Podi Nakshe-ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ! ಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್!

March 18, 2026 | Siddesh
Podi Nakshe-ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ! ಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್!
Share Now:

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಂದು ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ರೈತ ಬಾಂಧವರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರೈತರು ತಮ್ಮ ಜಮೀನಿನ ದಾಖಲೆಗಳಿಗಾಗಿ, ಅದರಲ್ಲೂ ಮುಖ್ಯವಾಗಿ 'ಪೋಡಿ ನಕ್ಷೆ/Podi Nakshe' ಪಡೆಯಲು ಸರ್ಕಾರಿ ಕಚೇರಿಗಳಿಗೆ, ನಾಡ ಕಚೇರಿಗಳಿಗೆ ಅಥವಾ ಕಂದಾಯ ಇಲಾಖೆಯ ಮೆಟ್ಟಿಲೇರಿ ದಿನಗಟ್ಟಲೆ ಕಾಯುವ ಕಾಲ ಈಗ ಮುಗಿದಿದೆ. ರೈತರು ತಮ್ಮ ಕೈಯಲ್ಲೇ ಇರುವ ಸ್ಮಾರ್ಟ್‌ಫೋನ್ ಬಳಸಿ ಅತ್ಯಂತ ಸರಳವಾಗಿ ತಮ್ಮ ಜಮೀನಿನ ಪೋಡಿ ನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಕೃಷಿ ಕಾಯಕದಲ್ಲಿ ತೊಡಗಿರುವ ರೈತರಿಗೆ ಜಮೀನಿನ ದಾಖಲೆಗಳು ಅತ್ಯಗತ್ಯ. ಆದರೆ ಈ ದಾಖಲೆಗಳನ್ನು(Podi Nakshe Download) ಪಡೆಯುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಅರಿತ ರಾಜ್ಯ ಸರ್ಕಾರವು 'ಭೂಮಿ' ಮತ್ತು 'ಮೋಜಿನಿ' ಆ್ಯಪ್ ಹಾಗೂ ಪೋರ್ಟಲ್‌ಗಳ ಮೂಲಕ ಕಂದಾಯ ದಾಖಲೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಿದೆ. ಈ ಡಿಜಿಟಲ್ ಕ್ರಾಂತಿಯಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪುವುದಲ್ಲದೆ, ರೈತರ ಅಮೂಲ್ಯ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಪಾರದರ್ಶಕ ಆಡಳಿತಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಇದನ್ನೂ ಓದಿ: Akka Cafe Subsidy-ಅಕ್ಕ ಕೆಫೆ ಆರಂಭಿಸಲು 15 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಸುವುದು ಹೇಗೆ?

ಜಮೀನಿನ ವಿಭಜನೆ ಅಥವಾ ಪೋಡಿ ನಕ್ಷೆ ಇಲ್ಲದೆ ಹೋದರೆ ರೈತರು ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಬ್ಯಾಂಕ್ ಸಾಲ ಪಡೆಯಲು ಅಥವಾ ಬೆಳೆ ವಿಮೆ ಹಕ್ಕು ಮಂಡಿಸಲು ಈ ನಕ್ಷೆ ಅನಿವಾರ್ಯ. ಈಗ ಸರ್ಕಾರವು ಒದಗಿಸಿರುವ ಆನ್‌ಲೈನ್ ಲಿಂಕ್(Podi Nakshe Download Link) ಮೂಲಕ ರೈತರು ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಿ, ನಕ್ಷೆಯನ್ನು ಪಿಡಿಎಫ್ ರೂಪದಲ್ಲಿ ಪಡೆಯಬಹುದು. ಈ ಲೇಖನದಲ್ಲಿ ಪೋಡಿ ಎಂದರೇನು, ಅದರ ವಿಧಗಳು ಮತ್ತು ಆನ್‌ಲೈನ್‌ನಲ್ಲಿ ಪಡೆಯುವ ಹಂತ ಹಂತದ ಮಾಹಿತಿ ಇಲ್ಲಿದೆ.

What Is Podi-ಜಮೀನಿನ ಪೋಡಿ ಎಂದರೇನು?

ಸಾಮಾನ್ಯವಾಗಿ ಒಂದು ಸರ್ವೆ ನಂಬರಿನ ಜಮೀನಿನಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿರುತ್ತಾರೆ. ಪಾಲುದಾರರಿಬ್ಬರ ನಡುವೆ ಜಮೀನನ್ನು ಹಂಚಿಕೊಂಡಾಗ, ಪ್ರತಿಯೊಬ್ಬರಿಗೂ ಅವರ ಪಾಲಿನ ಜಮೀನನ್ನು ಗುರುತಿಸಿ ಬೇರ್ಪಡಿಸಬೇಕು ಹೀಗೆ ಒಂದು ಸರ್ವೆ ನಂಬರನ್ನು ವಿಭಾಗವನ್ನು ಮಾಡಿ, ಪ್ರತಿಯೊಬ್ಬ ಮಾಲೀಕರಿಗೂ ಪ್ರತ್ಯೇಕ 'ಹಿಸ್ಸಾ' ಸಂಖ್ಯೆ ಮತ್ತು ಪ್ರತ್ಯೇಕ ಪಹಣಿ (RTC) ನೀಡಲಾಗುತ್ತದೆ ಇದನ್ನೇ 'ಪೋಡಿ' ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Grama One Franchise-ಗ್ರಾಮ ಒನ್ ಫ್ರಾಂಚೈಸಿ ಪಡೆಯಲು ಸುವರ್ಣಾವಕಾಶ: ಇಂದೇ ಅರ್ಜಿ ಸಲ್ಲಿಸಿ!

Podi Benefits-ಪೋಡಿ ಏಕೆ ಅಗತ್ಯ? ಇದರ ಪ್ರಯೋಜನಗಳೇನು?

ಅವಿಭಕ್ತ ಕುಟುಂಬಗಳಲ್ಲಿ ಜಮೀನನ್ನು ವಿಭಾಗ ಮಾಡಿಕೊಳ್ಳದ ದಾಖಲೆಗಳು ಜಂಟಿಯಾಗಿಯೇ ಉಳಿದಿರುತ್ತವೆ. ಇಂತಹ ಸಂದರ್ಭದಲ್ಲಿ ಪೋಡಿ ಮಾಡಿಸದಿದ್ದರೆ ಪೋಡಿಗೆ ಸಂಬಂದಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬ್ಯಾಂಕ್ ಸಾಲ: ಜಮೀನಿನ ಮೇಲೆ ಸಾಲ ಪಡೆಯಬೇಕಾದರೆ ಪಹಣಿ ಮತ್ತು ನಕ್ಷೆ ಅತ್ಯಗತ್ಯವಾಗಿರುತ್ತದೆ. ಜಂಟಿ ಖಾತೆ ಇದ್ದರೆ ಬ್ಯಾಂಕುಗಳು ಸಾಲ ನೀಡಲು ಹಿಂದೆ ಸರಿಯುತ್ತವೆ.

ಸರ್ಕಾರಿ ಯೋಜನೆಗಳು: ಬೆಳೆ ಹಾನಿ ಪರಿಹಾರ ಹಾಗೂ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳು ಅಥವಾ ಬೆಳೆ ವಿಮೆಯ ಹಣ ಪಡೆಯಲು ಪ್ರತ್ಯೇಕ ದಾಖಲೆಗಳು ಕಡ್ಡಾಯವಾಗಿರುತ್ತದೆ.

ಜಮೀನು ಮಾರಾಟ: ಪೋಡಿ ನಕ್ಷೆ ಇಲ್ಲದೆ ಜಮೀನನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಅಥವಾ ಹೊಸದಾಗಿ ಖರೀದಿ ಮಾಡಲು ಸಾಧ್ಯವಿರುವುದಿಲ್ಲ.

ವ್ಯಾಜ್ಯಗಳ ಪರಿಹಾರ: ಸಹೋದರರ ನಡುವಿನ ಆಸ್ತಿ ಹಕ್ಕು ಅಥವಾ ಗಡಿ ವಿವಾದಗಳಿಗೆ ಪೋಡಿ ನಕ್ಷೆಯೇ ಕೊನೆಯ ಆಧಾರವಾಗಿರುತ್ತದೆ.

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

Podi Types-ಪೋಡಿಯಲ್ಲಿ ಬರುವ ವಿಭಾಗಗಳು:

ತತ್ಕಾಲ್ ಪೋಡಿ: ತುರ್ತಾಗಿ ಜಮೀನು ವಿಭಜನೆ ಮಾಡಬೇಕಾದಲ್ಲಿ ತತ್ಕಾಲ್ ಪೋಡಿ ಅವಶ್ಯವಾಗಿರುತ್ತದೆ.

ದರಖಾಸ್ತು ಪೋಡಿ: ಸರ್ಕಾರ ಮಂಜೂರು ಮಾಡಿದ ಜಮೀನುಗಳಿಗೆ ಸಂಬಂಧಿಸಿದ ಹಕ್ಕು ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯವಾಗಿರುತ್ತದೆ.

ಆಲಿನೇಶನ್ ಪೋಡಿ: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ (NA) ಬಳಸುವಾಗ ಮಾಡಿಸುವ ಭೂಮಿಯ ಬಳಕೆ ಬದಲಾವಣೆಗೆ ಸಂಬಂಧಿಸಿದ ಅಳತೆ ಮತ್ತು ದಾಖಲೆ ತಿದ್ದುಪಡಿ ಪ್ರಕ್ರಿಯೆಯನ್ನು ಮಾಡಲು ಬಳಸಲಾಗುತ್ತದೆ.

ಮುಟೇಶನ್ ಪೋಡಿ: ಮಾಲೀಕತ್ವ ಬದಲಾವಣೆಯ ಸಂದರ್ಭದಲ್ಲಿ ಮಾಡುವ ಪ್ರಕ್ರಿಯೆ.

ಇದನ್ನೂ ಓದಿ: Pearl farming-ಸಿಹಿ ನೀರು ಮುತ್ತು ಕೃಷಿ ತರಬೇತಿ: ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ!

Podi Nakshe On Mobile-ಮೊಬೈಲ್‌ನಲ್ಲಿ ಪೋಡಿ ನಕ್ಷೆ ಡೌನ್‌ಲೋಡ್ ಮಾಡುವುದು ಹೇಗೆ?

ಈಗ ರೈತರು ತಮ್ಮ ಮೊಬೈಲ್ ಮೂಲಕವೇ ಕೆಳಗಿನ ಹಂತಗಳನ್ನು ಅನುಸರಿಸಿ ಪೋಡಿ ನಕ್ಷೆ ಪಡೆಯಬಹುದು:

Step-1: ಮೊದಲು ನಿಮ್ಮ ಮೊಬೈಲ್‌ನಲ್ಲಿ ಬ್ರೌಸರ್ ತೆರೆದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Podi Nakshe Download ಈ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ.

ಇದನ್ನೂ ಓದಿ: Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

Step-2: ಲಿಂಕ್ ತೆರೆದಾಗ 'ಮೋಜಿನಿ ಆನ್‌ಲೈನ್' (Mojini Online) ಪೇಜ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಅಲ್ಲಿ ನೀಡಿರುವ ಕ್ಯಾಪ್ಚಾ ಕೋಡ್ ನಮೂದಿಸಿ.

Step-3: 'Send OTP' ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲಿಗೆ ಬರುವ ಓಟಿಪಿ ಸಂಖ್ಯೆಯನ್ನು ಹಾಕಿ 'Login' ಬಟನ್ ಒತ್ತಿರಿ.

Step-4: ಲಾಗಿನ್ ಆದ ನಂತರ ಅಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವಿಡಿಯೋ ಮತ್ತು ಬಳಕೆದಾರರ ಮಾರ್ಗದರ್ಶಿ (User Manual) ಇರುತ್ತದೆ. ಹೊಸಬರು ಇದನ್ನು ಗಮನಿಸಬಹುದು.

Step-5: 'ಹೊಸ ಅರ್ಜಿ' (New Application) ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ಸೇರಿದಂತೆ ಕೇಳಲಾದ ಎಲ್ಲಾ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.

Step-6: ಮಾಹಿತಿ ಭರ್ತಿ ಮಾಡಿದ ನಂತರ ಪ್ರಕ್ರಿಯೆ ಪೂರ್ಣಗೊಳಿಸಿ. ಆಗ ನಿಮ್ಮ ಜಮೀನಿನ ಪೋಡಿ ನಕ್ಷೆಯು PDF ರೂಪದಲ್ಲಿ ಲಭ್ಯವಾಗುತ್ತದೆ. ಇದನ್ನು ನೀವು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.

Step-7: ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ಸಹ ಇದೇ ಪೋರ್ಟಲ್‌ನಲ್ಲಿ ಕಾಲಕಾಲಕ್ಕೆ ಪರಿಶೀಲಿಸಬಹುದು

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: