Property Registration-ಆಸ್ತಿ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ!

March 5, 2025 | Siddesh
Property Registration-ಆಸ್ತಿ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ!
Share Now:

ಕರ್ನಾಟಕ ರಾಜ್ಯ ಸರಕಾರದಿಂದ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿ(Property Registration) ಮಾಡಿಕೊಳ್ಳುವ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಲ್ಲಿ ಒಂದಿಷ್ಟು ಜನಸ್ನೇಹಿ ಬದಲಾವಣೆಗಳನ್ನು ಮಾಡಲಾಗಿದ್ದು ಇದರ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ(Registration Department) ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿನ ಆಸ್ತಿ ನೋಂದಣಿಯ ಅರ್ಜಿ ವಿಲೇವಾರಿಯನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದ್ದು, ಈ ಇಲಾಖೆಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ತಿ ನೋಂದಣಿಯಲ್ಲಿ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಈ ಲೇಖನದಲ್ಲಿ ನೋಂದಣಿಯಲ್ಲಿನ(Land Registration) ಪ್ರಮುಖ ಬದಲಾವಣೆ ಯಾವುವು? ಆಸ್ತಿ ನೋಂದಣಿ ಕುರಿತು ಚಾಲ್ತಿಯಲ್ಲಿರುವ ನಿಯಮಗಳ ವಿವರ, ಆಸ್ತಿ ನೋಂದಣಿಗೆ ಅವಶ್ಯಕ ದಾಖಲೆಗಳು ಯಾವುವು?ಮತ್ತು ಸರಕಾರದಿಂದ ಆಸ್ತಿ ನೋಂದಣಿಗೆ ನಿಗದಿಪಡಿಸಿರುವ ಶುಲ್ಕ ವಿವರ ಸೇರಿದಂತೆ ಎಲ್ಲಾ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: LPG Cylinder Price-ಈ ತಿಂಗಳಿನಿಂದ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಏರಿಕೆ!

Property Registration Rules- ನೋಂದಣಿಯಲ್ಲಿನ ಪ್ರಮುಖ ಬದಲಾವಣೆ ಹೀಗಿದೆ:

ಈ ವರ್ಷದಿಂದ ಅಂದರೆ 2025ರಿಂದ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳುವ ಸಮಯದಲ್ಲಿ ಸರಕಾರಿ ಕಛೇರಿಗಳ ಅಲೆದಾಟವನ್ನು ತಗ್ಗಿಸಲು ಖರೀದಿದಾರರು ಮತ್ತು ಮಾರಾಟಗಾರರು ಅಗತ್ಯ ದಾಖಲೆಗಳನ್ನು ಒದಗಿಸಿ ಆನ್ಲೈನ್ ಮೂಲಕವೇ ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಆಸ್ತಿ ನೋಂದಣಿ ಕುರಿತು ಚಾಲ್ತಿಯಲ್ಲಿರುವ ನಿಯಮಗಳು:

ಸಾರ್ವಜನಿಕರು ಒಮ್ಮೆ ಖಾಲಿ ಜಾಗ ಅಥವಾ ಮನೆಯನ್ನು ಮಾರಾಟಗಾರರಿಂದ ಖರೀದಿ ಮಾಡಿದ ಬಳಿಕ ಆ ಆಸ್ತಿಯನ್ನು ಅಧಿಕೃತವಾಗಿ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಇದಕ್ಕಾಗಿ ಸರಕಾರದಿಂದ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Trade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!

ಆಧಾರ್ ಕಾರ್ಡ ಆಧಾರಿತ ಒಟಿಪಿ ಸಲ್ಲಿಸಬೇಕು:

ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳುವ ಸಮಯದಲ್ಲಿ ಆನ್ಲೈನ್ ಮೂಲಕ ಅಧಿಕೃತ ನೋಂದಣಿ ಇಲಾಖೆಯ ತಂತ್ರಾಂಶದಲ್ಲಿ ಅರ್ಜಿಯನ್ನು ಹಾಕುವಾಗ ಆಧಾರ್ ಕಾರ್ಡ ಆಧಾರಿತ ಒಟಿಪಿ ದೃಡೀಕರಣ ಕಡ್ಡಾಯವಾಗಿ ಮಾಡಬೇಕಾಗುತ್ತದೆ.

ಕಾಗದ ಪತ್ರಕ್ಕೆ ಬ್ರೇಕ್:

ಆಸ್ತಿ ನೋಂದಣಿಯು ಪ್ರಕ್ರಿಯೆಯು ಡಿಜಿಟಲ್ ಮಾದರಿಯಲ್ಲಿ ಇರಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಡಿಜಿಟಲ್ ಸಹಿಯನ್ನು ಹಾಕುವುದರ ಮೂಲಕ ಅರ್ಜಿ ವಿಲೇವಾರಿಯನ್ನು ಮಾಡುತ್ತಾರೆ.

ಇದನ್ನೂ ಓದಿ: Property Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!

asti nondavani

ಆಸ್ತಿ ನೋಂದಣಿ ಸಮಯದಲ್ಲಿ ವೀಡಿಯೋ ಚಿತ್ರೀಕರಣ:

ಆಸ್ತಿ ನೋಂದಣಿಯಲ್ಲಿ ಯಾವುದೇ ಬಗ್ಗೆಯ ವಿವಾದಗಳು ಇದ್ದಲ್ಲಿ ಇಂತಹ ಪ್ರಕರಣಗಳಲ್ಲಿ ನೋಂದಣಿ ಸಮಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ.ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಗೊಂದಲಗಳಿಗೆ ಪರಿಹಾರ ಒದಗಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Required Documents For Property Registration-ಆಸ್ತಿ ನೋಂದಣಿಗೆ ಅವಶ್ಯಕ ದಾಖಲೆಗಳು:

1) ಖರೀದಿ ಮತ್ತು ಮಾರಾಟ ಒಪ್ಪಂದ/Sale Deed
2) ಆಧಾರ್ ಕಾರ್ಡ/Adhar Card
3) ಪಾನ್ ಕಾರ್ಡ/Pan Card
4) ಪೋಟೋ/photo
5) ಮ್ಯುಟೇಶನ್ ಪ್ರತಿ/Mutation Certificate
6) ಪವರ್ ಆಪ್ ಆಟೋನಿ/Power of Attorney
7) ಆಕ್ಷೇಪಣೆ ಇಲ್ಲದಿರುವ ಕುರಿತು ಪ್ರಮಾಣ ಪತ್ರ/No Objection Certificate (NOC)
8) Property Encumbrance Certificate (EC)
9) ಆಸ್ತಿ ತೆರಿಗೆ ರಶೀದಿ/Tax paid receipt

ಇದನ್ನೂ ಓದಿ: Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು "ಭೂ ಸುರಕ್ಷಾ" ಯೋಜನೆ!

Land Registration Fee-ಆಸ್ತಿ ನೋಂದಣಿಗೆ ನಿಗದಿಪಡಿಸಿರುವ ಶುಲ್ಕ:

ಪ್ರಸ್ತುತ ನಿಯಮದ ಪ್ರಕಾರ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳಲು ಸ್ಟಾಂಪ್ ಮತ್ತು ನೋಂದಣಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕಾಗಿರುತ್ತದೆ.

ಶುಲ್ಕದ ವಿವರ ಹೀಗಿದೆ ₹20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗೆ 2% ಶುಲ್ಕವನ್ನು ₹21-45 ಲಕ್ಷ ಮೌಲ್ಯದ ಆಸ್ತಿಗೆ 3% ಹಾಗೂ ₹5 ಕೋಟಿ ಗಿಂತ ಹೆಚ್ಚಿನ ಆಸ್ತಿಗೆ 5% ನೋಂದಣಿ ಶುಲ್ಕವನ್ನು ಪಾವತಿ ಮಾಡಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: