Sheep farming- ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ!

March 16, 2025 | Siddesh
Sheep farming- ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ!
Share Now:

ಕೆನರಾ ಬ್ಯಾಂಕ್ ದೇಶಪಾಂಡೆ RSETI ಸಂಸ್ಥೆ ಹಳಿಯಾಳದಲ್ಲಿ 10 ದಿನಗಳ ಉಚಿತವಾಗಿ ಊಟ ವಸತಿಯೊಂದಿಗೆ ಕುರಿ ಸಾಕಾಣಿಕೆ(Sheep farming) ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಕುರಿ ಸಾಕಾಣಿಕೆಯನ್ನು ಮಾಡಿ ಉತ್ತಮ ಆದಾಯವನ್ನು ಗಳಿಸುವುದರ ಮೂಲಕ ಸುಸ್ತಿರ ಕೃಷಿ ಪದ್ದತಿಯನ್ನು ಅಳವಡಿಕೆ ಮಾಡಿಕೊಳ್ಳಲು ಆಸಕ್ತಿಯನ್ನು ಹೊಂದಿರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ತರಬೇತಿಯು 2025 ಏಪ್ರಿಲ್ 07 ರಿಂದ ತ ಪ್ರಾರಂಭವಾಗಲಿದ್ದು, ಆಸಕ್ತಿ ಇರುವವರು ಮೊದಲು ಅರ್ಜಿ ಸಲ್ಲಿಸಿ ಹೆಸರನ್ನು ನೊಂದಾಯಿಸಬೇಕು, ಮೊದಲು ಅರ್ಜಿಯನ್ನು ಸಲ್ಲಿಸಿದವರಿಗೆ ಆದ್ಯತೆ(, kuri sakanike ) ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀವು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ತರಬೇತಿ ಚಟುವಟಿಕೆಗಳಲ್ಲಿ ಹೆಚ್ಚಿನ ಲಾಭ(kuri sakanike loan) ಗಳಿಸಬೇಕೆ? ಯಾವುದಾದರೂ ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂದುಕೊಂಡಿದ್ದೀರಾ? ಹಾಗೇನಾದರೂ ಅಂದುಕೊಳ್ಳುವ ಯುವರೈತರು ನೀವಾಗಿದ್ರೆ ಈ ಸುದ್ದಿ ನಿಮಗಾಗಿ.

ಇದನ್ನೂ ಓದಿ: E-Khatha-ಹಳ್ಳಿಗರಿಗೂ ಸಿಹಿ ಸುದ್ದಿ! ಅನಧಿಕೃತ ಆಸ್ತಿಗಳಿಗೆ ಇ-ಖಾತಾ!

ಇದೀಗ ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಅಡಿಯಲ್ಲಿ ಉಚಿತವಾಗಿ "10 ದಿನಗಳವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ" ತರಬೇತಿಯನ್ನು(kuri sakanike tarabeti) ಹಮ್ಮಿಕೊಂಡಿದೆ ಆಸಕ್ತರು ಈ ತರಬೇತಿಯನ್ನು ಪಡೆದುಕೊಳ್ಳಬಹುದು. ಇಲ್ಲಿ ಉಚಿತ ತರಬೇತಿ ಪಡೆದುಕೊಂಡು ನೀವು ನಿಮ್ಮದೇ ಆದ ಸ್ವಂತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಚಟುವಟಿಕೆ ಪ್ರಾರಂಭಿಸಬಹುದು.

RSETI Haliyal-ತರಬೇತಿ ಸಂಸ್ಥೆಯ ಕುರಿತು ಕಿರು ಪರಿಚಯ:

ಕಳೆದ ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಸ್ವಾವಲಂಬಿ ಜೀವನ ನಡೆಸಲು ದಾರಿದೀಪವಾಗಿದೆ.

ಅತ್ಯುತ್ತಮ ತರಬೇತಿಯ ವ್ಯವಸ್ಥೆಯೊಂದಿಗೆ ಉತ್ತಮ ಕಲಿಕಾ ಪರಿಸರವನ್ನು ಸಂಸ್ಥೆಯು ಹೊಂದಿದ್ದು. ಯುವಕ-ಯುವತಿಯರಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಒಳಗೊಂಡಿದೆ. ಕೃಷಿ, ತಂತ್ರಜ್ನಾನ, ಸೇವೆ, ದುರಸ್ತಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ನಡೆಸುತ್ತಿದ್ದು, ಸಾವಿರಾರು ಯುವಕ-ಯುವತಿಯರು ಸ್ವಾವಲಂಬಿ ಜೀವನ ನಡೆಸಲು ಮಾರ್ಗದರ್ಶಿಯಾಗಿದೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

sheep

sheep farming training eligibility-ತರಬೇತಿಯಲ್ಲಿ ಭಾಗವಹಿಸಲು ಅರ್ಹತೆಗಳು:

  • ಅಭ್ಯರ್ಥಿಯ ವಯಸ್ಸು 19 ರಿಂದ 45 ವರ್ಷದ ಒಳಗಿರಬೇಕು.
  • ತರಬೇತಿಯನ್ನು ಪಡೆದ ಬಳಿಕ ಕುರಿ ಸಾಕಾಣಿಕೆಯನ್ನು ಮಾಡಲು ಇಚ್ಚೆಯನ್ನು ಹೊಂದಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಬಿಪಿಎಲ್ ಕಾರ್ಡು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ.

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್:

ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Application Link-ಅರ್ಜಿ ಸಲ್ಲಿಸಲು ಲಿಂಕ್- Apply now

ಇದನ್ನೂ ಓದಿ: Scholarship- SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ! ಶುಲ್ಕ ಮರುಪಾವತಿ ಅವಕಾಶ!

kuri sakanike

Documents For sheep farming training-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಪೋಟೋ
3) ರೇಶನ್ ಕಾರ್ಡ ಪ್ರತಿ
4) ಬ್ಯಾಂಕ್ ಪಾಸ್ ಬುಕ್ ಪ್ರತಿ
5) ಮೊಬೈಲ್ ನಂಬರ್

ಇತರೆ ಲಭ್ಯವಿರುವ ತರಬೇತಿಗಳ ವಿವರ ಹೀಗಿದೆ:

ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಜೂಟ್ ಬ್ಯಾಗ್ ತಯಾರಿಕೆ, ಕಾರು ಪಾಲನಾ ತರಬೇತಿ (UAV), ಸೋಲಾರ ಟೆಕ್ನಿಷಿಯನ್ ತರಬೇತಿ, ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ಟ್ರಾವಲ್ ಮತ್ತು ಟೂರಿಸ್ಟ್ ಗೈಡ್, ಮೊಬೈಲ್ ಪೋನ್ ದರಸ್ತಿಯ ತರಬೇತಿ, ದ್ವಿ ಚಕ್ರ ವಾಹನ ದುರಸ್ತಿಯ ತರಬೇತಿ, ಎಲೆಕ್ಟಿಕಲ್ ಮೊಟಾರ್ ರಿವೈಂಡಿಂಗ್, ರೆಫ್ರಿಜರೇಟರ್ ಹಾಗೂ ಎರ್ ಕಂಡಿಷನರ್ ರಿಪೇರಿ ತರಬೇತಿ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ. ಕೃಷಿ ಉದ್ಯಮಿ ತರಬೇತಿ, ಟಿವಿ ಟೇಕ್ನಿಷಿಯನ್, ಜೆ.ಸಿ.ಬಿ ಅಪರೇಟರ್ ತರಬೇತಿ. ಕಂಪ್ಯೂಟರ್ ಡಿ.ಟಿ.ಪಿ, ಕಂಪ್ಯೂಟರ್ ಅಕೌಂಟಿಂಗ್

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Sheep Farming Training Center-ತರಬೇತಿ ನಡೆಯುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ತರಬೇತಿ ಕೇಂದ್ರ, ವಿದ್ಯಾನಗರ, ಹಳಿಯಾಳ-581329
ಮೊಬೈಲ್ ನಂಬರ್- 8970145354, 9482188780, 9483485489

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: