Ragi Kharidi Kendra 2025-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ! ಪ್ರತಿ ಕ್ವಿಂಟಾಲ್ ಗೆ 4886/- ರೂ ನಿಗದಿ!

October 18, 2025 | Siddesh
Ragi Kharidi Kendra 2025-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ! ಪ್ರತಿ ಕ್ವಿಂಟಾಲ್ ಗೆ 4886/- ರೂ ನಿಗದಿ!
Share Now:

2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ರಾಗಿ ಉತ್ಪನ್ನವನ್ನು ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆ(MSP) ಅಡಿಯಲ್ಲಿ ಖರೀದಿ ಮಾಡಲು ರೈತರ ನೋಂದಣಿಯನ್ನು ಪ್ರಾರಂಭಿಸಲಾಗಿದೆ.

ಪ್ರತಿ ವರ್ಷದಂತೆ ರೈತರಿಗೆ ಉತ್ತಮ ದರವನ್ನು ಒದಗಿಸಿ ಆಹಾರ ಉತ್ಪನ್ನಗಳನ್ನು(Ragi Kharidi) ಬೆಂಬಲ ಬೆಲೆ ಯೋಜನೆಯಡಿ ಉತ್ತಮ ದರ ನೀಡಿ ಮುಂಚಿತವಾಗಿ ರೈತರ ನೋಂದಣಿಯನ್ನು ಮಾಡಿಕೊಂಡು ರೈತರಿಂದ ನೇರವಾಗಿ ಖರೀದಿ ಮಾಡಲು ಮೊದಲ ಹಂತದಲ್ಲಿ ಆನ್ಲೈನ್ ನಲ್ಲಿ ರೈತ ನೋಂದಣಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Bele Parihara 2025-ಮಳೆ ಮತ್ತು ಪ್ರವಾಹ ಸಂತ್ರಸ್ತ ರೈತರಿಗೆ ಬೆಳೆ ಹಾನಿ ಪರಿಹಾರ ₹ 31,000ಗೆ ಹೆಚ್ಚಿಸಿದ ರಾಜ್ಯ ಸರಕಾರ!

ಪ್ರಸ್ತುತ ಯಾವೆಲ್ಲ ಸ್ಥಳಗಳಲ್ಲಿ ರಾಗಿ ಖರೀದಿಗೆ ನೋಂದಣಿ ಪ್ರಾರಂಭಿಸಲಾಗಿದೆ? ಬೆಂಬಲ ಬೆಲೆ(MSP Yojana) ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಸರಕಾರಕ್ಕೆ ಮಾರಾಟ ಮಾಡಲು ರೈತರು ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು? ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮಾರಾಟ ಮಾಡಲು ನಿಗದಿಪಡಿಸಿರುವ ಮಾರ್ಗಸೂಚಿಗಳೇನು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

Ragi Kharidi Kendra Tumakur-ತುಮಕೂರು ಜಿಲ್ಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ:

ರಾಜ್ಯದಲ್ಲಿ ಮೊದಲ ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಲು ಮುಂಚಿತವಾಗಿ ರೈತರ ನೋಂದಣಿಯನ್ನು ಮಾಡಿಕೊಳ್ಳಲು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ.

ರಾಗಿ ಖರೀದಿಗಾಗಿ ರೈತರು ನೋಂದಣಿ ಮಾಡಿಸುವ ಸ್ಥಳಗಳು: ಎ.ಪಿ.ಎಂ.ಸಿ ಗೋದಾಮು, ಎ.ಪಿ.ಎಂ.ಸಿ ಯಾರ್ಡ್, ಗೌರಿಬಿದನೂರು ರಸ್ತೆ, ಮಧುಗಿರಿ.

ಇದನ್ನೂ ಓದಿ: Gram Sumangal Scheme-ಪ್ರತಿ ತಿಂಗಳು 95 ಪಾವತಿಸಿದರೆ, 14 ಲಕ್ಷ ರೂಪಾಯಿ ಪಡೆಯಿರಿ!

Ragi MSP Price 2025-ಪ್ರತಿ ಕ್ವಿಂಟಾಲ್‌ಗೆ ರೂ 4886/- ನಿಗದಿ:

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡುವ ರಾಗಿ ಪ್ರತಿ ಕ್ವಿಂಟಾಲ್‌ಗೆ ರೂ 4886/- ನಿಗದಿಪಡಿಸಲಾಗಿದೆ.

MSP Scheme Farmer Registration-ನೊಂದಣಿಯಾದ ರೈತರಿಂದ ಮಾತ್ರ ರಾಗಿ ಖರೀದಿ:

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ರಾಗಿ ಉತ್ಪನ್ನವನ್ನು ಮಾರಾಟ ಮಾಡಲು ಮುಂಚಿತವಾಗಿ ಖುದ್ದು ಖರೀದಿ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ನೀಡಿ ನೋಂದಣಿಯನ್ನು ಮಾಡಿಕೊಳ್ಳುವುದನ್ನು ಸಂಬಂಧಪಟ್ಟ ಇಲಾಖೆಯಿಂದ ಕಡ್ಡಾಯ ಮಾಡಲಾಗಿದ್ದು ನೊಂದಣಿಯಾದ ರೈತರಿಂದ ಮಾತ್ರ ರಾಗಿ ಖರೀದಿ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!

Ragi MSP Price 2025

Important Date For Farmer Registration-ರೈತರಿಂದ ರಾಗಿ ಖರೀದಿಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳು:

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರಸ್ತುತ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲು ತುಮಕೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಖರೀದಿ ಕೇಂದ್ರಗಳಲ್ಲಿ ನೋಂದಣಿಯನ್ನು ಆರಂಭಿಸಲಾಗಿದ್ದು ಇದಕ್ಕಾಗಿ ನಿಗದಿಪಡಿಸಿದ ಪ್ರಮುಖ ದಿನಾಂಕಗಳ ವಿವರ ಹೀಗಿದೆ:

1) ರಾಗಿ ಖರೀದಿಗೆ ನೋಂದಣಿ- 01 ಅಕ್ಟೋಬರ್ 2025 ರಿಂದ ದಿನಾಂಕ: 15 ಡಿಸೆಂಬರ್ 2025 ರವರೆಗೆ
2) ನೋಂದಾಯಿತ ರೈತರಿಂದ ರಾಗಿ ಖರೀದಿ ಅವಧಿ- 01 ಜನವರಿ 2026 ರಿಂದ ಪ್ರಾರಂಭಿಸಿ ದಿನಾಂಕ: 31 ಮಾರ್ಚ್ 2026 ರವರೆಗೆ ಖರೀದಿಸಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: B-Khata to A-Khata-ರಾಜ್ಯ ಸರಕಾರದಿಂದ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ!

Bembala Bele Yojane Guidelines-ರೈತರಿಂದ ರಾಗಿ ಖರೀದಿಗೆ ನಿಗದಿಪಡಿಸಿರುವ ಮಾನದಂಡಗಳು:

ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್‌ಗಳನ್ನು ಮೀರದಂತೆ ಹಾಗೂ FAQ ಮಾನದಂಡಗಳಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ. ಒಂದು ಬಾರಿ ನೊಂದಣಿ ವೇಳೆಯಲ್ಲಿ ಇನ್ನೊಂದು ಬಾರಿ ಖರೀದಿ ವೇಳೆಯಲ್ಲಿ ಹಾಗಾಗಿ ನೊಂದಾಯಿತ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ.

ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗಿರುವ "ಫೂಟ್ಸ್" ಐ.ಡಿ. (FRUITS) ಸಂಖ್ಯೆಯನ್ನು ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳುವುದು. ಫೂಟ್ಸ್ ಐ.ಡಿ. ಇಲ್ಲದ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ ಹಾಗೂ ನೊಂದಾವಣಿ ಸಮಯದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!

Bembala Bele-ಇತರೆ ಜಿಲ್ಲೆಯಲ್ಲಿಯು ನೋಂದಣಿ ಸಾಧ್ಯತೆ:

ಬೆಂಬಲ ಬೆಲೆಯಲ್ಲಿ ಆಹಾರ ಉತ್ಪನ್ನಗಳನ್ನು ಖರೀದಿ ಮಾಡಲು ತುಮಕೂರು ಮಾದರಿಯಲ್ಲಿ ರೈತರಿಂದ ರಾಗಿ ಇನ್ನಿತರೆ ಆಹಾರ ಉತ್ಪನ್ನಗಳನ್ನು ಖರೀದಿ ಮಾಡಲು ಆಯಾ ಜಿಲ್ಲೆಯ ಬೆಳೆಯ ಕ್ಷೇತ್ರದ ಅನುಗುಣವಾಗಿ ಶೀಘ್ರದಲೇ ನೋಂದಣಿಯನ್ನು ಆರಂಭ ಮಾಡುವ ಸಾಧ್ಯತೆ ಇದೆ.

How To Sell Ragi On MSP Price-ರಾಗಿಯನ್ನು ಮಾರಾಟ ಮಾಡುವುದು ಹೇಗೆ:

ರೈತರು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಸೇರಿದಂತೆ ಇತ್ಯಾದಿ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಥಮ ಹಂತದಲ್ಲಿ ಖರೀದಿ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ವಿವರವನ್ನು ಒದಗಿಸಿ ನೋಂದಣಿಯನ್ನು ಮಾಡಿಕೊಳ್ಳಬೇಕು. ಬಳಿಕ ನಿಗದಿಪಡಿಸಿದ ದಿನಾಂಕದಂದು ರಾಗಿಯನ್ನು ತೆಗೆದುಕೊಂಡು ಹೋಗಿ ರಾಗಿಯನ್ನು ಮಾರಾಟ ಮಾಡಬೇಕು.

ಇದನ್ನೂ ಓದಿ: Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

MSP DBT Amount-ನೇರವಾಗಿ ರೈತರ ಖಾತೆಗೆ ಉತ್ಪನ್ನದ ಹಣ:

ರೈತರು ನೋಂದಣಿಯನ್ನು ಮಾಡಿಕೊಂಡು ಖರೀದಿ ಕೇಂದ್ರದ ಮೂಲಕ ಸರಕಾರಕ್ಕೆ ರಾಗಿಯನ್ನು ಮಾರಾಟ ಮಾಡಿದ ಬಳಿಕ 2-3 ವಾರದ ಒಳಗಾಗಿ ರೈತರಿಗೆ ತಮ್ಮ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ
ಹಣವನ್ನು ಜಮಾ ಮಾಡಲಾಗುತ್ತದೆ.

APMC Helpline-ಹೆಚ್ಚಿನ ಮಾಹಿತಿ ಪಡೆಯಲು ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯವಾಣಿ- 1800 425 1552
APMC Website-ಇಲಾಖೆಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: