Samudaya Bhavana Grant-ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಆರ್ಥಿಕ ನೆರವು!

January 29, 2026 | Siddesh
Samudaya Bhavana Grant-ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಆರ್ಥಿಕ ನೆರವು!
Share Now:

ರಾಜ್ಯ ಸರಕಾರದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ವಿವಿಧ ಸಭೆ-ಶುಭ ಕಾರ್ಯಕ್ರಮಗಳನ್ನು ಮಾಡಲು ಅಗತ್ಯವಿರುವ ಸಮುದಾಯ ಭವನವನ್ನು(Samudaya Bhavana Grant Scheme)ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು ಮತ್ತು ಈ ಯೋಜನೆಯ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ರಾಜ್ಯ ಸರ್ಕಾರವು(Samudaya Bhavana Grant Scheme In Karnataka) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಮಟ್ಟಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಬೃಹತ್ ಮೊತ್ತದ ಆರ್ಥಿಕ ನೆರವು ಘೋಷಿಸಲಾಗಿದೆ.

ಇದನ್ನೂ ಓದಿ: Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಈ ಸೌಲಭ್ಯ ದೊರೆಯಲಿದ್ದು, ಸಮುದಾಯದ ಕಾರ್ಯಕ್ರಮಗಳನ್ನು(Samudaya Bhavana) ನಡೆಸಲು ಸುಸಜ್ಜಿತ ಕಟ್ಟಡಗಳ ಕೊರತೆ ನೀಗಿಸಲು. ಸಮಾಜ ಕಲ್ಯಾಣ ಇಲಾಖೆಯಲ್ಲಿನ ಅನುದಾನ ಲಭ್ಯತೆ ಆಧಾರದ ಮೇಲೆ ಈ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ವಿವರ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ವಿಧಾನದ ಕುರಿತಾದ ಸಮಗ್ರ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

Samudaya Bhavana Grant Yojana-ಯೋಜನೆಯ ಉದ್ದೇಶ:

ಮದುವೆ, ಸಭೆ-ಸಮಾರಂಭಗಳಿಗೆ ಖಾಸಗಿ ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ಪಡೆಯುವುದು ಆರ್ಥಿಕವಾಗಿ ಹಿಂದುಳಿದವರಿಗೆ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಈ 'ಸಮುದಾಯ ಭವನಗಳು' ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸಮುದಾಯದ ಬಳಕೆಗೆ ಸಿಗಲಿವೆ.

ಇದನ್ನೂ ಓದಿ:Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Samudaya Bhavana Grant Amount-ಎಷ್ಟು ಅನುದಾನ ಒದಗಿಸಲಾಗುತ್ತದೆ?

ರಾಜ್ಯ ಸರಕಾರದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ವಿವಿಧ ಸಭೆ-ಶುಭ ಕಾರ್ಯಕ್ರಮಗಳನ್ನು ಮಾಡಲು ಅವಶ್ಯವಿರುವ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಈ ಕೆಳಗಿನ ಕೋಷ್ಥಕದಲ್ಲಿ ನಮೂದಿಸಿರುವ ಅನುದಾನವನ್ನು ಪಡೆಯಲು ಅವಕಾಶವಿರುತ್ತದೆ.

ಪ್ರದೇಶದ ಮಟ್ಟಮಂಜೂರಾಗುವ ಅನುದಾನದ ಮೊತ್ತ
ಗ್ರಾಮ ಮಟ್ಟ₹ 20 ಲಕ್ಷ
ಹೋಬಳಿ ಮಟ್ಟ₹ 75 ಲಕ್ಷ
ತಾಲ್ಲೂಕು ಮಟ್ಟ₹ 2 ಕೋಟಿ
ಜಿಲ್ಲಾ ಮಟ್ಟ₹ 4 ಕೋಟಿ

ಇದನ್ನೂ ಓದಿ: Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

ವಿವಿಧ ಮಟ್ಟದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಅರ್ಹರಿರುವ ಪ್ರದೇಶದ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕು ಅಥವಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಕೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ನಿಗದಿತ ನಮೂನೆಯನ್ನು ಸಲ್ಲಿಸಿ.

ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಿ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗದ ಪರೀಶೀಲನೆ ನಡೆಸುತ್ತಾರೆ ಮತ್ತು ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸುತ್ತಾರೆ, ಇದಾದ ಬಳಿಕ ಸರ್ಕಾರದ ಅನುಮೋದನೆ ದೊರೆತ ನಂತರ, ಹಂತ ಹಂತವಾಗಿ (ಕಟ್ಟಡದ ಕಾಮಗಾರಿ ಪ್ರಗತಿಗೆ ಅನುಗುಣವಾಗಿ) ಅನುದಾನವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Marriage Registration-ಇನ್ಮುಂದೆ ಮನೆಯಲ್ಲೇ ಕುಳಿತು ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿ!

Required Documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?

ಸಮಾಜ ಕಲ್ಯಾಣ ಇಲಾಕೆಯ ಅರ್ಥಿಕ ನೆರವಿನೊಂದಿಗೆ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

ಜಾಗದ ಅಧಿಕೃತ ದಾಖಲೆಗಳು: ಭವನ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದ ಪಹಣಿ (RTC), ಕ್ರಯ ಪತ್ರ ಅಥವಾ ಸರ್ಕಾರದಿಂದ ಮಂಜೂರಾದ ಜಾಗದ ದಾಖಲೆಗಳು.

Samudaya Bhavana Grant

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈಗಾಗಲೇ ತಮ್ಮ ಭಾಗದಲ್ಲಿ ಇಲಾಖೆಯಿಂದ ಅನುದಾನವನ್ನು ಪಡೆಯದೇ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಳ್ಳದವರು.

ಇಲಾಖೆಯಿಂದ ನಿಗದಿಪಡಿಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ (SC/ST)ವರ್ಗ ಸೇರಿದ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!

ಕೊನೆಯದಾಗಿ ಒಂದು ಮಾತು:

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬೇಡಿ. ನೇರವಾಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಪಾರದರ್ಶಕವಾಗಿ ಸೌಲಭ್ಯ ಪಡೆಯಿರಿ. ಇದಲ್ಲದೇ ಆಯಾ ವರ್ಗಕ್ಕೆ ಅನುಗುಣವಾಗಿ ವಿವಿಧ ಇಲಾಕೆಯಿಂದ ಇತರೆ ವರ್ಗದ ಸಾರ್ವಜನಿಕರಿಗೂ ಸಹ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಈ ಬಗ್ಗೆ ಮಾಹಿತಿ ತಿಳಿಯಲು ನಿಮ್ಮ ಭಾಗದ ಶಾಸಕರ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ತಿಳಿಯಬಹುದು.

Department Helpline-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಈ ಯೋಜನೆ ಬಗ್ಗೆ ನಿಮಗೆ ಯಾವುದೇ ಗೊಂದಲಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ರಾಜ್ಯ ಸರ್ಕಾರದ 24x7 ಸಹಾಯವಾಣಿ ಸಂಖ್ಯೆ: 94823 00400 ಕ್ಕೆ ಕರೆ ಮಾಡಬಹುದು. ಅಥವಾ ನಿಮ್ಮ ತಾಲ್ಲೂಕು/ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: