಆಸ್ತಿ ಮೌಲ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

E-Swathu Helpline Number-ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಇ-ಸ್ವತ್ತು ಸಹಾಯವಾಣಿ- 9483476000

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: