Parihara Farmers List-ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಬಿಡುಗಡೆ!

October 20, 2025 | Siddesh
Parihara Farmers List-ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಬಿಡುಗಡೆ!
Share Now:

ಕಳೆದ ವರ್ಷ ಅತೀಯಾದ ಮಳೆಯಿಂದ ಬೆಳೆ ಹಾನಿಯಾದ ಅರ್ಹ ರೈತರಿಗೆ ಪರಿಹಾರವನ್ನು ಒದಗಿಸಲಾಗುದ್ದು ಬೆಳೆ ಹಾನಿ ಪರಿಹಾರವನ್ನು ಪಡೆದ ಹಳ್ಳಿವಾರು ರೈತರ ಪಟ್ಟಿಯಲ್ಲಿ ಕಂದಾಯ ಇಲಾಖೆಯ ಅಧಿಕೃತ Paihara.karnataka.gov.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಅತೀಯಾದ ಮಳೆಯಿಂದ ಬೆಳೆ ಹಾನಿಯಾದ(Crop Loss Amount) ರೈತರಿಗೆ ಆರ್ಥಿಕವಾಗಿ ನೆರವನ್ನು ಒದಗಿಸಲು NDRP ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಒದಗಿಸಲಾಗುತ್ತದೆ 2024-25 ನೇ ಸಾಲಿನಲ್ಲಿ ಈ ಯೋಜನೆಯಡಿಯಲ್ಲಿ ಯಾರಿಗೆಲ್ಲ ಪರಿಹಾರದ ಹಣ ಜಮಾ ಮಾಡಲಾಗಿದೆ ಎನ್ನುವ ವಿವರವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: SBI Scholarship Application-ಎಸ್.ಬಿ.ಐ ಫೌಂಡೇಶನ್ ವತಿಯಿಂದ ₹75,000/- ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

ರೈತರು ತಾವು ಇದ್ದಲ್ಲಿಯೇ ಯಾವುದೇ ಸರಕಾರ ಕಚೇರಿಯನ್ನು ಭೇಟಿ ಮಾಡದೇ ತಮ್ಮ ಅಂಡ್ರಾಡ್ ಮೊಬೈಲ್ ನಲ್ಲಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ತಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪರಿಹಾರದ ಹಣ(Parihara Hana)ಜಮಾ ಅಗಿದೆ ಎನ್ನುವ ರೈತರ ಪಟ್ಟಿಯನ್ನು ಪಡೆದು ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎನ್ನುವ ಮಾಹಿತಿಯನ್ನು ಚೆಕ್ ಮಾಡಲು ಕಂದಾಯ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದ್ದು ಇದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Parihara Farmers List-ಬೆಳೆ ಪರಿಹಾರ ಪಡೆದ ರೈತರ ಪಟ್ಟಿ:

2024-25 ನೇ ಸಾಲಿನಲ್ಲಿ ಅಂದರೆ ಕಳೆದ ವರ್ಷ ಮೂರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾಗಿರುವ ರೈತರಿಗೆ NDRP ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಒದಗಿಸಲಾಗಿದ್ದು ಪರಿಹಾರ ತಂತ್ರಾಶದಲ್ಲಿ ಹಳ್ಳಿವಾರು ಪರಿಹಾರದ ಆರ್ಥಿಕ ನೆರವನ್ನು ಒದಗಿಸಿರುವ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಹಳ್ಳಿಯ ಪಟ್ಟಿಯನ್ನು ಪಡೆಯಬಹುದು.

Step-1: ರೈತರು ಇಲ್ಲಿ ಕ್ಲಿಕ್ "Parihara Farmers List" ಮಾಡಿ ಪ್ರಥಮ ಹಂತದಲ್ಲಿ ಕಂದಾಯ ಇಲಾಕೆಯ Parihara ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

Village Wise Parihara Farmers List

ಇದನ್ನೂ ಓದಿ: Bussiness Loan Subsidy-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ ₹1.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಎಡಬದಿಯಲ್ಲಿ ಕಾಣಿಸುವ "Village Wise List" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಇಲ್ಲಿ ವರ್ಷ:- 2024-25 ,"ಋತು:- ಮುಂಗಾರು",ವಿಪತ್ತಿನ ವಿಧ ಮತ್ತು ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು ಮುಂದೆ ತೋರಿಸುವ "Get Report/ವರದಿ ಪಡೆಯಿರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-4: "Get Report/ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪರಿಹಾರದ ಹಣ ಜಮಾ ಅಗಿದೆ ಎನ್ನುವ ರೈತರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ಎಷ್ಟು ಹಣ ಜಮಾ ಅಗಿದೆ? ಜಮಾ ದಿನಾಂಕ, ಬೆಳೆ ಹೆಸರೌ,ವಿಸ್ತೀರ್ಣ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: Ragi Kharidi Kendra 2025-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ! ಪ್ರತಿ ಕ್ವಿಂಟಾಲ್ ಗೆ 4886/- ರೂ ನಿಗದಿ!

How To Get Bele Parihara-ಬೆಳೆ ಹಾನಿ ಪರಿಹಾರ ಪಡೆಯುವುದು ಹೇಗೆ?

ಅತೀಯಾದ ಮಳೆ ಅಥವಾ ಇನ್ನಿತರೆ ಅಕಾಲಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದ ಸಮಯದಲ್ಲಿ ರೈತರು ಸರಕಾರದ NDRP ಯೋಜನೆಯಡಿ ಪರಿಹಾರವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳ ಸಮೇತ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ/ಕೃಷಿ/ತೋಟಗಾರಿಕೆ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಪರಿಹಾರ ತಂತ್ರಾಂಶದಲ್ಲಿ ನಿಮ್ಮ ಅರ್ಜಿಯನ್ನು ನೋಂದಣಿ ಮಾಡಿಸಬೇಕು.

ಇದನ್ನೂ ಓದಿ: Bele Parihara 2025-ಮಳೆ ಮತ್ತು ಪ್ರವಾಹ ಸಂತ್ರಸ್ತ ರೈತರಿಗೆ ಬೆಳೆ ಹಾನಿ ಪರಿಹಾರ ₹ 31,000ಗೆ ಹೆಚ್ಚಿಸಿದ ರಾಜ್ಯ ಸರಕಾರ!

Parihara Amount Details-ಪ್ರಸ್ತುತ ವರ್ಷದಲ್ಲಿ ಪ್ರತಿ ಎಕರೆಗೆ ಎಷ್ಟು ಪರಿಹಾರವನ್ನು ನಿಗದಿಪಡಿಸಲಾಗಿದೆ?

ರಾಜ್ಯ ಸರಕಾರದಿಂದ 2025-26 ನೇ ಸಾಲಿನಲ್ಲಿ ಹಾನಿಯಾದ ಬೆಳೆಗಳಿಗೆ ಪರಿಹಾರವನ್ನು ಒದಗಿಸಲು ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದ್ದು ಇದರ ವಿವರ ಹೀಗಿದೆ:

1) ಮಳೆಯಾಶ್ರಿತ ಬೆಳೆಗಳಿಗೆ- 17,000 ರೂ.
2) ನೀರಾವರಿ ಬೆಳೆಗಳಿಗೆ- 25,500 ರೂ.
3) ಬಹುವಾರ್ಷಿಕ ಬೆಳೆಗಳಿಗೆ- 31,000 ರೂ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: