Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!

October 14, 2025 | Siddesh
Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾರಿಗೆ ಬಂದು 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಸ್ಪರ್ಧೆಯನ್ನು(Reels Competition In Karnataka)ಆಯೋಜನೆ ಮಾಡಲಾಗಿದ್ದು ಇದಕ್ಕಾಗಿ ನೋಂದಣಿಯನ್ನು ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ(KARNATAKA STATE POLLUTION CONTROL BOARD) ಡಿಜಿಟಲ್ ಮಾಧ್ಯಮದಲ್ಲಿ ಪರಿಣಿತಿಯನ್ನು ಹೊಂದಿರುವ ಯುವಕ/ಯುವತಿಯರಿಂದ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಒಂದು ವಿಶೇಷ ಅಭಿಯಾನವನ್ನು ಆರಂಭಿಸಲಾಗಿದ್ದು ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: Sheep Farming Training-ಆರ್ ಸೆಟ್ ಸಂಸ್ಥೆಯಿಂದ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ!

ಏನಿದು ರೀಲ್ಸ್ ಸ್ಪರ್ಧೆ(Instagram Reels Competition)? ಸಾರ್ವಜನಿಕರು ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ? ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳವ ವಿಧಾನ ಸೇರಿದಂತೆ ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is Reels Competition-ಏನಿದು ರೀಲ್ಸ್ ಸ್ಪರ್ಧೆ?

ಪರಿಸರ ಸಂರಕ್ಷಣೆಯ ಕುರಿತು ಜಾಗೃತಿಯನ್ನು ಮೂಡಿಸುವ ವಿವಿಧ ಬಗ್ಗೆಯ ಕೌಶಲ್ಯಯುಕ್ತ 30-60 ಸೆಕೆಂಡ್ ವಿಡಿಯೋ ವನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ #ParisaraRakshisi ಈ ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಬೇಕು. ಅತೀ ಹೆಚ್ಚು ವಿಕ್ಷಣೆಯಾದ ವಿಡಿಯೋಗೆ ಬಹುಮಾನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

Reels Competition Prize Amount-ರಾಜ್ಯ ಮಟ್ಟದ ಬಹುಮಾನ ವಿವರ ಹೀಗಿದೆ:

ಮೊದಲನೇ ಬಹುಮಾನ- ₹50,000/-
ಎರಡನೇ ಬಹುಮಾನ- ₹25,000/-
ಮೂರನೇ ಬಹುಮಾನ- ₹10,000/-

ಇದನ್ನೂ ಓದಿ: MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?

Reels Competition

ಇದನ್ನೂ ಓದಿ: Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

Prize Amount Duration-ರೀಲ್ಸ್ ಸ್ಪರ್ಧೆ ಅವಧಿ:

10 ಅಕ್ಟೋಬರ್ 2025 ರಿಂದ ಆರಂಭವಾಗಿ 05 ನವೆಂಬರ್ 2025ಕ್ಕೆ ಮುಕ್ತಾಯವಾಗಲಿದೆ.

Reels Competition Registration-ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಮಾಡಿ:

ಸಾರ್ವಜನಿಕರು ರೀಲ್ಸ್ ಸ್ಪರ್ಧೆ ಭಾಗವಹಿಸಲು ಮುಂಚಿತವಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನೋಂದಣಿಯನ್ನು ಮಾಡುವುದು ಕಡ್ಡಾಯವಾಗಿದೆ.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Register Now" ಮಾಡಿ ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Self Employment Loan Scheme-ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯಡಿ ಸಬ್ಸಿಡಿಯಲ್ಲಿ ₹2.0 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Step-2: ಬಳಿಕ ಈ ನೋಂದಣಿ ಅರ್ಜಿಯಲ್ಲಿ ನಿಮ್ಮ ಹೆಸರು,ವಯಸ್ಸು,ಮೊಬೈಲ್ ನಂಬರ್, ವಿಳಾಸ ವಿವರ ಇನ್ನಿತರೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ.

Purpose of the competition-ಸ್ಪರ್ಧೆಯ ಉದ್ದೇಶ:

ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.
ಜನರನ್ನು ಸಣ್ಣ ಸಣ್ಣ ದಿನನಿತ್ಯದ ಬದುಕಿನ ಕೆಲಸಗಳ ಮೂಲಕ ಪರಿಸರ ಕಾಪಾಡಲು ಮತ್ತು ಸಂರಕ್ಷಿಸಲು ಪ್ರೇರೇಪಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: PM Svanidi Yojane 2025-ಪಿಎಂ ಸ್ವನಿಧಿ ಯೋಜನೆ ಎಂದರೇನು? ಎಷ್ಟು ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ!

Reels Competition Guidelines-ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಮುಖ ಮಾರ್ಗಸೂಚಿಗಳು:

  • ಥೀಮ್: 'ಪರಿಸರ ಸಂರಕ್ಷಣೆ" (ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ, ಹಸಿರೀಕರಣ, ಶುದ್ಧ ವಾಯು, ಮರುಬಳಕೆ ಇತ್ಯಾದಿ)
  • ಅವಧಿ: ಗರಿಷ್ಠ 60 ಸೆಕೆಂಡುಗಳು
  • ಸ್ವಂತಿಕೆ: ರೀಲ್ಸ್ ಸಂಪೂರ್ಣವಾಗಿ ನಿಮ್ಮದೇ ಸೃಜನಾತ್ಮಕ ಕಲ್ಪನೆಯಾಗಿರಬೇಕು.
  • ಸಂದೇಶ: ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆಯ ಸಂದೇಶ ನೀಡಬೇಕು.
  • ಫಾರ್ಮ್ಯಾಟ್: ವರ್ಟಿಕಲ್(9.16)
  • ಭಾಷೆ: ಕನ್ನಡ ಅಥವಾ ಇಂಗ್ಲಿಷ್ (ಅಥವಾ ಎರಡೂ ಬಳಸಬಹುದು)
  • ಸಂಗೀತ: ಕಾಪಿರೈಟ್-ಮುಕ್ತ ಸಂಗೀತ ಅಥವಾ ನಿಮ್ಮ ಸ್ವಂತ ಧ್ವನಿಮುದ್ರಣವನ್ನು ಮಾತ್ರ ಬಳಸಿ.
  • ಹ್ಯಾಶ್‌ಟ್ಯಾಗ್: ಕಡ್ಡಾಯವಾಗಿ ಅಧಿಕೃತ ಹ್ಯಾಶ್‌ ಟ್ಯಾಗ್ #ParisaraRakshisi ಅನ್ನು ಕ್ಯಾಪ್ಟನ್‌ನಲ್ಲಿ ಬಳಸಿ.
  • ಕೊಲಾಬರೇಶನ್: ಕಡ್ಡಾಯವಾಗಿ @pm.narendraswamy ಹಾಗೂ @kspcb_official ಇನ್ಸ್ಟಾ ಖಾತೆಗೆ ಕೊಲಾಬರೇಶನ್ ಕಳುಹಿಸಬೇಕು.

KARNATAKA POLLUTION BOARD-ಮಂಡಳಿಯ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: