PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!

March 13, 2026 | Siddesh
PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!
Share Now:

ಬೆಂಗಳೂರು: ದೇಶದ ಅನ್ನದಾತರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ ಬಹುನಿರೀಕ್ಷಿತ 22ನೇ ಕಂತಿನ ಹಣ(PM Kisan 22nd installment) ಇಂದು ಬಿಡುಗಡೆಯಾಗುತ್ತಿದೆ. ಮಾರ್ಚ್ 13ರ ಈ ದಿನವನ್ನು ದೇಶಾದ್ಯಂತ "ಪಿ.ಎಂ. ಕಿಸಾನ್ ಉತ್ಸವ್ ದಿವಸ್" ಎಂದು ಆಚರಿಸಲಾಗುತ್ತಿದ್ದು, ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಬಟನ್ ಒತ್ತುವ ಮೂಲಕ ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಈ ಕಂತು ದೊಡ್ಡ ಮಟ್ಟದ ಆರ್ಥಿಕ ನೆರವು ತಂದಿದೆ. ರಾಜ್ಯದ ಒಟ್ಟು 41.40 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ(PM Kisan) ಒಟ್ಟಾರೆ 828.02 ಕೋಟಿ ರೂಪಾಯಿಗಳು ನೇರವಾಗಿ ಜಮೆಯಾಗಲಿವೆ. ಕೃಷಿ ಚಟುವಟಿಕೆಗಳ ನಿರ್ವಹಣೆ ಮತ್ತು ಬಿತ್ತನೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಲು ಈ ಹಣವು ರೈತರಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕವಾಗಿ ಸಿಗುವ 6,000 ರೂಪಾಯಿಗಳ ಸಹಾಯಧನದಲ್ಲಿ, ಇದು ಈ ವರ್ಷದ ಪ್ರಮುಖ ಕಂತಾಗಿದೆ.

ಇದನ್ನೂ ಓದಿ: LPG Gas Booking-LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ!

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಫೆಬ್ರವರಿ 1, 2019ಕ್ಕಿಂತ ಮೊದಲು ಭೂದಾಖಲೆ ಹೊಂದಿರುವ ರೈತರು ಅರ್ಹರಾಗಿದ್ದು, ಆಧಾರ್ ಆಧಾರಿತ ಹಣ ವರ್ಗಾವಣೆ (DBT) ಮೂಲಕ ಪಾರದರ್ಶಕವಾಗಿ ಹಣ ತಲುಪಿಸಲಾಗುತ್ತಿದೆ. ಯೋಜನೆಯ ಲಾಭ ಪಡೆಯಲು ಇ-ಕೆವೈಸಿ (e-KYC) ಕಡ್ಡಾಯವಾಗಿದ್ದು, ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ರೈತರಿಗೆ ಮಾತ್ರ ಈ ಕಂತು ತಲುಪಲಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

PM Kisan Karnataka-ನಿಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂದು ತಿಳಿಯುವುದು ಹೇಗೆ?

ಹಲವು ರೈತರಿಗೆ ತಮ್ಮ ಇ-ಕೆವೈಸಿ ಪೂರ್ಣಗೊಂಡಿದೆಯೋ ಇಲ್ಲವೋ ಎಂಬ ಗೊಂದಲವಿರುತ್ತದೆ. ಅದನ್ನು ಈ ಕೆಳಗಿನ ಹಂತಗಳಲ್ಲಿ ಪರಿಶೀಲಿಸಬಹುದು:

Step-1: ಕೃಷಿಕರು ಈ ಲಿಂಕ್ PM Kisan e-KYC Statuts ಮೇಲೆ ಕ್ಲಿಕ್ ಮಾಡಿ ಮೊದಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.

Step-2: ಬಳಿಕ ಈ ಪೇಜ್ ನ ಮುಖಪುಟದಲ್ಲಿರುವ 'Farmer Corner' ವಿಭಾಗಕ್ಕೆ ಹೋಗಿ.

Step-3: ಅಲ್ಲಿ 'Know Your Status' ಅಥವಾ 'e-KYC' ಆಯ್ಕೆಯನ್ನು ಕ್ಲಿಕ್ ಮಾಡಿ.

Step-4: ನಿಮ್ಮ ಆಧಾರ್ ಸಂಖ್ಯೆ ಅಥವಾ ಪಿಎಂ-ಕಿಸಾನ್ ನೋಂದಣಿ ಸಂಖ್ಯೆಯನ್ನು ನಮೂದಿಸಿ.

Step-5: ನಿಮ್ಮ ವಿವರಗಳಲ್ಲಿ 'e-KYC Status' ಮುಂದೆ 'Yes' ಎಂದು ಇದ್ದರೆ ನಿಮ್ಮ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ. ಒಂದು ವೇಳೆ ಇಲ್ಲದಿದ್ದರೆ, ಕೂಡಲೇ ಒಟಿಪಿ ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಅಪ್‌ಡೇಟ್ ಮಾಡಿ ಗೊಂದಗಳಿದ್ದಲ್ಲಿ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಪ್‌ಡೇಟ್ ಮಾಡಿಸಿ.

ಇದನ್ನೂ ಓದಿ: Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

PM Kisan Status Check-ಪಿಎಂ ಕಿಸಾನ್ ಹಣ ಜಮೆ ವಿವರವನ್ನು ಮೊಬೈಲ್‌ನಲ್ಲಿ ತಿಳಿಯುವುದು ಹೇಗೆ?

ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಬ್ಯಾಂಕಿಗೆ ಹೋಗದೆ ಮೊಬೈಲ್‌ನಲ್ಲೇ ಸುಲಭವಾಗಿ ನೋಡಬಹುದು:

ವೆಬ್‌ಸೈಟ್ ಮೂಲಕ: pmkisan.gov.in ಗೆ ಭೇಟಿ ನೀಡಿ, 'Beneficiary Status' ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ಹಾಕಿ 'Get Data' ನೀಡಿದರೆ, ಈವರೆಗಿನ ಎಲ್ಲಾ ಕಂತುಗಳ ವಿವರ ಕಾಣಿಸುತ್ತದೆ.

ಪಿಎಂ-ಕಿಸಾನ್ ಆ್ಯಪ್: ಗೂಗಲ್ ಪ್ಲೇ ಸ್ಟೋರ್‌ನಿಂದ ಅಧಿಕೃತ PM-Kisan Mobile App ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗುವ ಮೂಲಕವೂ ಸ್ಟೇಟಸ್ ಚೆಕ್ ಮಾಡಬಹುದು.

SMS ಮೂಲಕ: ಹಣ ಜಮೆಯಾದ ತಕ್ಷಣ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ನಿಂದ ಎಸ್‌ಎಂಎಸ್ ಬರಲಿದೆ.

ಇದನ್ನೂ ಓದಿ: PM Kisan 22th Installment-ಪಿಎಂ ಕಿಸಾನ್ 22ನೇ ಕಂತಿನ ಹಣ ರೈತರ ಖಾತೆಗೆ!

PM-Kisan Status

PM Kisan 22nd Installment Date-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ:

ಗೌರವಾನ್ವಿತ ಪ್ರಧಾನ ಮಂತ್ರಿಗಳು ಮಾರ್ಚ್ 13 ರಂದು ಸಂಜೆ 5.00 ಗಂಟೆಗೆ ಅಸ್ಸಾಂ ರಾಜ್ಯದ ಗುವಾಹಟಿಯ ಖಾನಾಪುರದಲ್ಲಿರುವ ಜ್ಯೋತಿ-ಬಿಮ್ಮು ಅಂತರರಾಷ್ಟ್ರೀಯ ಸಾಂಸ್ಕøತಿಕ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ. ಈ ದಿನವನ್ನು ದೇಶಾದ್ಯಂತ "ಪಿ.ಎಂ. ಕಿಸಾನ್ ಉತ್ಸವ್ ದಿವಸ್" ಎಂದು ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಸಾಗುವಳಿ ಭೂಮಿ ಹೊಂದಿರುವ ಮತ್ತು 01.02.2019 ರ ಒಳಗೆ ಭೂದಾಖಲೆಯಲ್ಲಿ ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಅರ್ಹ ರೈತ ಕುಟುಂಬಕ್ಕೆ ಕೃಷಿ ಚಟುವಟಿಕೆಗಳ ನಿರ್ವಹಣೆಗಾಗಿ ವಾರ್ಷಿಕವಾಗಿ ಒಟ್ಟು ರೂ. 6,000/- ಗಳ ನೆರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ರೂ. 2,000/- ಗಳಂತೆ ಮೂರು ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಇದನ್ನೂ ಓದಿ: Bele Vime Amount-2026: ಈ ಜಿಲ್ಲೆಯ ರೈತರ ಖಾತೆಗೆ 243.5 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆ!

ಪ್ರಸಕ್ತ 22ನೇ ಕಂತಿನಲ್ಲಿ ಕರ್ನಾಟಕ ರಾಜ್ಯದ ಒಟ್ಟು 41,40,106 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಒಟ್ಟಾರೆ ರೂ. 828.02 ಕೋಟಿಗಳ ಆರ್ಥಿಕ ನೆರವು ನೇರ ನಗದು ವರ್ಗಾವಣೆ ಮೂಲಕ ತಲುಪಲಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸಲು ಮತ್ತು ಉತ್ತಮ ಕೃಷಿ ಪರಿಕರಗಳನ್ನು ಬಳಸಲು ಈ ಧನಸಹಾಯವು ಸಹಕಾರಿಯಾಗಲಿದೆ.

ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‍ಸೈಟ್ pmkisan.gov.in ಗೆ ಭೇಟಿ ನೀಡಬಹುದು ಎಂದು ಕೃಷಿ ಇಲಾಖೆಯ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಅಪರ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: